Advertisement

ಲೈಕಾ ತೆಕ್ಕೆಗೆ ‘ಕಬ್ಜ’ತಮಿಳು ರೈಟ್ಸ್‌

02:02 PM Mar 09, 2023 | Team Udayavani |

ಪಂಚಭಾಷೆಗಳಲ್ಲಿ ಬಿಡುಗಡೆಯಾಗಿರುವ “ಕಬ್ಜ’ ಚಿತ್ರದ ಟ್ರೇಲರ್‌ಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಔಟ್‌ ಆ್ಯಂಡ್‌ ಔಟ್‌ ಮಾಸ್‌ ಅಂಶಗಳೊಂದಿಗೆ ಮೂಡಿಬಂದಿರುವ ಟ್ರೇಲರ್‌ ನೋಡಿ ಮಾಸ್‌ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಈಗ ಚಿತ್ರದ ತಮಿಳು ವಿತರಣೆಯ ಹಕ್ಕನ್ನು ಪ್ರತಿಷ್ಠಿತ ಸಂಸ್ಥೆ ಪಡೆದುಕೊಂಡಿದೆ.

Advertisement

ಈ ಮೂಲಕ ತಮಿಳು ನಾಡಿನಾದ್ಯಂತ ಕಬ್ಜ ಚಿತ್ರವನ್ನು ಪ್ರೇಕ್ಷಕರಿಗೆ ಒಪ್ಪಿಸುವ ಜವಾಬ್ದಾರಿಯನ್ನುಹೊತ್ತ ಲೈಕಾ ಪ್ರೂಡಕ್ಷನ್ಸ್‌ ಹೊತ್ತುಕೊಂಡಂತಾಗಿದೆ. ದಕ್ಷಿಣ ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಮತ್ತು ವಿತರಣ ಸಂಸ್ಥೆ ಲೈಕಾ.ಲೈಕಾ ಸಂಸ್ಥೆಯ ಮುಖ್ಯಸ್ಥ ಸುಭಾಷ್‌ ಕರಣ್‌ ಕಬ್ಜ ನೋಡಿ ಮೆಚ್ಚಿ ತಾವೇ ವಿತರಣೆ ಹಕ್ಕನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು, ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ ನಾಯಕರಾಗಿದ್ದು, ಸುದೀಪ್‌ ಹಾಗೂ ಶಿವರಾಜ್‌ಕುಮಾರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೇಯಾ ಶರಣ್‌ ಈ ಸಿನಿಮಾದ ನಾಯಕಿ. ಉಳಿದಂತೆ ತೆಲುಗು, ಹಿಂದಿ ಚಿತ್ರರಂಗದ ಪ್ರಮುಖ ನಟರು ಇಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next