Advertisement

ಚಂದ್ರ ಗ್ರಹಣ: ಅಚರಣೆ ಹೇಗೆ? ಇಲ್ಲಿದೆ‌ ಮಾಹಿತಿ

05:50 PM Nov 05, 2022 | Team Udayavani |

ಶಿರಸಿ: ನವೆಂಬರ್ 8ರಂದು‌ ನಡೆಯಲಿರುವ ಚಂದ್ರ ಗ್ರಹಣದ ಹಿನ್ನಲೆಯಲ್ಲಿ ಅದರ ಆಚರಣೆ ವಿಧಾನದ ಕುರಿತು ಕೊಳಗಿಬೀಸ್ ಮಾರುತಿ ದೇವಸ್ಥಾನದ ಪ್ರಧಾನ ಅರ್ಚಕ ವಿ. ಕುಮಾರ ಭಟ್ಟ ಮಾಹಿತಿ‌ ನೀಡಿದ್ದಾರೆ.

Advertisement

ಅಂದು ಸಂಜೆ 5.58 ರಿಂದ 6.19ರ ವರೆಗೆ ಚಂದ್ರ ಗ್ರಹಣ ಆಚರಣೆಯ ಪುಣ್ಯ ಕಾಲವಿದ್ದು ಈ ವೇಳೆಯಲ್ಲಿ ಸ್ನಾನ ಮಾಡಿ ಜಪ, ತರ್ಪಣ, ದಾನ ಇತ್ಯಾದಿಗಳಿಂದ ಆಚರಿಸಬೇಕು. ಗ್ರಹಣ ಪೂರ್ವ ದೇವರನ್ನು ಜಲಶಯನ ಮಾಡಬೇಕು ಎಂದು ಸೂಚಿಸಿದ್ದಾರೆ.

ಅಂದು ಬೆಳಗ್ಗೆ 9-15ರ ವರೆಗೆ ಭೋಜನದಿಗಳು ಶಾಸ್ತ್ರ ಸಮ್ಮತವಾಗಿ ಮಾಡಬಹುದು. ಅಶಕ್ತರು, ರೋಗಿಗಳು, ಮಕ್ಕಳು, ವೃದ್ದರು ಮಧ್ಯಾಹ್ನ 12-15ರ ವರೆಗೆ ಸೇವಿಸಬಹುದು. ದೇವಸ್ಥಾನಾದಿಗಳ ದಿಪೋತ್ಸವಗಳನ್ನು ಮೊದಲನೇ ದಿನವೇ ಆಚರಿಸುವುದು, ದೇವರನ್ನು ಜಲಾಧಿವಾಸ ಮಾಡುವ ಪರಿಪಾಠ ವಿರುವ ಮನೆಯಲ್ಲಿ ಮಧ್ಯಾಹ್ನ ಪೂಜೆಯ ನಂತರ ಜಾಲಾಧಿವಾಸ ಮಾಡುವುದು. ಗ್ರಹಣ ಮೋಕ್ಷದ ನಂತರ ಶುದ್ದಿಯಾಗಿ ಪುನಃ ಪೂಜೆ ಮಾಡಬೇಕು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next