Advertisement

ಚರ್ಮಗಂಟು ರೋಗಕ್ಕೆ 22 ಜಾನುವಾರು ಬಲಿ

03:07 PM Nov 29, 2022 | Team Udayavani |

ಮುಳಬಾಗಿಲು: ಜಾನುವಾರುಗಳಿಗೆ ಬಾದಿಸುವ ಚರ್ಮಗಂಟು ರೋಗದ ಕಡಿವಾಣಕ್ಕೆ ಸರ್ಕಾರಕ್ಕೆ ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿರುವಾಗ ಸ್ಥಳೀಯ ಪಶುಸಂಗೋಪನೆ ಇಲಾಖೆಯಲ್ಲಿ ವೈದ್ಯರ ಕೊರತೆಯಿಂದ ಚರ್ಮಗಂಟು ರೋಗಕ್ಕೆ ಇದು ವರೆಗೂ 22 ಜಾನುವಾರುಗಳು ಸಾವಿಗೀಡಾಗಿವೆ.

Advertisement

ಮುಳಬಾಗಿಲು ತಾಲೂಕಿನಲ್ಲಿ ಜಾನುವಾರು ಆರೋಗ್ಯ ಸಂರಕ್ಷಣೆಗಾಗಿ ಪಶುಸಂಗೋಪನೆ ಇಲಾಖೆ ವ್ಯಾಪ್ತಿ ಸಹಾಯಕ ನಿರ್ದೇಶಕ ಕಚೇರಿ, ಸಂಚಾರಿ ಘಟಕ ಒಳಗೊಂಡಂತೆ 23 ಪಶು ಆಸ್ಪತ್ರೆಗಳಿವೆ. ಅವುಗಳಲ್ಲಿ ಕಾರ್ಯನಿರ್ವಹಿಸಲು 8 ಮುಖ್ಯ ಪಶು ವೈದ್ಯರ ಹುದ್ದೆಗಳಿದ್ದು ಅವುಗಳ ಪೈಕಿ ಡಾ.ಅನುರಾದ ಸಹಾಯಕ ನಿರ್ದೇಶಕರಾಗಿದ್ದಾರೆ.

ಶಿವಶಂಕರ್‌ರೆಡ್ಡಿ ಮಲ್ಲನಾಯಕನಹಳ್ಳಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಇನ್ನು ಮುಖ್ಯ ಪಶು ವೈದ್ಯರಾದ ಡಾ.ಕೆ.ಸರ್ವೇಶ್‌ ನಿಯೋಜನೆ ಮೇರೆಗೆ ತಾ.ಪಂ. ಪ್ರಭಾರಿ ಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಇನ್ನುಳಿದ 5 ಹುದ್ದೆಗಳು ಖಾಲಿ ಇರುತ್ತದೆ. 7 ಹಿರಿಯ ಪಶು ವೈದ್ಯರ ಹುದ್ದೆಗಳ ಪೈಕಿ ಹೆಬ್ಬಣಿ ಗ್ರಾಮದ ಆಸ್ಪತ್ರೆಯಲ್ಲಿ ಅಲಿಯ ರಹಮಾನ್‌, ಬಲ್ಲ ಹರೀಶ್‌ಕುಮಾರ್‌, ರಾಯಲಮಾನದಿನ್ನೆ ಚೇತನ್‌ ಯಾದವ್‌ ಕೆಲಸ ಮಾಡುತ್ತಿದ್ದು, 4 ಹುದ್ದೆಗಳು ಖಾಲಿ ಇವೆ, 5 ಕಿರಿಯ ಪಶು ವೈದ್ಯರ ಹುದ್ದೆಗಳಲ್ಲಿ ಐವರು ಕಾರ್ಯನಿರ್ವಹಿಸುತ್ತಿದ್ದಾರೆ, ಅವರೊಂದಿಗೆ ಆಸ್ಪತ್ರೆ ಗಳಲ್ಲಿ ಇರುವ ಡಿ.ಗ್ರೂಪ್‌ ನೌಕರರು, ಕೆ.ಎಂ.ಎಫ್ ವೈದ್ಯರು ಮತ್ತು ಸಿಬ್ಬಂದಿಗಳು ಹಾಗೂ ವ್ಯಾಕ್ಸಿನೇಟರ್‌ ಗಳು ಮೂಲಕ ಜಾನುವಾರುಗಳಿಗೆ ಗೋಟ್‌ ಪಾಕ್ಸ್‌ ವ್ಯಾಕ್ಸಿನ್‌ ಹಾಕಿಸಲಾಗಿದೆ.

ಚರ್ಮಗಂಟು ಒಂದು ಸಾಂಕ್ರಾಮಿಕ ರೋಗ. ತಾಲೂಕಿನ 37,570 ಜಾನುವಾರುಗಳಲ್ಲಿ ಈ ರೋಗ ದ ಲಕ್ಷಣಗಳು ಕಂಡು ಬಂದಿದ್ದು, ಇರುವ ವೈದ್ಯರು ಮತ್ತು ಸಿಬ್ಬಂದಿಗಳೇ ಅವುಗಳನ್ನು ಪರೀಕ್ಷಿಸಿದಾಗ 596 ಜಾನುವಾರು ಗಳಲ್ಲಿ ಚರ್ಮಗಂಟು ದೃಢಪಟ್ಟಿದೆ. ಇರುವ ವೈದ್ಯರೇ ಚಿಕಿತ್ಸೆ ನೀಡಿದ್ದರಿಂದ 467 ಜಾನುವಾರು ಗಳು ರೋಗದಿಂದ ಗುಣವಾಗಿದ್ದು, 107 ಜಾನುವಾರುಗಳು ಇನ್ನೂ ರೋಗದಿಂದ ಬಳಲುತ್ತಿದ್ದು, 22 ಜಾನುವಾರು ಮೃತಪಟ್ಟಿವೆ. ಪಶು ಆಸ್ಪತ್ರೆಗಳಲ್ಲಿ ಖಾಲಿಯಿರುವ 7 ಹಿರಿಯ ಪಶು ವೈದ್ಯರ ಹುದ್ದೆಗಳ ಪೈಕಿ ಮೂವರು ಕಾರ್ಯನಿರ್ವಹಿಸುತ್ತಿದ್ದು, 4 ಹುದ್ದೆ ಖಾಲಿ ಇವೆ, 8 ಮುಖ್ಯ ಪಶು ವೈದ್ಯರ ಪೈಕಿ 5 ಹುದ್ದೆ ಖಾಲಿ ಇದ್ದು, ಇಬ್ಬರು ಮಾತ್ರವೇ ಕೆಲಸ ಮಾಡುತ್ತಿದ್ದಾರೆ. ಪ್ರ

ಸ್ತುತ ಇರುವ ಪ್ರತಿಯೊಬ್ಬ ವೈದ್ಯರಿಗೂ 2-3 ಆಸ್ಪತ್ರೆಗಳ ಹೆಚ್ಚುವರಿ ಹೊಣೆ ನೀಡಲಾಗಿದೆ. ಮಾರಕ ಚರ್ಮಗಂಟು ರೋಗದ ಜಾನುವಾರು ಗಳಿಗೆ ಕಾಲಕಾಲಕ್ಕೆ ಅಗತ್ಯ ಚಿಕೀತ್ಸೆ ದೊರೆಯದೇ ಸಾವಿಗೀಡಾಗುತ್ತಿರುವ ಇರುವ ವೈದ್ಯರಿಗೆ ಹೆಚ್ಚು ಕಾರ್ಯದೊತ್ತಡ ಸರ್ಕಾರ ನೀಡುತ್ತಿರುವುದು ಚರ್ಚೆಗೆ ಕಾರಣವಾಗಿದೆ.

Advertisement

ತಾಲೂಕಿನ ಪಶು ವೈದ್ಯಕೀಯ ಇಲಾಖೆಯಲ್ಲಿ ವೈದ್ಯರ ಕೊರತೆ ಯಿದ್ದರೂ ಕಡಿಮೆ ವೈದ್ಯರು ಮತ್ತು ಸಿಬ್ಬಂದಿಗಳಿಂದಲೇ ಜಾನು ವಾರುಗಳಲ್ಲಿ ಕಂಡು ಬಂದಿರುವ ಮಾರಕ ಚರ್ಮಗಂಟು ರೋಗದ ನಿಯಂತ್ರಣಕ್ಕೆ ಶಮಿಸಲಾಗುತ್ತಿದೆ. -ಡಾ.ಅನುರಾಧ ಪಶು ಇಲಾಖೆ ಸಹಾಯಕ ನಿರ್ದೇಶಕಿ

-ಎಂ.ನಾಗರಾಜಯ್ಯ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next