Advertisement

ಲುಲು ಮಾಲ್‌ನಲ್ಲಿ ನಮಾಜ್‌: ವಿವಾದದ ಬಳಿಕ ಪ್ರಕರಣ ಸುಖಾಂತ್ಯ

11:12 PM Jul 15, 2022 | Team Udayavani |

ಲಕ್ನೋ: ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿ ರುವ ಲುಲು ಮಾಲ್‌ನಲ್ಲಿ ನಮಾಜ್‌ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

Advertisement

ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಲುಲು ಮಾಲ್‌ ಆಡಳಿತ ಮಂಡಳಿ, ಇನ್ನು ಮುಂದೆ ಮಾಲ್‌ನೊಳಗೆ ಯಾವುದೇ ಧರ್ಮದ ಪ್ರಾರ್ಥನೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ಹೇಳಿದೆ.

ಮಾಲ್‌ನಲ್ಲಿ ಸರ್ವ ಧರ್ಮದವರ ಪ್ರಾರ್ಥನೆಗಾಗಿ ನಿರ್ಮಿಸಲಾಗಿರುವ ಪ್ರಾರ್ಥನಾ ಹಾಲ್‌ನಲ್ಲಿ ಇಸ್ಲಾಂ ಸಮುದಾಯದವರು ನಮಾಜ್‌ ಮಾಡುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿತ್ತು.

ಹಲವಾರು ಮಂದಿ, ಮಾಲ್‌ಗ‌ಳಲ್ಲಿ ನಮಾಜ್‌ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಪರಿಣಾಮ, ಟ್ವಿಟರ್‌ನಲ್ಲಿ ಬ್ಯಾನ್‌ ಲುಲು ಮಾಲ್‌ (ಲುಲು ಮಾಲ್‌ ಬಹಿಷ್ಕರಿಸಿ) ಎಂಬ ಹ್ಯಾಶ್‌ಟ್ಯಾಗ್‌ನಡಿ ಅಭಿಯಾನವೂ ಶುರುವಾಗಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next