Advertisement
“ನಾನು ಭಾರತೀಯ, ಉಗ್ರ ಮಗನ ದೇಹವನ್ನು ಮುಟ್ಟಲಾರೆ’ ಎಂದು ಸೈಫುಲ್ಲಾನ ಮೃತದೇಹವನ್ನು ತಂದೆ ಸರ್ತಾಜ್ ತಿರಸ್ಕರಿಸಿದ್ದರು. ಉ.ಪ್ರ. ಮತ್ತು ಮ.ಪ್ರ.ದಲ್ಲಿನ ಉಗ್ರರ ವಿರುದ್ಧದ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ರಾಜನಾಥ್ ಸಿಂಗ್, “ಸೈಫುಲ್ಲಾ ಶರಣಾಗತಿಗೆ ನಿರಾಕರಿಸಿದ ಕಾರಣಕ್ಕಾಗಿ ಎನ್‌ಕೌಂಟರ್ ಮಾಡಲಾಯಿತು. ಎರಡೂ ರಾಜ್ಯಗಳಲ್ಲಿ ಒಟ್ಟು 6 ಶಂಕಿತರನ್ನು ಬಂಧಿಸಲಾಗಿದೆ. ಕೇಂದ್ರ ಏಜೆನ್ಸಿ ಮತ್ತು ರಾಜ್ಯ ಪೊಲೀಸರ ನಡುವಿನ ಹೊಂದಾಣಿಕೆ ಇದ್ದರೆ ಉಗ್ರರನ್ನು ಹೇಗೆಲ್ಲ ಮಟ್ಟ ಹಾಕಬಹುದು ಎಂಬುದನ್ನು ಈ ಘಟನೆ ತೋರಿಸಿದೆ. ಉಭಯ ರಾಜ್ಯಗಳ ಪೊಲೀಸರು ಉಗ್ರರ ಜಾಡು ಹಿಡಿಯಲು ಅಪಾರ ಸಹಕರಿಸಿದರು. ರಾಷ್ಟ್ರೀಯ ಭದ್ರತೆ ಗಟ್ಟಿ ಆಗುವುದು ಇಂಥ ಸಂಬಂಧಗಳಿಂದಲೇ’ ಎಂದು ಪೊಲೀಸರ ಕಾರ್ಯವನ್ನು ಪ್ರಶಂಸಿಸಿದರು. ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದ್ದಾಗಿ ತಿಳಿಸಿದರು.
ಬಿಜೆಪಿ ಸರ್ಕಾರ ಮುಸ್ಲಿಮರನ್ನು ಕಡೆಗಣಿಸಿದ ಕಾರಣಕ್ಕೆ ಯುವಕರು ಉಗ್ರರಾಗುತ್ತಿದ್ದಾರೆ ಎಂದು ಟ್ವೀಟಿಸಿದ್ದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್‌ಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ತಿರುಗೇಟು ನೀಡಿದ್ದಾರೆ. “ದಿಗ್ವಿಜಯ್ ಬಹುಶಃ ಉಗ್ರತಜ್ಞ ಇದ್ದಿರಬಹುದು. ಆದರೆ, ನಾನಲ್ಲ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ 15 ವರ್ಷ ಅಧಿಕಾರದಲ್ಲಿದ್ದಾಗ 28 ಮಂದಿ ಅಮಾಯಕ ಮುಸ್ಲಿಮರನ್ನು ಜೈಲಲ್ಲಿಟ್ಟು ಹಿಂಸಿಸಿತ್ತು. ಕಾಂಗ್ರೆಸ್ ಆಡಳಿತದಲ್ಲಿ ದೇಶದಲ್ಲಿ ಇಂಥ ಹಲವು ಉದಾಹರಣೆ ಸಿಗುತ್ತವೆ. ಸೆಕ್ಯುಲರಿಸಂ ಅಂಗಡಿಯನ್ನು ಕಾಂಗ್ರೆಸ್ ಮುಚ್ಚಬೇಕು. ಬಿಜೆಪಿ ರಾಷ್ಟ್ರೀಯತೆಯ ಅಂಗಡಿ ನಡೆಸುವುದನ್ನು ನಿಲ್ಲಿಸಬೇಕು’ ಎಂದು ಕುಟುಕಿದ್ದಾರೆ.
Related Articles
– ಸರ್ತಾಜ್, ಉಗ್ರನ ತಂದೆ
Advertisement