Advertisement

ಐಪಿಎಲ್ ಮಿನಿ ಹರಾಜು: ಕನ್ನಡಿಗನನ್ನು ಕೈಬಿಡಲು ಮುಂದಾದ ಲಕ್ನೋ ಸೂಪರ್ ಜೈಂಟ್ಸ್

12:06 PM Nov 13, 2022 | Team Udayavani |

ಮುಂಬೈ: ಐಪಿಎಲ್ 2022 ರಲ್ಲಿ ಪಾದಾರ್ಪಣೆ ಮಾಡಿದ ಎರಡು ಹೊಸ ಫ್ರಾಂಚೈಸಿಗಳಲ್ಲಿ ಒಂದಾದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಎಲಿಮಿನೇಟರ್ ಪ್ರವೇಶ ಮಾಡಿತ್ತು. ಕೆಎಲ್ ರಾಹುಲ್ ನಾಯಕತ್ವದ ತಂಡವು ಆಡಿದ್ದ ತಮ್ಮ 14 ಪಂದ್ಯಗಳಲ್ಲಿ ಒಂಬತ್ತನ್ನು ಗೆದ್ದುಕೊಂಡಿತ್ತು.

Advertisement

ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲನುಭವಿಸಿ ಪಂದ್ಯಾವಳಿಯಿಂದ ಹೊರಬಿದ್ದರು. ಇದೀಗ 2023ರ ಸೀಸನ್ ಗಾಗಿ ಹೊಸ ಮುಖಗಳನ್ನು ಹುಡುಕುತ್ತಿರುವ ಫ್ರಾಂಚೈಸಿಯು ಕೆಲವರನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ತಂಡದಲ್ಲಿದ್ದ ಮನೀಷ್ ಪಾಂಡೆ, ಆ್ಯಂಡ್ರ್ಯೂ ಟೈ ಮತ್ತು ಅಂಕಿತ್ ರಜಪೂತ್ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡವು ಕಳೆದ ಬಾರಿ ಮನೀಷ್ ಪಾಂಡೆ ಅವರನ್ನು 4.6 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿತ್ತು. ಆದರೆ, ಕರ್ನಾಟಕದ ಬ್ಯಾಟರ್ ಕೂಟದಲ್ಲಿ ವಿಫಲರಾದರು. ಆರು ಪಂದ್ಯಗಳಲ್ಲಿ 110 ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 88 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು.

ಮಾರ್ಕ್ ವುಡ್ ಅವರ ಬದಲಿಗೆ ತಂಡ ಸೇರಿದ್ದ ವೇಗಿ ಆ್ಯಂಡ್ರ್ಯೂ ಟೈ ಅವರು ಕಳೆದ ಬಾರಿ ಮೂರು ಪಂದ್ಯವಾಡಿದ್ದರು. ಕೇವಲ ಎರಡು ವಿಕೆಟ್ ಕಿತ್ತಿದ್ದರು. ಉಳಿದಂತೆ ಭಾರತೀಯ ಬೌಲರ್ ಅಂಕಿತ್ ರಜಪೂತ್ ಅವರು ಯಾವುದೇ ಪಂದ್ಯದಲ್ಲಿ ಅವಕಾಶ ಪಡೆದಿರಲಿಲ್ಲ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next