Advertisement

ಎಲ್‌ಪಿಜಿ ಬೆಲೆ 2 ರೂ. ಏರಿಕೆ

06:00 AM Nov 10, 2018 | Team Udayavani |

ನವದೆಹಲಿ/ಲಂಡನ್‌: ಗೃಹಬಳಕೆ ಎಲ್‌ಪಿಜಿ ಬೆಲೆಯನ್ನು ಕೇಂದ್ರ ಸರ್ಕಾರ ಪ್ರತಿ ಸಿಲಿಂಡರ್‌ ಮೇಲೆ 2 ರೂ. ಏರಿಸಿದೆ. 

Advertisement

ಎಲ್‌ಪಿಜಿ ಡೀಲರುಗಳಿಗೆ ಕಮಿಷನ್‌ ಹೆಚ್ಚಳ ಮಾಡಿದ್ದರಿಂದಾಗಿ ಈ ಏರಿಕೆಯಾಗಿದೆ. 14.2 ಕಿಲೋ ಸಿಲಿಂಡರ್‌ ಮೇಲೆ ಡೀಲರುಗಳಿಗೆ 48.89 ರೂ. ಹಾಗೂ 5 ಕಿಲೋ ಸಿಲಿಂಡರ್‌ ಮೇಲೆ 24.20 ರೂ.ಗೆ ನಿಗದಿಪಡಿಸಲಾಗಿದೆ. ಇದನ್ನು ರೂ. 50.58 ಹಾಗೂ ರೂ. 25.29 ಕ್ಕೆ ಏರಿಕೆ ಮಾಡಲಾಗಿದೆ. ಕಮಿಷನ್‌ ಪರಿಷ್ಕರಣೆ ಸಂಬಂಧ ಅಧ್ಯಯನ ನಡೆಯುತ್ತಿದ್ದು, ಮಧ್ಯಂತರದ ಕ್ರಮವಾಗಿ ಈ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಹೇಳಿದೆ. 

ಈ ತಿಂಗಳಲ್ಲೇ ಇದು ಎರಡನೇ ಏರಿಕೆಯಾಗಿದ್ದು, ನವೆಂಬರ್‌ 1ರಂದು 2.94 ರೂ. ಏರಿಕೆ ಮಾಡಲಾಗಿತ್ತು. ಆಗ ಮೂಲ ಬೆಲೆಯ ಮೇಲೆ ಜಿಎಸ್‌ಟಿ ಅನ್ವಯಿಸಿದ್ದರಿಂದಾಗಿ ಬೆಲೆ ಏರಿಕೆಯಾಗಿತ್ತು. ಕಳೆದ ಜೂನ್‌ನಿಂದ ಈವರೆಗೆ ಪ್ರತಿ ಸಿಲಿಂಡರ್‌ ಮೇಲೆ ಒಟ್ಟು 16.21 ರೂ. ಏರಿಕೆಯಾಗಿದೆ.ಡೀಲರ್‌ ಕಮಿಷನ್‌ನಲ್ಲಿ ಎರಡು ಭಾಗವಿದ್ದು, ಸಾಂಸ್ಥಿಕ ಶುಲ್ಕ 30.08 ರೂ. ಹಾಗೂ ಡೆಲಿವರಿ ಶುಲ್ಕ 20.50 ರೂ. ಎಂದು ನಿಗದಿಸಲಾಗಿದೆ. ವಿತರಕರ ಸ್ಥಳದಿಂದ ತಾವೇ ಸಿಲಿಂಡರ್‌ ತೆಗೆದುಕೊಂಡು ಹೋದರೆ ಡೆಲಿವರಿ ಶುಲ್ಕ ಪಾವತಿಸಬೇಕಿಲ್ಲ.

ಕಚ್ಚಾತೈಲ ಬೆಲೆ ಇಳಿಕೆ: ಭಾನುವಾರ (ನ.11) ಅಬುಧಾಬಿಯಲ್ಲಿ ತೈಲ ಉತ್ಪಾದನೆ ರಾಷ್ಟ್ರಗಳ ಮುಖಂಡರ ಸಭೆಗೂ ಮುನ್ನ ಕಚ್ಚಾ ತೈಲ ಬೆಲೆ ಇಳಿಕೆ ಕಂಡಿದೆ. ಈ ವರ್ಷದ ಏಪ್ರಿಲ್‌ ನಂತರ ಮೊದಲ ಬಾರಿಗೆ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ  70 ಡಾಲರ್‌ಗಿಂತ ಕೆಳಕ್ಕೆ ಕುಸಿದಿದೆ. ಬೆಲೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತೈಲ ಉತ್ಪಾದನೆಯನ್ನು ಕಡಿಮೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ. ಕಳೆದ ಜನವರಿಯಲ್ಲಿ ಬ್ಯಾರೆಲ್‌ಗೆ 69.69 ಡಾಲರ್‌ಗೆ ಇಳಿದಿದ್ದ ಬೆಲೆ, ನಂತರ 100 ಡಾಲರ್‌ ವರೆಗೆ ಏರಿಕೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next