ನವ ದೆಹಲಿ : ದೇಶದಲ್ಲಿ ಮತ್ತೆ ಅಡುಗೆ ಅನಿಲ ದರ ಏರಿಕೆ ಕಂಡಿದೆ. ಇದು ಫೆಬ್ರವರಿ ತಿಂಗಳೊಂದರಲ್ಲಿ ಮೂರನೇ ಬಾರಿ ಕಂಡ ಏರಿಕೆಯಾಗಿದೆ.
ಗೃಹ ಬಳಕೆಯ ಎಲ್ ಪಿ ಜಿ ಸಿಲಿಂಡರ್ ವೊಂದಕ್ಕೆ 25 ರೂ. ಏರಿಕೆ ಮಾಡುವುದರ ಮೂಲಕ 769 ರೂ. ಇದ್ದ 14.2 ಕೆ.ಜಿ ಸಿಲಿಂಡರ್ ಬೆಲೆ 794ಕ್ಕೆ ಏರಿಕೆಯಾಗಿದೆ. ಈ ಹಿಂದೆ ಫೆಬ್ರವರಿ 4 ಮತ್ತು ಫೆಬ್ರವರಿ 14 ರಂದು ಅಡುಗೆ ಅನಿಲ ದರ ಏರಿಕೆಯಾಗಿತ್ತು.
ಓದಿ : ತನ್ನ ಹೊಸ ಆವೃತ್ತಿಯ ಸ್ವಿಫ್ಟ್ ಅನಾವರಣಗೊಳಿಸಿದ ಮಾರುತಿ ಸುಜುಕಿ :ಶೇರು ಟ್ರೇಡ್ ನಲ್ಲಿ ಏರಿಕೆ
ಕಳೆದ ಡಿಸೆಂಬರ್ ನಲ್ಲಿಯೂ ಕೂಡ ಎಲ್ ಪಿ ಜಿ ಗ್ಯಾಸ್ ದರ ಎರಡು ಬಾರಿ ಏರಿಕೆಯಾಗಿತ್ತು ಎನ್ನುವುದನ್ನು ನಾವು ನೆನಪಿಸಿಕೊಳ್ಳಬಹುದು. ಡಿಸೆಂಬರ್ 1 ರಂದು 594 ರೂ ಇದ್ದ ಗ್ಯಾಸ್ ಬೆಲೆ 644 ರೂ.ಗೆ ಏರಿಕೆಯಾಗಿತ್ತು. ಡಿಸೆಂಬರ್ 15 ರಂದು ಮತ್ತೆ ಅನಿಲ ದರ ಏರುವುದರ ಮೂಲಕ 694 ರೂ. ಗೆ ತಲುಪಿತ್ತು. ತಿಂಗಳೊಂದರಲ್ಲೇ 100 ರೂ. ಏರಿಕೆಯಾಗಿತ್ತು. ಜನವರಿಯಲ್ಲಿ ಸಬ್ಸಿಡಿ ರಹಿತ ಎಲ್ ಪಿ ಜಿ (14.2 ಕೆ.ಜಿ) ದರ 694 ರೂ. ಆಗಿತ್ತು.
ಸಾಮಾನ್ಯವಾಗಿ,ಅನಿಲ ಮಾರುಕಟ್ಟೆ ಕಂಪೆನಿಗಳು ಪ್ರತಿ ತಿಂಗಳ ಆರಂಭದಲ್ಲಿ ಹಾಗೂ 15ನೇ ತಾರೀಕಿನಂದು ದರ ಏರಿಕೆ ಮಾಡುತ್ತದೆ. ಫೆಬ್ರವರಿ 1 ರಂದು, ಬೆಲೆ ಏರಿಕೆ ಕಂಡಿರಲಿಲ್ಲ, ಆದರೂ ಫೆಬ್ರವರಿ 4 ರಂದು ದರ ಹೆಚ್ಚಳ ಮಾಡುವುದರ ಮೂಲಕ ಸಿಲಿಂಡರ್ ಗೆ 719 ರೂ.ಗೆ ಏರಿಕೆಯಾಗಿತ್ತು. 25 ರೂ.ಗಳ ಹೆಚ್ಚಳವಾಗಿದ್ದು, ಎನ್ನುವಲ್ಲಿಗೆ 10 ದಿನಗಳಲ್ಲಿ 50 ರೂ.ಗಳ ಹೆಚ್ಚಳವನ್ನು ಕಂಡಿದೆ.
ಓದಿ : ಫೆ.27 ಕ್ಕೆ ಧಾರವಾಡ ಕೃಷಿ ವಿವಿ 33ನೇ ಘಟಿಕೋತ್ಸವ: 990 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ