Advertisement

ಎಲ್‌ಪಿಜಿ ಸಿಲಿಂಡರ್‌ ದರ 3.50 ರೂ. ಏರಿಕೆ

09:28 PM May 19, 2022 | Team Udayavani |

ನವದೆಹಲಿ: ಅಡುಗೆ ಅನಿಲ ಮತ್ತಷ್ಟು ದುಬಾರಿಯಾಗಿದ್ದು, ಗುರುವಾರ ಸಿಲಿಂಡರ್‌ ದರ ಮತ್ತೆ 3.50 ರೂ. ಹೆಚ್ಚಳವಾಗಿದೆ.

Advertisement

ಪ್ರಸಕ್ತ ತಿಂಗಳಲ್ಲಿ ಆಗುತ್ತಿರುವ ಎರಡನೇ ಏರಿಕೆ ಇದಾಗಿದೆ. ಮೇ 7ರಂದು ಗೃಹೋಪಯೋಗಿ ಎಲ್‌ಪಿಜಿ ಸಿಲಿಂಡರ್‌ ದರವನ್ನು 50 ರೂ. ಏರಿಕೆ ಮಾಡಲಾಗಿತ್ತು. ಅದಕ್ಕೂ ಹಿಂದೆ ಮಾ.22ರಂದು ಕೂಡ 50ರೂ. ಹೆಚ್ಚಳ ಮಾಡಲಾಗಿತ್ತು.

ಗುರುವಾರದ ದರ ಪರಿಷ್ಕರಣೆಯಿಂದಾಗಿ ಬೆಂಗಳೂರಿನಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ದರ 1,005.50 ರೂ. ಆಗಿದೆ. ಡೆಲಿವರಿ ಶುಲ್ಕ ಸೇರಿದಂತೆ ಈ ದರ ಇನ್ನೂ 20-30 ರೂ. ಹೆಚ್ಚಳವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next