Advertisement

ಎಲ್ ಪಿ ಜಿ ಬುಕಿಂಗ್ ಆಫರ್ : ಪೇಟಿಎಮ್ ಹೊಸ ಆಫರ್..! ವಿಶೇಷತೆಗಳೇನು..?

11:19 AM Mar 28, 2021 | Team Udayavani |

ನವ ದೆಹಲಿ : ಪೇಟಿಎಮ್ (Paytm) ಆ್ಯಪ್ ತನ್ನ ಬಳಕೆದಾರರಿಗೆ ಹೊಸದೊಂದು ಆಫರ್ ನ್ನು ನೀಡುತ್ತಿದೆ. ಹೌದು, ಅಗ್ರ ಪಂಕ್ತಿಯ ಮನಿ ಟ್ರಾನ್ಸಾಕ್ಶನ್ ಆ್ಯಪ್ ಆಗಿರುವ ಪೇಟಿಎಮ್ ಆ್ಯಪ್ ಎಲ್ ಪಿ ಜಿ ಸಿಲಿಂಡ್ ರ್ ಕ್ಯಾಶ್ ಬ್ಯಾಕ್ ಆಫರ್ ವೊಂದನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ.

Advertisement

ವಿಶೇಷತೆಗಳೇನು..?

ನೀವೂ ಕೂಡ ಪೇಟಿಎಮ್ ನೀಡುತ್ತಿರುವ ಈ ಆಫರ್ ನ ಲಾಭವನ್ನು ಪಡೆದುಕೊಳ್ಳಲು  ಬಯಸುತ್ತಿದ್ದರೆ, ನಿಮ್ಮ ಬಳಿ ಪೇಟಿಎಮ್ ಆ್ಯಪ್ ಇರಬೇಕು. ಪೇಟಿಎಮ್ ಆ್ಯಪ್ ನಿಂದ ಒಂದು ವೇಳೆ ನೀವು ಮೊದಲ ಬಾರಿಗೆ ಸಿಲಿಂಡರ್ ಬುಕ್ ಮಾಡಿದರೆ, ಈ ಆಫರ್ ಅಡಿ ನೀವು 700 ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.

ಒಂದೊಮ್ಮೆ ನೀವು ಆಪ್ ಮೂಲಕ ಹಣವನ್ನು ಪಾವತಿಸಿದರೆ, ಸ್ಕ್ರೀನ್ ಮೇಲೆ ನಿಮಗೊಂದು ಸ್ಕ್ರ್ಯಾಚ್ ಕಾರ್ಡ್ ಪಾಪ್ ಅಪ ಆಗಿ ಕಾಣಿಸಿಕೊಳ್ಳುತ್ತದೆ. ಈ ಸ್ಕ್ರ್ಯಾಚ್ ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಿ ನೀವು ಕೊಡುಗೆಯನ್ನು ನೋಡಬಹುದಾಗಿದೆ.

ಓದಿ : ಸಚಿನ್ ಬಳಿಕ ಯೂಸುಫ್ ಪಠಾಣ್ ಗೂ ಕೋವಿಡ್ ಪಾಸಿಟಿವ್: ಆಟಗಾರರಿಗೆ ಶುರುವಾಯಿತು ಆತಂಕ

Advertisement

ಮಾರ್ಚ್ 31ರವರೆಗೆ ಮಾತ್ರ ಇರಲಿದೆ ಪೇಟಿಎಮ್ ನ ಈ ಆಫರ್ :

ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ 24 ಗಂಟೆಗಳೊಳಗೆ ನಿಮಗೆ ಸ್ಕ್ರ್ವಾಚ್ ಕಾರ್ಡ್ ಲಭ್ಯವಾಗಲಿದೆ. ಈ ಸ್ಕ್ರ್ಯಾಚ್ ಕಾರ್ಡ್ ಅನ್ನು 7 ದಿನಗಳ ಒಳಗೆ ಬಳಕೆ ಮಾಡಬೇಕು. ಇಲ್ಲಿ ಒಂದು ವೇಳೆ ನೀವು ಸ್ಕ್ರ್ಯಾಚ್ ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಲು ಮರೆತರೆ, ಕ್ಯಾಶ್ ಬ್ಯಾಕ್ ಆ್ಯಂಡ್ ಆಫರ್ಸ್  ಸೆಕ್ಷನ್ ಗೆ ಭೇಟಿ ನೀಡಿ ಅದನ್ನು ಪುನಃ ಬಳಕೆ ಮಾಡಿಕೊಳ್ಳಬಹುದಾಗಿದೆ.

ಈ ಕೊಡುಗೆ ಮಾರ್ಚ್ 31,2021ರವರೆಗೆ ಮಾತ್ರ ಲಭ್ಯವಿರಲಿದ್ದು, ಇನ್ನು, ಕೇವಲ ಎರಡೇ ಎರಡೇ ದಿನಗಳು ಮಾತ್ರ ಈ ಲಾಭವನ್ನು ಪಡೆದುಕೊಳ್ಳಲು ನಿಮಗೆ ಸಮಯಾವಕಾಶ ಇರಲಿದೆ.

ಹೇಗೆ ಈ ಲಾಭವನ್ನು ಪಡೆದುಕೊಳ್ಳಬಹದು..?

ನಿಮ್ಮ ಸ್ಮಾರ್ಟ್ ಫೋನಿನಲ್ಲಿರುವ ಪೇಟಿಎಮ್ ಆ್ಯಪ್ ನ್ನು ತೆರೆಯಿರಿ.  ನಂತರ ರೀ ಚಾಜ್ ಆ್ಯಂಡ್ ಪೇ ಬಿಲ್ಸ್ ಸೆಕ್ಷನ್ ಗೆ ಭೇಟಿ ನೀಡಿ.  ಅಲ್ಲಿ ನಿಮಗೆ ‘ಬುಕ್ ಅ ಸಿಲಿಂಡರ್’ ಆಪ್ಶನ್ ಕಾಣಿಸಿಕೊಳ್ಳುತ್ತದೆ. ಇಲ್ಲಿ ನೀವು ನಿಮ್ಮ ಎಲ್ ಪಿ ಜಿ ಸಿಲಿಂಡರ್ ಪೂರೈಕದಾರ ಕಂಪನಿಯನ್ನು ಆಯ್ಕೆ ಮಾಡಿ.  ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆ ಅಥವಾ ಎಲ್ ಪಿ ಜಿ ಐಡಿ ನಮೂದಿಸಿ.  ನಂತರ ನಿಮಗೆ ಪೇಮೆಂಟ್ ಮಾಡುವ ಆಪ್ಶನ್ ಕಾಣಿಸಿಕೊಳ್ಳುತ್ತದೆ. ಹಣ ಪಾವತಿಸುವ ಮೊದಲು ಆಫರ್ ಗೆ ಭೇಟಿ ನೀಡಿ. ಅಲ್ಲಿ ನಿಮಗೆ  ‘FIRSTLPG’ ಪ್ರೊಮೊ ಕೋಡ್ ಕಾಣಿಸಿಕೊಳ್ಳಲಿದೆ ಅದನ್ನು ನಮೂದಿಸಿ ಹಣ ಪಾವತಿ ಮಾಡಿದರೇ, ನೀವು 700 ರೂ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ.

ಓದಿ : ಕೋವೊವ್ಯಾಕ್ಸ್  ಸಪ್ಟೆಂಬರ್ ನಲ್ಲಿ ಬಳಕೆಗೆ ಲಭ್ಯ : ಪೂನವಾಲಾ

Advertisement

Udayavani is now on Telegram. Click here to join our channel and stay updated with the latest news.

Next