Advertisement
ಕೇರಳದಲ್ಲಿ ಕಳೆದೊಂದು ವಾರದಿಂದ ಮಳೆಯಾದ ಹಿನ್ನೆಲೆಯಲ್ಲಿ ಕಬಿನಿ ಜಲಾಶಯ ನೀರಿನ ಮಟ್ಟ ಏರಿಕೆ ಕಂಡಿದ್ದು, ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರನ್ನು ಕಪಿಲಾ ನದಿಗೆ ಹರಿ ಬಿಡಲಾಗಿದೆ. ಪರಿಣಾಮ ಮೈಸೂರು- ನಂಜನ ಗೂಡು ರಸ್ತೆ ಬಂದ್ ಆಗಿದೆ. ಅಪಾಯದ ಮಟ್ಟ ಮೀರಿ ಕಪಿಲಾ ನದಿ ಹರಿಯುತ್ತಿದ್ದು, ಮೈಸೂರು-ಊಟಿ ಹೆದ್ದಾರಿಗೆ ಕಪಿಲಾ ನದಿ ನೀರು ನುಗ್ಗಿದೆ. ಪರಿಣಾಮ ರಸ್ತೆ ಮೇಲೆ ಉಕ್ಕಿಹರಿಯುವ ನೀರಿನಲ್ಲೇ ವಾಹನಗಳು ಸಂಚರಿಸು ತ್ತಿವೆ. ನಂಜನಗೂಡು ತಾಲೂಕು ಮಲ್ಲನ ಮೂಲೆ ಮಠದ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ದ್ವಿಚಕ್ರ ವಾಹನಗಳು, ಕಾರು ಸೇರಿದಂತೆ ಎಲ್ಲಾ ವಾಹನ ಗಳು ಅಪಾಯದಲ್ಲಿಯೇ ಸಂಚರಿಸುವಂತಾಗಿದೆ.
Related Articles
Advertisement
ರಸ್ತೆ ಸಂಪರ್ಕ ಬಂದ್: ಪಿರಿಯಾಪಟ್ಟಣ ತಾಲೂಕಿನಲ್ಲಿ ಮಳೆ ತುಸು ಕಡಿಮೆಯಾಗಿದ್ದರೂ, ಕಾವೇರಿ ನದಿ ಆರ್ಭಟ ಮುಂದುವರಿದಿದೆ. ತಾಲೂಕಿನ ಆವರ್ತಿ-ಕೊಪ್ಪ, ದಿಂಡಗಾಡು-ಮುತ್ತಿನಮುಳು ಸೋಗೆ, ಕೊಪ್ಪ-ರಾಣಿಗೇಟ್ ಮಾರ್ಗದ ಸೇತುವೆಗಳು ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಬಂದ್ ಆಗಿದೆ. ಜೊತೆಗೆ ಕಾವೇರಿ ನದಿ ಪಾತ್ರದಲ್ಲಿದ್ದ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದ್ದು, 30ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.
ಕೇರಳ ವೈನಾಡಿನಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಕಬಿನಿ ಜಲಾ ಶಯಕ್ಕೆ ಒಳ ಹರಿವು ಸ್ವಲ್ಪ ಮಟ್ಟಿಗೆ ತಗ್ಗಿದೆ ಎಚ್.ಡಿ. ಕೋಟೆ ತಾಲೂಕಿ ನಲ್ಲಿ ಕಪಿಲಾ ನದಿ ತುಂಬಿ ಹರಿಯುತ್ತಿದ್ದು, ಬಿದರಹಳ್ಳಿ ಸರ್ಕಲ್- ಎನ್. ಬೇಗೂರು, ಮಾದಪುರ- ಕೆ.ಬೆಳ ತೂರು ಸಂಪರ್ಕ ರಸ್ತೆ ಬಂದ್ ಆಗಿದ್ದು, 25ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.