ಬೆಂಗಳೂರು: ರೈಲಿನಲ್ಲಿ ಅಕ್ರಮವಾಗಿ ಚಿನ್ನಾಭರಣಗಳನ್ನು ಸಾಗಿಸುತ್ತಿದ್ದ ಇಬ್ಬರು ಅಂತರಾಜ್ಯ ಕಳ್ಳರನ್ನು ಬಂಸಿರುವ ಕಂಟೋನ್ಮೆಂಟ್ ರೈಲ್ವೆ ಪೊಲೀಸರು 24 ಲಕ್ಷ ಮೌಲ್ಯದ 2.300 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ತಮಿಳುನಾಡಿನ ತಿರುಚ್ಚಿ ಗುಜಲಿ ಸ್ಟ್ರೀಟ್ ನಿವಾಸಿ ವೆಂಕಟೇಶ್ (50) ಮತ್ತು ವೈಟ್ ಪೆಟಲ್ ಸ್ಟ್ರೀಟ್‌ನ ಪಾಂಡಿಯನ್ (30) ಬಂತ ಆರೋಪಿಗಳು.
ಆರೋಪಿಗಳು ಕೆಲ ತಿಂಗಳಿಂದ ರೈಲಿನಲ್ಲಿ ಅಕ್ರಮವಾಗಿ ಚಿನ್ನಾಭರಣ ತಂದು ಸಿಟಿ ಮಾರ್ಕೆಟ್,ರಾಜಾ ಮಾರ್ಕೆಟ್‌ನಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ವಿಶೇಷ ತಂಡ ಸೋಮವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಸಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮುಂಜಾನೆ 5.30ರ ಸುಮಾರಿಗೆ ತಿರುಚ್ಚಿಯಿಂದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಬಂದ ಮೈಲಾಡತೊರೈ ಎಕ್ಸ್‌ಪ್ರೆಸ್ ರೈಲು ತಪಾಸಣೆ ವೇಳೆ ಆರೋಪಿಗಳು ಬ್ಯಾಗ್‌ಗಳನ್ನು ಅನುಮಾನಸ್ಪದವಾಗಿ ಕೊಂಡೊಯ್ಯುತ್ತಿದ್ದನ್ನು ಕಂಡ ರೈಲ್ವೆ ಪೊಲೀಸರು ಅವುಗಳನ್ನು ಪರಿಶೀಲಿಸಿದ್ದಾರೆ. ಆಗ ಇವರ ಬಳಿ ದಾಖಲೆ ಇಲ್ಲದ ಚಿನ್ನಾಭರಣಗಳು ಪತ್ತೆಯಾಗಿದ್ದವು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೆಂಗಳೂರಿನ ಸಿಟಿ ಮಾರುಕಟ್ಟೆಯಲ್ಲಿ ಕೆಲ ಚಿನ್ನಾಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಲು ಹೋಗುತ್ತಿರುವುದಾಗಿ ತಿಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತೆರಿಗೆ ವಂಚಿಸಲು ಈ ಮಾರ್ಗ: ಆರೋಪಿಗಳು ಚಿನ್ನಾಭರಣಗಳಿಗೆ ತೆರಿಗೆ ಕಟ್ಟದೇ ಸರ್ಕಾರಕ್ಕೆ ವಂಚನೆ ಮಾಡುವ ಸಲುವಾಗಿ ತಮಿಳುನಾಡಿನ ಚಿನ್ನಾಭರಣ ತಯಾರಿಕಾ ಘಟಕದಲ್ಲಿ ತಯಾರಾಗುವ ಕಡಿಮೆ ಗುಣಮಟ್ಟದ 14 ಕ್ಯಾರೆಟ್ ಚಿನ್ನಾಭರಣಗಳನ್ನು ಕಳ್ಳಸಾಗಣೆ ಮಾಡಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅಕ್ಷಯ ತೃತೀಯದಲ್ಲಿ 14 ಕ್ಯಾರೆಟ್ ಚಿನ್ನಾಭರಣಕ್ಕೆ ಗ್ರಾಹಕರಿಂದ ಬೇಡಿಕೆ ಇರಲಿದೆ. ಅದಕ್ಕಾಗಿಯೇ ರಾಜಾ ಮಾರ್ಕೆಟ್‌ನಲ್ಲಿರುವ ಚಿನ್ನಾಭರಣ ಮಳಿಗೆ ಮಾಲೀಕರು ಆಭರಣಗಳನ್ನು ತರುವಂತೆ ಸೂಚಿಸಿದ್ದರು ಎಂದು ಆರೋಪಿಗಳು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಗರದ ಕೆಲ ಮಳಿಗೆಗಳಲ್ಲಿ 14 ಕ್ಯಾರೆಟ್ ಚಿನ್ನ ಮಾರಾಟ: ಸಿಟಿ ಮಾರ್ಕೆಟ್, ರಾಜಾ ಮಾರ್ಕೆಟ್‌ನಲ್ಲಿರುವ ಕೆಲ ಚಿನ್ನಾಭರಣ ಮಳಿಗೆ ಮಾಲೀಕರು 14 ಕ್ಯಾರೆಟ್ ಚಿನ್ನವನ್ನು 24 ಕ್ಯಾರೆಟ್ ಚಿನ್ನವೆಂದು ನಂಬಿಸಿ ಗ್ರಾಹಕರಿಗೆ ಮೋಸ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಆರೋಪಿಗಳಿಗೆ ಸಂಪರ್ಕಿಸಿದ್ದ ವ್ಯಕ್ತಿಗಳನ್ನು ಸದ್ಯದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ರೈಲ್ವೆ ಅಕಾರಿಯೊಬ್ಬರು ತಿಳಿಸಿದ್ದಾರೆ.