Advertisement

ಲವ್ವಾದ್ರೆ ಒಪ್ಪಿಯೇ ವಿವಾಹ

12:30 AM Feb 14, 2019 | |

ಸೂರತ್‌: ಪ್ರತಿ ವರ್ಷದ ಫೆ. 14 ಎಂದರೆ ವಿಶ್ವ ಪ್ರೇಮಿಗಳ ದಿನ. ಅದರಲ್ಲೇನು ವಿಶೇಷ ಎಂದು ಕೇಳಬೇಡಿ. ಗುಜರಾತ್‌ನ ಸೂರತ್‌ನಲ್ಲಿರುವ 12ನೇ ತರಗತಿಯ10 ಸಾವಿರ ಮಂದಿ ವಿದ್ಯಾರ್ಥಿಗಳು ಗುರುವಾರ ವಿಶೇಷ ಪ್ರತಿಜ್ಞೆ ಮಾಡಲಿದ್ದಾರೆ. “ಒಂದು ವೇಳೆ ಅವರಿಗೆ ಮೊದಲ ನೋಟದಲ್ಲಿಯೇ ಪ್ರೇಮಾಂಕುರವಾದರೂ ಹೆತ್ತವರ ಒಪ್ಪಿಗೆ ಇಲ್ಲದೆ ಮದುವೆಯಾಗುವುದಿಲ್ಲ’ ಹೀಗೆಂದು ಅವರ ಪ್ರತಿಜ್ಞೆ ಇರಲಿದೆ. “ಹಾಸ್ಯಮೇವ ಜಯತೇ’ ಎಂಬ ಸಂಘಟನೆ 12 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ನಗೆ ತಜ್ಞ ಕಮಲೇಶ್‌ ಮಸಾಲ್‌ವಾಲಾ ಈ ಸಂಘಟನೆಯ ನೇತೃತ್ವ ವಹಿಸಿದ್ದಾರೆ. ಕಾರ್ಯಕ್ರಮ  ಬಗ್ಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರು ಏಕಾಏಕಿ ಪ್ರೇಮ ವಿವಾಹದ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ.ಮದುವೆಯಲ್ಲಿ ಹೆತ್ತವರ ಪ್ರಾಮುಖ್ಯದ ಬಗ್ಗೆ ಅರಿವು ಮೂಡಿಸುವುದೇ ಇದರ ಉದ್ದೇಶ ಎಂದು ಹೇಳಿದ್ದಾರೆ.

Advertisement

ಮೋದಿ ಫಾಲೋವರ್ಸ್‌ ಅನುರಾಗ, ವಿವಾಹ 
ಪ್ರಧಾನಿ ಮೋದಿ ಟ್ವಿಟರ್‌ ಅಭಿಮಾನಿಗಳು ದಾಂಪತ್ಯ ಜೀವನ ಪ್ರವೇಶ ಮಾಡಿದ್ದಾರೆ. ಶ್ರೀಲಂಕಾ ಮೂಲದ ಗೋವಿಂದ್‌ ಮಹೇಶ್ವರಿ (26) ಹಾಗೂ ಪಂಜಾಬ್‌ನ ಕುಚೊಡ್‌ ಗ್ರಾಮದ ಹಂಸಿನಿ ಸಿಂಘೆ (25) ಪ್ರಧಾನಿ ಟ್ವಿಟರ್‌ನಿಂದ  ಒಂದಾಗಿರುವ ಜೋಡಿ.  ಗೋವಿಂದ್‌ರ ಟ್ವೀಟ್‌ನ್ನು ಮೋದಿ ಲೈಕ್‌ ಮಾಡಿದ್ದು ಅನುರಾಗ ಮೂಡಲು ಕಾರಣವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next