ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ಅಭಿನಯ ಮಾಡಿದ್ದ ಲವ್ ಮಾಕ್ಟೇಲ್ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿ ಭಾರೀ ಜನಮೆಚ್ಚುಗೆ ಪಡೆದಿತ್ತು. ಇದರ ಬೆನ್ನಲ್ಲೆ ಕೃಷ್ಣ -ಮಿಲನಾ ಜೋಡಿ, ಲವ್ ಮಾಕ್ಟೇಲ್-2 ಸ್ಕ್ರಿಪ್ಟ್ ಪೂಜೆಯನ್ನು ನೆರವೇರಿಸಿದ್ದರು. ಇದೀಗ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಡಾರ್ಲಿಂಗ್ ಕೃಷ್ಣ ಗಡ್ಡಧಾರಿಯಾಗಿ ಮಿಂಚಿದ್ದಾರೆ.
ಈಗಾಗಲೇ ಕಥೆ-ಚಿತ್ರಕಥೆ ಬರೆದು ಮುಗಿದಿದ್ದು, ಕೋವಿಡ್ ಹಾವಳಿ ಕಡಿಮೆಯಾದ ನಂತರ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ. ಆದರೇ ಪಾತ್ರವರ್ಗದಲ್ಲಿ ಯಾರೆಲ್ಲಾ ಇದ್ದಾರೆ ಎಂಬುದು ಮಾತ್ರ ಸದ್ಯಕ್ಕೆ ಬಹಿರಂಗವಾಗಿಲ್ಲ. ಈ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡಲಿರುವುದಾಗಿ ನಟ ಡಾರ್ಲಿಂಗ್ ಕೃಷ್ಣ ಹೇಳಿದ್ದು ಕುತೂಹಲ ಹೆಚ್ಚಿಸಿದ್ದಾರೆ.
ಚಿತ್ರದ ಫೋಟೋಶೂಟ್ ಕಂಪ್ಲೀಟ್ ಆಗಿದ್ದು, ಈಗಾಗಲೇ ಬೇಕಾದ ಒಂದಷ್ಟು ದೃಶ್ಯಗಳ ಚಿತ್ರೀಕರಣವನ್ನೂ ಮಾಡಿಕೊಂಡಿದ್ದೇವೆ. 30ರಿಂದ 35 ದಿನಗಳಲ್ಲಿ ಚಿತ್ರೀಕರಣ ಮುಗಿಯಲಿದೆ ಎಂದು ನಟಿ-ನಿರ್ಮಾಪಕಿ ಮಿಲನಾ ನಾಗರಾಜ್ ತಿಳಿಸಿದ್ದಾರೆ.
Related Articles
ಲವ್ ಮಾಕ್ಟೇಲ್ ತಂಡವೇ ಇಲ್ಲೂ ಮುಂದುವರೆಯಲಿದ್ದು, ಸಂಗೀತ ನಿರ್ದೇಶಕ ರಘು ದೀಕ್ಷಿತ್, ಛಾಯಾಗ್ರಾಹಕ-ಸಂಕಲನಕಾರ ಶ್ರೀ ಈ ಚಿತ್ರದಲ್ಲೂ ಮುಂದುವರೆಯಲಿದ್ದಾರೆ. ಕೃಷ್ಣ ಮತ್ತು ಮಿಲನಾ ಅವರೇ ನಿರ್ಮಾಪಕರಾಗಿದ್ದಾರೆ ಎನ್ನಲಾಗಿದೆ.