Advertisement

ಟೈಟಲ್‌ ಟ್ರ್ಯಾಕ್‌ನಲ್ಲಿ ರಚ್ಚು ಮೆಚ್ಚು

05:19 PM Dec 03, 2021 | Team Udayavani |

ಕೃಷ್ಣ ಅಜೇಯ್‌ ರಾವ್‌ ಮತ್ತು ರಚಿತಾ ರಾಮ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಲವ್‌ ಯು ರಚ್ಚು’ ಚಿತ್ರದ ಎರಡು ಹಾಡುಗಳು ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತಿರುವಂತೆಯೇ, ಈಗ ಚಿತ್ರತಂಡ ಚಿತ್ರದ ಟೈಟಲ್‌ ಟ್ರ್ಯಾಕ್‌ ವಿಡಿಯೋವನ್ನು ಬಿಡುಗಡೆಗೊಳಿಸಿದೆ. ಬಹದ್ಧೂರ್‌ ಚೇತನ್‌ ಕುಮಾರ್‌ ಬರೆದಿರುವ “ಓಯ್‌ ಡಿಂಪಲ್‌ ಡಿಂಪಲ್‌ ಹುಡುಗಿ… ನಿನ್ನ ಡಾರ್ಲಿಂಗ್‌ ಅನ್ಬೋದಾ…’ ಎಂಬ ಈ ಹಾಡಿಗೆ ನವೀನ್‌ ಸಜ್ಜು ಧ್ವನಿಯಾಗಿದ್ದು, ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿಬಂದಿದೆ. ಡಿ. 1ರಂದು “ಲವ್‌ ಯು ರಚ್ಚು…’ ಚಿತ್ರದ ಈ ಟೈಟಲ್‌ ಟ್ರ್ಯಾಕ್‌ ಲಿರಿಕಲ್‌ ವಿಡಿಯೋ “ಆನಂದ ಆಡಿಯೋ’ ಯು-ಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

Advertisement

ಇನ್ನು “ಲವ್‌ ಯು ರಚ್ಚು’ ಟೈಟಲ್‌ ಟ್ರ್ಯಾಕ್‌ ವಿಡಿಯೋ ಹಾಡಿಗೆ ಸಾಮಾಜಿಕ ಜಾಲತಾಣಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಾಡು ಬಿಡುಗಡೆಯಾದ ಎರಡೇ ದಿನದಲ್ಲಿ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಕೆಲ ದಿನಗಳ ಹಿಂದಷ್ಟೇ “ಲವ್‌ ಯು ರಚ್ಚು’ ಚಿತ್ರದ ಸಿದ್ಧ್ ಶ್ರೀರಾಮ್‌ ಧ್ವನಿಯಲ್ಲಿ “ಮುದ್ದು ನೀನು… ಮುದ್ದು ನೀನು…’ ಮತ್ತು ಸಂಚಿತ್‌ ಹೆಗ್ಡೆ ಧ್ವನಿಯಲ್ಲಿ “ನೋಡುತಾ ನನ್ನನೇ…’ ಎಂಬ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಹಾಡುಗಳು ಸೂಪರ್‌ ಹಿಟ್‌ ಆಗಿವೆ. ಇದರ ಬೆನ್ನಲ್ಲೇ ಚಿತ್ರತಂಡ ಟೈಟಲ್‌ ಟ್ರ್ಯಾಕ್‌ ಅನ್ನು ಬಿಡುಗಡೆ ಮಾಡಿದೆ.

ಸದ್ಯ ಚಿತ್ರದ ಹಾಡುಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಮಾತನಾಡುವ ಚಿತ್ರತಂಡ, ಇಂದಿನ ಜನರೇಶನ್‌ ಸ್ಟೋರಿ ಸಿನಿಮಾದಲ್ಲಿರುವುದರಿಂದ, ಇಂದಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ “ಲವ್‌ ಯು ರಚ್ಚು’ ಹಾಡುಗಳು ಕೂಡ ಮೂಡಿಬಂದಿವೆ. ಹಾಡುಗಳು ಸಿನಿಮಾದ ಕಥೆಗೆ ಹಾಸುಹೊಕ್ಕಾಗಿವೆ. ಈಗಾಗಲೇ ಬಿಡುಗಡೆಯಾಗಿರುವ ಎಲ್ಲ ಹಾಡುಗಳಿಗೂ ಸಿನಿಪ್ರಿಯರ ಗಮನ ಸೆಳೆಯುತ್ತಿವೆ. ಹಾಡುಗಳಂತೆ ಸಿನಿಮಾ ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ಭರವಸೆಯ ಮಾತುಗಳನ್ನಾಡುತ್ತದೆ.

ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ ಡಿಸೆಂಬರ್‌ ಅಂತ್ಯದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ. ಶಂಕರ್‌ ಎಸ್‌ ರಾಜ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಲವ್‌ ಯು ರಚ್ಚು’ ಚಿತ್ರವನ್ನು “ಜಿ ಸಿನಿಮಾಸ್‌’ ಬ್ಯಾನರ್‌ನಲ್ಲಿ ಗುರು ದೇಶಪಾಂಡೆ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಶ್ರೀ ಕ್ರೇಜಿಮೈಂಡ್ಸ್‌ ಛಾಯಾಗ್ರಹಣ ಮತ್ತು ಸಂಕಲನವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next