ಸದ್ಯದ ಮಟ್ಟಿಗಂತೂ ಕನ್ನಡದಲ್ಲಿ ಇನ್ನೂ ಹೇಳಿಕೊಳ್ಳುವಷ್ಟರ ಮಟ್ಟಿಗೆ ವೆಬ್ ಸೀರಿಸ್ಗಳಿಗೆ ಮಾರುಕಟ್ಟೆ, ಪ್ರೇಕ್ಷಕ ವರ್ಗ ಸೃಷ್ಟಿಯಾಗಿಲ್ಲ. ಇವೆಲ್ಲದರ ನಡುವೆಯೂ ಇತ್ತೀಚೆಗೆ ಕನ್ನಡದಲ್ಲೂ ಅನೇಕ ಹೊಸ ಪ್ರತಿಭೆಗಳು ವೆಬ್ ಸೀರಿಸ್ನತ್ತ ಮುಖ ಮಾಡುತ್ತಿದ್ದು, ಒಂದಷ್ಟು ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ. ವೆಬ್ ಸೀರಿಸ್ಗಳ ಮಹತ್ವ ಅರಿತಿರುವ ಕನ್ನಡ ಹಲವು ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಇವುಗಳ ಬಗ್ಗೆ ಆಸಕ್ತಿ ತೋರಿಸುತ್ತಿರುವುದು, ಭವಿಷ್ಯದಲ್ಲಿ ಕನ್ನಡ ವೆಬ್ ಸೀರಿಸ್ಗಳಿಗೂ ದೊಡ್ಡ ಮಾರುಕಟ್ಟೆ, ಪ್ರೇಕ್ಷಕ ವರ್ಗ ಸೃಷ್ಟಿಯಾಗಲಿದೆ ಅನ್ನೋ ಭರವಸೆಯ ಮಾತುಗಳನ್ನಾಡುತ್ತಾರೆ.
ಸದ್ಯ ಜಿಯೋ ಸಿನಿಮಾ ಕನ್ನಡಲ್ಲಿ ವೆಬ್ ಸೀರಿಸ್ ಆರಂಭಿಸಿದೆ. ಅದರ ಮೊದಲ ಭಾಗವಾಗಿ ಲವ್ ಯೂ ಅಭಿ ಎಂಬ ಸಿರೀಸ್ ಶುರು ಮಾಡಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಹಾಗ ಅದಿತಿ ಪ್ರಭುದೇವ “ಲವ್ ಯೂ ಅಭಿ’ ಮೂಲಕ ವೆಬ್ ಸೀರೀಸ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಈ ಸೀರಿಸ್ ಪ್ರಸಾರ ಕಾಣುತ್ತಿದೆ. ಏಳು ಎಪಿಸೋಡ್ ಗಳನ್ನೊಂಡ ಈ ಸೀರಿಸ್ ಉಚಿತವಾಗಿ ನೋಡುವ ಅವಕಾಶವನ್ನು ಪ್ರೇಕ್ಷಕರಿಗೆ ಕಲ್ಪಿಸಿದೆ.
ಇದನ್ನೂ ಓದಿ:IPL Stories; ಆರ್ ಸಿಬಿ ನೆಟ್ ಬೌಲರ್, ಪಂತ್ ನೆರೆಮನೆಯಾತ…: ಯಾರು ಈ ಆಕಾಶ್ ಮಧ್ವಾಲ್
ಕಾಳಿ ವೇಲಾಯುಧಂ ನಿರ್ಮಾಣ ಮಾಡಿ, ನಿರ್ದೇಶಿಸಿರುವ “ಲವ್ ಯೂ ಅಭಿ’ ಸೀರಿಸ್ ನಲ್ಲಿ ವಿಕ್ರಮ್ ಶಿವ ಎಂಬ ಪಾತ್ರದಲ್ಲಿ ನಟಿಸಿದರೆ, ಅದಿತಿ ಅಭಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ವೆಬ್ ಸೀರಿಸ್ ಪ್ರೀತಿ, ಮೋಸ, ಸಂಶಯ ಜೊತೆಗೆ ಕೊಲೆಯೊಂದರ ಸುತ್ತ ಸಾಗುತ್ತದೆ. ಅಪಘಾತವೊಂದರಲ್ಲಿ ಗಂಡನ ಕಳೆದುಕೊಂಡಿರುವ ಅಭಿ, ಶಿವ ಎಂಬ ಬಿಝಿನೆಸ್ ಮ್ಯಾನ್ ಅನ್ನು ಎರಡನೇ ಮದುವೆಯಾಗಿ ತನ್ನ ಮಗುವಿನೊಂದಿಗೆ ಶ್ರೀಮಂತ ಕುಟುಂಬ ಸೇರುತ್ತಾಳೆ. ಅಭಿಯನ್ನು ಅತಿಯಾಗಿ ಪ್ರೀತಿಸುವ ಶಿವ ಆಕೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾನೆ. ಆದರೆ, ಅಭಿಯ ಮೊದಲ ಪತಿಯ ಸಾವು ಸಹಜ ಸಾವಲ್ಲ, ಅದೊಂದು ಕೊಲೆ ಎಂಬ ಸಂಶಯ ಪೊಲೀಸರಿಗೆ ಬಂದು ಕೇಸ್ ರೀ ಓಪನ್ ಆಗುತ್ತದೆ. ಅಲ್ಲಿಂದ ಕಥೆ ಟ್ವಿಸ್ಟ್ ಟರ್ನ್ನೊಂದಿಗೆ ಸಾಗುತ್ತದೆ.
Related Articles
ವೆಬ್ ಸೀರಿಸ್ನಲ್ಲಿ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮೀ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್ ರಾಜ್ ಹೀಗೆ ಅನುಭವಿ ಕಲಾವಿದರ ದಂಡೇ ಇದೆ. “ಲವ್ ಯು ಅಭಿ’ಗೆ ಅರುಣ್ ಬ್ರಹ್ಮ ಕ್ಯಾಮೆರಾ ಚಳಕವಿದ್ದು, ಪ್ರದಿಪ್ ರಾಘವ್ ಸಂಕಲನ ಮಾಡಿದ್ದಾರೆ. ನಿಜಿಲ್ ದಿನಕರ್ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ. ಅಭಿಲಾಷ್ ಗೌಡ ಮತ್ತು ಜಿ.ವಿ. ಸತೀಶ್ ಕುಮಾರ್ ಜಂಟಿಯಾಗಿ ಮಾತು ಪೋಣಿಸಿದ್ದಾರೆ.