Advertisement
ಅರ್ಪಿಸಿದೆ ತನುಮನ ನಿನಗೆ
Related Articles
Advertisement
ತುಂಬಿದೆ ನನ್ನಲಿ ನವೀರಾದ ಚೈತನ್ಯ
ನಿನ್ನ ಪ್ರೀತಿಜಪದಲ್ಲಿ ಆದೇನಾ ಧನ್ಯ
ಮಾಮರದ ಕೋಕಿಲ ಹೇಳಿದೆ ಹೆಸರ
ದೇಹದೊಳ ತುಂಬಿದೆ ಪ್ರೀತಿ ಉಸಿರ (2)
ನಿನ್ನ ನೋಡದ ಕ್ಷಣ ಕಕ್ಷೆಯೇ ನಿಂತಂತೆ
ನೀನು ನಗದೀರೆ ಚಂದ್ರಕಾಂತಿ ಇಲ್ಲವಂತೆ
ಓಡುವ ಮೋಡವು ಸುರಿದು ಮಳೆಯಾಗಿ
ಆ ಮಳೆಹನಿ ಹೇಳಿದೆ ಪ್ರೀತಿ ಸಾಕ್ಷಿಯಾಗಿ (3)
ಯಾವ ದೈವತ್ವಕೆ ಒಲಿವ ಒಲುವೆ ನೀ
ಕೊರೆವ ಚಳಿಯ ಮಂಜಿನ ಹನಿಯು ನೀ
ನಿನ್ನ ಚಲುವ ಬಿತ್ತರಿಸಿ ಕವಿಯಾದೆ
ಮತ್ತೆ ಮತ್ತೆ ಗೆಲ್ಲಲೆತ್ನಿಸಿ ಕಳೆದುಹೋದೆ (4)
ಪ್ಯಾರಿಸುತ, (ಪೊಲೀಸ್ ಇಲಾಖೆ)