ಬರೇಲಿ (ಉ.ಪ್ರ.): ಲವ್ ಜೆಹಾದ್‌ಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋ ಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಮೊದಲ ಪ್ರಕರಣದಲ್ಲಿ 24 ವರ್ಷದ ಮಹಿಳೆ ಯೊಬ್ಬರು ದೂರು ದಾಖಲಿಸಿದ್ದಾರೆ. “ಅಂಕಿತ್ ಎಂಬ ಹೆಸರಿನಲ್ಲಿ ನನಗೆ ಯುವಕ ಪರಿಚಯವಾದ. ಅನಂ ತರ ತಿಳಿಯಿತು ಆತನ ಹೆಸರು ಅಬಿದ್ ಎಂದು. ಮದುವೆ ಆಗುವ ಆಮಿಷವೊಡ್ಡಿ ನನ್ನ ಜತೆಗೆ ಲೈಂಗಿಕ ಸಂಬಂಧ ಬೆಳೆಸಿದ. ಅನಂತರ ಖಾಸಗಿ ವೀಡಿಯೋ ಗಳನ್ನು ಅಪ್‌ಲೋಡ್ ಮಾಡುತ್ತೇನೆ ಎಂದು ಬೆದರಿಸಿ, ಇಸ್ಲಾಂಗೆ ಬಲವಂತವಾಗಿ ಮತಾಂತರಿಸಿ, ಮದು ವೆಯಾದ. ಅಲ್ಲದೇ ನನಗೆ ಬಲವಂತವಾಗಿ ಮಾಂಸಾ ಹಾರ ತಿನ್ನುವಂತೆ ಮಾಡಲಾಯಿತು. ಆತನ ತಂದೆ ಯೊಂದಿಗೂ ಸಹ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸುತ್ತಿದ್ದ. ನನಗೆ ಥಳಿಸುತ್ತಿದ್ದ ಮತ್ತು ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಅಬಿದ್‌ನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.
ಮತ್ತೂಂದು ಪ್ರಕರಣದಲ್ಲಿ 20 ವರ್ಷದ ವಿದ್ಯಾ ರ್ಥಿಯೊಬ್ಬಳು ದೂರು ನೀಡಿದ್ದಾರೆ. “ಆನಂದ್ ಹೆಸರಿ ನಲ್ಲಿ ಮೊದಲಿಗೆ ನನ್ನನ್ನು ಪರಿಚಯಿಸಿಕೊಂಡ. ಆತ ನನ್ನನ್ನು ಒಂದು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆಯಾದ. ಕೆಲವು ತಿಂಗಳ ಅನಂತರ ತಿಳಿಯಿತು ಆತನ ಹೆಸರು “ಆಲಿಂ’ ಎಂದು. ನಾನು ಗರ್ಭಿ ಣಿಯಾದೆ. ಆದರೆ ಬಲವಂತವಾಗಿ ನನ್ನ ಗರ್ಭಪಾತ ಮಾಡಿಸಲಾಯಿತು. ನನ್ನನ್ನು ಒತ್ತಾಯ ಪೂರ್ವಕವಾಗಿ ಇಸ್ಲಾಂಗೆ ಮತಾಂತರಿಸಲಾಯಿತು ಎಂದು ಆರೋ ಪಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.