ಸೊರಬ: ಪ್ರೇಮ ವೈಫಲ್ಯದಿಂದ ಮನನೊಂದಿದ್ದ ಯುವಕನೊಬ್ಬ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಇದನ್ನೂ ಓದಿ:ಆಸ್ಕರ್ ಅವಾರ್ಡ್‌ಗೆ ಎಂಟ್ರಿಕೊಟ್ಟ ಭಾರತದ ‘ಚೆಲ್ಲೋ ಶೋʼ ಸಿನಿಮಾ
ಚಂದ್ರಗುತ್ತಿ ಗ್ರಾಮದ ನಿವಾಸಿ ಎಸ್. ಪ್ರವೀಣ್ (25) ಮೃತ ಯುವಕ.
ಈತ ಕಳೆದ ನಾಲ್ಕು ವರ್ಷಗಳ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆ ವಿವಾಹಕ್ಕೆ ನಿರಾಕರಿಸಿ, ಕಳೆದೊಂದು ವರ್ಷದಿಂದ ಸಂಪರ್ಕ ಕಡಿತಮಾಡಿಕೊಂಡಿದ್ದಳು. ಇದರಿಂದ ಪ್ರವೀಣ್ ಮನನೊಂದಿದ್ದ ಎನ್ನಲಾಗುತ್ತಿದೆ.
ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದ ಯುವಕ ಮಂಗಳವಾರ ಚಂದ್ರಗುತ್ತಿ ದೇವಸ್ಥಾನ ಸಮೀಪದ ಅಮ್ಮನ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ತೆರಳಿ, ಸ್ಥಳೀಯರ ಸಹಕಾರದೊಂದಿಗೆ ಮೃತ ದೇಹವನ್ನು ಮೇಲೆತ್ತಿದ್ದಾರೆ.
ಘಟನೆ ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.