Advertisement

ಎಲ್ಲರನ್ನು  ಪ್ರೀತಿ-ವಿಶ್ವಾಸದಿಂದ ಕಾಣಿ

05:40 PM Jul 27, 2018 | Team Udayavani |

ಜಮಖಂಡಿ: ಅಧಿಕಾರದ ಅವಧಿ ಅಲ್ಪವಾಗಿದ್ದು, ಅಧಿಕಾರದಲ್ಲಿದ್ದಾಗ ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಮನಸ್ಸನ್ನು ಗೆಲ್ಲುವಂತಹ ಸೇವೆ ಮಾಡದರೇ ಮಾತ್ರ ನಿಜವಾದ ಮಾನವೀಯತೆ, ಸಾಮಾಜಿಕ ಸೇವೆ ಸಲ್ಲಿದಂತಾಗುತ್ತದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು. ನಗರದ ತಾಪಂ ಸಭಾಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

Advertisement

ದೇಶದಲ್ಲಿ ಪ್ರತಿಯೊಬ್ಬರೂ ಸರ್ಕಾರಿ ನೌಕರರಾಗಲು ಸಾಧ್ಯವಿಲ್ಲ. ಲಭಿಸಿರುವ ನೌಕರಿಯನ್ನು ನಿಷ್ಠೆ, ಪ್ರಾಮಾಣಿಕತೆ, ಜನಸೇವೆ ಜನಾರ್ದನ ಸೇವೆ ಭಾವನೆಯಿಂದ ಕೆಲಸ ನಿರ್ವಹಿಸಬೇಕು. ನಾಡಿನ ಅರ್ಹ ಫಲಾನುಭವಿಗಳಿಗೆ ಸರ್ಕಾರ ಸೌಲಭ್ಯಗಳನ್ನು ಪ್ರಾಮಾಣಿಕತೆಯಿಂದ ತಲುಪಿಸುವ ಕೆಲಸ ನಡೆಯಬೇಕು. ಜನಪ್ರತಿನಿಧಿ ಗಳು ಜನರನ್ನು ನೋಡಿ ಮಾತನಾಡಬೇಕಾಗುತ್ತದೆ. ಅದನ್ನೇ ತಪ್ಪು ಭಾವಿಸದೇ ಸೂಕ್ತ ಕೆಲಸ ಮಾಡಬೇಕು. ನೌಕರ ಶಾಹಿಗಳು ಎಂದೂ ಜನರಿಗೆ ಕಿರುಕುಳ ನೀಡದೇ ಅವರನ್ನು ಗೌರವದಿಂದ ವರ್ತಿಸಿದಲ್ಲಿ ಜನರು ಕೂಡಾ ನಿಮ್ಮನ್ನು ಹೆಚ್ಚಿನ ಗೌರವ ನೀಡುತ್ತಾರೆ. ಪ್ರಾಮಾಣಿಕ ಸೇವಾ ಮನೋಭಾವವನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು. ಜೀವನದಲ್ಲಿ ಹಣ ಸಂಪಾದನೆವೊಂದೇ ಮುಖ್ಯವಲ್ಲ, ದುಡ್ಡಿನೊಂದಿಗೆ ಜನರ ಮನಸ್ಸನ್ನು ಗೆಲ್ಲುವುದು ಪ್ರಮುಖ್ಯವಾಗಿದೆ ಎಂದು ಹೇಳಿದರು.

ಸುಂದರ ನಾಡು ಕಟ್ಟುವಲ್ಲಿ ನೌಕರ ಶಾಹಿಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಸರ್ಕಾರಿ ಶಿಕ್ಷಕರು ಕೂಡಾ ಮಕ್ಕಳನ್ನು ದೇಶದ ಉತ್ತಮ ಪ್ರಜೆಯನ್ನಾಗಿಸುವ ಕಾಯಕದಲ್ಲಿ ಹೆಚ್ಚಿನ ಶ್ರಮವಹಿಸಬೇಕು. ಯಾರು ಕಾನೂನಿನ ಚೌಕಟ್ಟು ಮೀರಿ ಕೆಲಸ ಮಾಡಬಾರದು. ಜನಸೇವೆ ತೃಪ್ತಿಗಾಗಿಯಾದರೂ ಪ್ರಾಮಾಣಿಕವಾಗಿ ಸರ್ಕಾರಿ ಸೇವೆ ಸಲ್ಲಿಸಬೇಕು ಎಂದರು. ತಾಪಂ ಅಧಿಕಾರಿ ಎನ್‌.ವೈ. ಬಸರಿಗಿಡದ ಮಾತನಾಡಿ, ಗ್ರಾಮಿಣ ಪ್ರದೇಶದ ಜನತೆಯನ್ನು ಗೌರವದಿಂದ ಕಂಡು ಅವರಿಗೆ ಸಾಧ್ಯವಾದಷ್ಟು ಅದೇ ದಿನ ಅವರ ಕೆಲಸಗಳನ್ನು ಮಾಡಿಕೊಡಬೇಕು ಎಂದರು. ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪಿ.ಬಿ. ಅಜ್ಜನ್ನವರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ಬಸವರಾಜ ಬಾಗೆನ್ನವರ, ತಾಲೂಕಾಧ್ಯಕ್ಷ ಶಿವಾನಂದ ಹೂಗಾರ, ಉಮೇಶ ಜೋಶಿ, ಶಿಕ್ಷಣಾಧಿಕಾರಿ ವಿಜಯಕುಮಾರ ವಂದಾಲ ಇದ್ದರು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್‌.ಬಿ.ಬಿರಾದಾರ ಸ್ವಾಗತಿಸಿದರು. ಎಸ್‌.ಎಂ.ಹರಗೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next