Advertisement

ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಿ,  ಬದುಕು ಬದಲಿಸಿ

07:45 AM Mar 06, 2019 | |

ಓದಿಯೂ ಉದ್ಯೋಗ ಸಿಗಲಿಲ್ಲ ಎನ್ನುವವರಿಗೆ ಅಥವಾ ಉದ್ಯೋಗದಲ್ಲಿದ್ದುಕೊಂಡೇ ಮತ್ತೇನಾದರೂ ಮಾಡಬೇಕೆಂಬ ತುಡಿತವಿರುವವರಿಗೆ ಪ್ರಾಣಿ, ಪಕ್ಷಿಗಳ ಮೇಲೆ ಪ್ರೀತಿ ಇದ್ದರೆ  ಆದಾಯಕ್ಕೊಂದು ಅದು ಯಾವತ್ತಿಗೂ ತೆರೆದ ಬಾಗಿಲು.  ಪ್ರಾಣಿ, ಪಕ್ಷಿಗಳ ಮೇಲೆ ಪ್ರೀತಿ ಇದ್ದರೆ ಅವುಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬಹುದು, ಸಂಶೋಧನೆ ನಡೆಸಬಹುದು, ವೈಲ್ಡ್ ಲೈಫ್ಫೋ ಟೋಗ್ರಾಫ‌ರ್‌ ಆಗಬಹುದು. ಪ್ರಾಣಿ, ಪಕ್ಷಿಗಳಿಗೆ ಸಂಬಂಧಿಸಿದ ವಿಜ್ಞಾನ ಕೇಂದ್ರಗಳಲ್ಲಿ ಕೆಲಸ ಪಡೆಯಬಹುದು. ಇವಿಷ್ಟೇ ಅಲ್ಲದೆ ಸ್ವಂತವಾಗಿ ಕೃಷಿ ಸಂಬಂಧಿತ ಪ್ರಾಣಿ ಸಾಕಾಣಿಕೆಯಿಂದ ಉತ್ತಮ ಆದಾಯ ಗಳಿಸಬಹುದು.

Advertisement

ಮಾಂಸ, ಹಾಲು, ಮೊಟ್ಟೆ ಮತ್ತಿತರ ಉತ್ಪನ್ನಗಳಿಗಾಗಿ ಪ್ರಾಣಿಗಳನ್ನು ಸಾಕುವುದು ಒಂದು ವೃತ್ತಿಯಾಗಿ ಬೆಳೆದಿದೆ. ಇದಕ್ಕೆ ಸಂಬಂಧಿಸಿ ಲಕ್ಷಾಂತರ ರೂ. ವ್ಯವಹಾರಗಳು ಇಂದು ಮಾರುಕಟ್ಟೆಗಳಲ್ಲಿ ನಡೆಯುತ್ತಿವೆ. ಕುರಿ, ಕೋಳಿ, ಹಂದಿ, ಸಿಗಡಿ, ದನಗಳು ಮುಂತಾದವುಗಳ ಸಾಕಾಣಿಕೆ ಸ್ಥಳೀಯವಾಗಿಯೂ ದೊಡ್ಡ ಪ್ರಮಾಣದಲ್ಲಿ
ನಡೆಯುತ್ತಿವೆ. ಈ ಕಾರಣಗಳಿಂದಾಗಿ ಈ ಕ್ಷೇತ್ರದಲ್ಲಿ ಇಂದು ಸಾಕಷ್ಟು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿವೆ.

ಬೇಕಿರುವ ಕೌಶಲಗಳು
ಪ್ರಾಣಿಗಳಿಗೆ ಅನಾರೋಗ್ಯ ಅಥವಾ ಅವುಗಳು ಗಾಯಗೊಂಡಾಗ ಅವುಗಳ ಆರೈಕೆ ಮುಂತಾದವುಗಳನ್ನು ಮಾಡಬೇಕಿರುವುದರಿಂದ, ವೈಲ್ಡ್  ಲೈಫ್ ಫೋಟೋಗ್ರಾಫ‌ರ್‌, ಅವುಗಳ ಬಗ್ಗೆ ಸಂಶೋಧನೆ ಕಾರ್ಯಗಳನ್ನು ನಡೆಸಲು ಇಚ್ಛಿಸುವವರಿಗೆ ದೈಹಿಕ ಸಾಮರ್ಥ್ಯ ಬಹಳ ಮುಖ್ಯ. ಇದರ ಜತೆಗೆ ಅಕೌಂಟಿಂಗ್‌, ನಿರ್ವಹಣೆ ಮತ್ತು ಮಾರುಕಟ್ಟೆಯ ಬಗ್ಗೆ ಮಾಹಿತಿ, ಉತ್ತಮ ಸಂವಹನ ಕೌಶಲವಿರಬೇಕು.

ಶಿಕ್ಷಣ
ಪ್ರಾಣಿ ಸಾಕಾಣಿಕೆಯ ಕುರಿತಾಗಿಯೇ ಇಂದು ಹತ್ತು ಹಲವು ಕೋರ್ಸ್‌ಗಳು ಹುಟ್ಟಿಕೊಂಡಿವೆ. ಡಿಪ್ಲೊಮಾ ಇನ್‌ ಎನಿಮಲ್‌ ಹಸ್ಬೆಂಡರಿ, .ಎಸ್ಸಿ. ಇನ್‌ ಎನಿಮಲ್‌ ಹಸ್ಬೆಂಡರಿ ಡೈರಿಂಗ್‌, ಎಂ.ಎಸ್ಸಿ. ಇನ್‌ ಎನಿಮಲ್‌ ಹಸ್ಬೆಂಡರಿ ಡೈರಿಂಗ್‌ ಮುಂತಾದ ಶಿಕ್ಷಣವನ್ನು ಅನೇಕ ಸಂಸ್ಥೆಗಳು ನೀಡುತ್ತಿವೆ. ಸಂಶೋಧನೆ, ಫೋಟೋಗ್ರಾಫಿಯಂಥ ಕಲೆಗಳಿಗೆ ಬೇಕಿರುವ ಕೌಶಲಗಳನ್ನು ಅಂತರ್ಜಾಲದ ಮುಖೇನ ಪಡೆಯಬಹುದು. 

ತಾಳ್ಮೆ ಅಗತ್ಯ
ಪ್ರಾಣಿ, ಪಕ್ಷಿಗಳನ್ನು ಪ್ರೀತಿಸುವುದು ಒಂದು ಕಲೆ. ಅವುಗಳ ಮೌನ ಭಾಷೆಗಳನ್ನು ಅರಿತು ಅದಕ್ಕೆ ಸ್ಪಂದಿಸುವ ತಾಳ್ಮೆ ನಮ್ಮಲ್ಲಿದ್ದರೆ ಮಾತ್ರ ಪ್ರಾಣಿ, ಪಕ್ಷಿಗಳ ಕುರಿತಾಗಿ ಅಧ್ಯಯನ, ಸಂಶೋಧನೆಯಲ್ಲಿ ತೊಡಗಬಹುದು. ಜತೆಗೆ ವೈಲ್ಡ್ ಲೈಫ್ ಫೋಟೋಗ್ರಾಫ‌ರ್‌ ಕೂಡ ಆಗಬಹುದು. ಕಾಡುಮೇಡುಗಳಲ್ಲಿ ಅಲೆದಾಡಬೇಕಾದ ಈ ಉದ್ಯೋಗ ದಕ್ಕಿಸಿಕೊಳ್ಳಬೇಕಾದರೆ ದೈಹಿಕವಾಗಿ ಫಿಟ್ನೆ ಸ್‌ ಕಾಪಾಡಿಕೊಳ್ಳುವುದು ಬಹುಮುಖ್ಯ.

Advertisement

ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next