Advertisement

ಹೊರಬಂತು ಲವ್‌ 360 ಟ್ರೇಲರ್‌

01:21 PM May 04, 2022 | Team Udayavani |

ಶಶಾಂಕ್‌ ನಿರ್ದೇಶನದ “ಲವ್‌ 360′ ಸಿನಿಮಾದ ಮೊದಲ ಟ್ರೇಲರ್‌ ಅಕ್ಷಯ ತೃತೀಯಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದೆ.

Advertisement

“ಆನಂದ ಆಡಿಯೋ’ ಯು-ಟ್ಯೂಬ್‌ ಚಾನೆಲ್‌ನಲ್ಲಿ ಹೊರಬಂದಿರುವ “ಲವ್‌ 360′ ಸಿನಿಮಾದ ಟ್ರೇಲರ್‌ ಅನ್ನು ನಟ ಡಾಲಿ ಧನಂಜಯ್‌ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ನವ ಪ್ರತಿಭೆ ಪ್ರವೀಣ್‌ ನಾಯಕ ನಟನಾಗಿ “ಲವ್‌ 360′ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, ರಚನಾ ಇಂದರ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು “ಮನುಷ್ಯ ಹುಟ್ಟಿರೋದೆ ಹೋರಾಡೋಕೆ ಅಂತಾರೆ… ದುಡ್ಡಿಗೋಸ್ಕರ, ಆಸೆಗೋಸ್ಕರ, ಅಧಿಕಾರಕ್ಕೋಸ್ಕರ ಹೋರಾಟ ನಡಿತಾನೇ ಇದೆ. ಆದ್ರೆ ನನ್‌ ಹೋರಾಟ ನನ್‌ ಜಾನುಗೋಸ್ಕರ’ ಎಂಬ ಡೈಲಾಗ್ಸ್‌ ಟ್ರೇಲರ್‌ನಲ್ಲಿ ಗಮನ ಸೆಳೆಯುವಂತಿದ್ದು, ನಿರ್ದೇಶಕ ಶಶಾಂಕ್‌ “ಲವ್‌ 360′ ಮೂಲಕ ಮತ್ತೂಂದು ಲವ್‌ ಕಂ ಕ್ರೈಂ-ಥ್ರಿಲ್ಲರ್‌ ಸ್ಟೋರಿಯನ್ನು ತೆರೆಮೇಲೆ ಹೇಳುವ ಸುಳಿವನ್ನು ಟ್ರೇಲರ್‌ನಲ್ಲಿ ಬಿಟ್ಟುಕೊಟ್ಟಿದ್ದಾರೆ.

ಇದನ್ನೂ ಓದಿ: ಸಸ್ಪೆನ್ಸ್‌-ಕಾಮಿಡಿ ಟ್ರೇಲರ್‌ನಲ್ಲಿ ಅವತಾರ ಪುರುಷ ಕಮಾಲ್‌

Advertisement

“ಶಶಾಂಕ್‌ ಸಿನಿಮಾಸ್‌’ ಬ್ಯಾನರ್‌ನಲ್ಲಿ ಶಶಾಂಕ್‌ ಮತ್ತು ಡಾ. ಮಂಜುಳಾ ಮೂರ್ತಿ ನಿರ್ಮಿಸಿರುವ “ಲವ್‌ 360′ ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಸಿದ್ಧ್ ಶ್ರೀರಾಮ್‌, ಸಂಚಿತ್‌ ಹೆಗ್ಡೆ ಮೊದಲಾದ ಗಾಯಕರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಚಿತ್ರಕ್ಕೆ ಅಭಿಲಾಶ್‌ ಕಲಾತಿ ಛಾಯಾಗ್ರಹಣ, ಗಿರಿ ಮಹೇಶ್‌ ಸಂಕಲನವಿದೆ. ಸದ್ಯ ಬಿಡುಗಡೆಯಾಗಿರುವ “ಲವ್‌ 360′ ಟ್ರೇಲರ್‌ ಸೋಶಿಯಲ್‌ ಮೀಡಿಯಾದಲ್ಲಿ ನಿಧಾನವಾಗಿ ನೋಡುಗರ ಗಮನ ಸೆಳೆಯುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next