Advertisement

ಮುದ್ದು ಪ್ರೇಮಿಗಳ ಥ್ರಿಲ್ಲರ್‌ ಜರ್ನಿ: ಲವ್‌ 360ಯಲ್ಲಿ ಶಶಾಂಕ್‌ ಕನಸು

04:01 PM Aug 07, 2022 | Team Udayavani |

ಶಶಾಂಕ್‌ ನಿರ್ದೇಶನದ “ಲವ್‌ 360′ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಭರ್ಜರಿಯಾಗಿ “ಲವ್‌ 360′ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ಆ. 19ಕ್ಕೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ. ಈಗಾಗಲೇ ತನ್ನ ಟೀಸರ್‌ ಮತ್ತು ಹಾಡುಗಳ ಮೂಲಕ ಒಂದಷ್ಟು ಸದ್ದು ಮಾಡುತ್ತಿರುವ “ಲವ್‌ 360′ ಸಿನಿಮಾದ ಟ್ರೇಲರ್‌ ಅನ್ನು ಇತ್ತೀಚೆಗೆ ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Advertisement

ಇನ್ನು ಬಿಡುಗಡೆಯಾಗಿರುವ “ಲವ್‌ 360′ ಸಿನಿಮಾದ ಟ್ರೇಲರ್‌ನಲ್ಲಿ, ಒಂದು ಮುದ್ದಾದ ಯುವ ಜೋಡಿಯ ಲವ್‌ ಸ್ಟೋರಿಯ ಜೊತೆಗೆ ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ಅಂಶಗಳು ಇರುವುದನ್ನು ತೋರಿಸಲಾಗಿದೆ. ಲವ್‌, ಸೆಂಟಿಮೆಂಟ್‌, ಆ್ಯಕ್ಷನ್‌, ಎಮೋಶನ್ಸ್‌, ಕಾಮಿಡಿ ಎಲ್ಲದರ ಸಣ್ಣ ಝಲಕ್‌ ಅನ್ನು ಟ್ರೇಲರ್‌ನಲ್ಲಿ ಬಿಟ್ಟುಕೊಡಲಾಗಿದೆ. ಕಡಲ ತೀರದ ಸುಂದರ ಲೊಕೇಶನ್ಸ್‌, ಕಲಾವಿದರ ಅಭಿನಯ, ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಸಂಕಲನ, ಕಲರಿಂಗ್‌ ಮತ್ತಿತರ ಗುಣಮಟ್ಟದ ತಾಂತ್ರಿಕ ಕಾರ್ಯಗಳು ಟ್ರೇಲರ್‌ನಲ್ಲಿ ಗಮನ ಸೆಳೆಯುವಂತಿದೆ.

“ಲವ್‌ 360′ ಸಿನಿಮಾದಲ್ಲಿ ಯುವ ನಟ ಪ್ರವೀಣ್‌, ರಚನಾ ಇಂದರ್‌ ನಾಯಕ – ನಾಯಕಿಯಾಗಿ ಕಾಣಿಸಿಕೊಂಡಿದ್ದು, ಹೊಸ ಪ್ರತಿಭೆಗಳ ಕೆಮಿಸ್ಟ್ರಿ ತೆರೆಮೇಲೆ ವರ್ಕೌಟ್‌ ಆಗಿದೆ. ಉಳಿದಂತೆ ಗೋಪಾಲಕೃಷ್ಣ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ, ಕಾವ್ಯಾ ಶಾಸ್ತ್ರೀ, ಯಮುನಾ ಶ್ರೀನಿಧಿ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:ಚಿನ್ನದ ಪಂಚ್: ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಜಯಿಸಿದ ಅಮಿತ್ ಪಂಗಾಲ್, ನೀತು ಘಂಘಾಸ್

“ಲವ್‌ 360′ ಚಿತ್ರಕ್ಕೆ ಅಭಿಲಾಶ್‌ ಕಲಾತಿ ಛಾಯಾಗ್ರಹಣ, ಗಿರಿ ಮಹೇಶ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಿದ್ದು, ಸಿದ್ಧ್ ಶ್ರೀರಾಮ್‌, ಸಂಚಿತ್‌ ಹೆಗ್ಡೆ, ಕೀರ್ತನ್‌ ಹೊಳ್ಳ ಮೊದಲಾದ ಗಾಯಕರು ಧ್ವನಿಯಾಗಿದ್ದಾರೆ.

Advertisement

ಸದ್ಯ “ಆನಂದ್‌ ಆಡಿಯೋ’ ಯು-ಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ “ಲವ್‌ 360′ ಸಿನಿಮಾದ ಟ್ರೇಲರ್‌ ಸೋಶಿಯಲ್‌ ಮೀಡಿಯಾದಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. “ಲವ್‌ 360′ ಸಿನಿಮಾದ ಟ್ರೇಲರ್‌ ಮತ್ತು ಹಾಡುಗಳನ್ನು ನೋಡಿದ ಚಿತ್ರರಂಗದ ಮಂದಿ ಮತ್ತು ಸಿನಿಪ್ರಿಯರು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next