ಚಂಡೀಗಢ: ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ20 ರಾಷ್ಟ್ರಗಳ ಶೃಂಗಸಭೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದ ಲಾಂಛನದ ಕುರಿತು ಕೆಲವರು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಹರ್ಯಾಣದ ಝಜ್ಜರ್‌ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, “ಪ್ರಧಾನಿ ಮೋದಿ ಜಿ20 ಲಾಂಛನ ಬಿಡುಗಡೆಗೊಳಿಸಿದರು. ಲಾಂಛನದಲ್ಲಿ ಕಮಲ ಇದೆ. ಕೆಲವರು ಅದು ಬಿಜೆಪಿ ಚಿಹ್ನೆ ಎನ್ನುತ್ತಿದ್ದಾರೆ. ಆದರೆ ಇದಕ್ಕೂ ಒಂದು ಮಿತಿ ಇದೆ. ಭಾರತದ ಸಂಸ್ಕೃತಿಯ ಪ್ರತೀಕವಾಗಿರುವ ಕಮಲವನ್ನು 1950ರಲ್ಲೇ ರಾಷ್ಟ್ರೀಯ ಪುಷ್ಪವಾಗಿ ಘೋಷಿಸಲಾಯಿತು,’ ಎಂದು ಹೇಳಿದರು.
“1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳು ಒಂದು ಕೈಯಲ್ಲಿ ಕಮಲ ಮತ್ತು ಒಂದು ಕೈಯಲ್ಲಿ ರೊಟ್ಟಿ ಹಿಡಿದುಕೊಂಡು ಹೋರಾಡಿದರು. ಕಮಲ ನಮ್ಮ ದೇಶದ ರಾಷ್ಟ್ರೀಯ ಪುಷ್ಪ ಎಂಬುದನ್ನೇ ನಾವು ಮರೆಯಬೇಕೇ,’ ಎಂದು ಟೀಕಾಕಾರರ ವಿರುದ್ಧ ಕಿಡಿಕಾರಿದರು.