Advertisement
ಪಟ್ಟಣವು ಅಭಿವೃದ್ಧಿಯ ಪಥದತ್ತ ಸಾಗದೇ, ಅಭಿವೃದ್ಧಿ ಕೆಲಸ-ಕಾರ್ಯಗಳು ಕುಂಟುತ್ತಾ ಆಮೆ ವೇಗದಲ್ಲಿ ಸಾಗಿರುವುದರಿಂದ ಕೆ.ಆರ್.ಪೇಟೆಯು ಧೂಳುಪೇಟೆಯಾಗಿ ಬದಲಾಗಿದ್ದು ರೋಗ- ರುಜಿನಗಳನ್ನು ಹರಡುವ ತಾಣವಾಗಿದೆ.
Related Articles
Advertisement
ಗುಂಡಿಮಯವಾದ ರಸ್ತೆಗಳು: ಕೆ.ಆರ್.ಪೇಟೆ ಪಟ್ಟಣದ ಪ್ರಮುಖ ಅಡ್ಡ ರಸ್ತೆಗಳಾಗಿರುವ ಹಳೇ ಮತ್ತು ಹೊಸ ಕಿಕ್ಕೇರಿ ರಸ್ತೆಗಳು ಸಂಪೂರ್ಣವಾಗಿ ಗುಂಡಿ ಬಿದ್ದು ಹಾಳಾಗಿರುವುದರಿಂದ ಗುಂಡಿ ಮಯ ವಾದ ರಸ್ತೆಗಳಲ್ಲಿ ವಾಹನಗಳು ಧೂಳೆಬ್ಬಿಸಿ ಕೊಂಡು ಓಡಾಡುತ್ತಿರುವುದರಿಂದ ಸಾರ್ವ ಜನಿಕರು ಹಾಗೂ ರಸ್ತೆ ಅಕ್ಕಪಕ್ಕದ ನಿವಾಸಿಗಳು ಅನಿವಾರ್ಯವಾಗಿ ಧೂಳು ಕುಡಿದು ಹಲವು ರೋಗ ಗಳಿಗೆ ತುತ್ತಾಗಿ ನರಳುತ್ತಿದ್ದಾರೆ. ಜನ ಸಾಮಾ ನ್ಯರ ಆರೋಗ್ಯದ ಜೊತೆ ಚೆಲ್ಲಾಟ ವಾಡಿ ಕೊಂಡು ಕಳಪೆ ಕಾಮಗಾರಿ ನಡೆಸಿ ಕೆಲಸ ಸಂಪೂ ರ್ಣ ಗೊಳಿಸದೇ ಬೇಜವಾಬ್ದಾರಿಯಿಂದ ವರ್ತಿ ಸುತ್ತಿರುವ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಪ್ಪುಪಟ್ಟಿಗೆ ಸೇರಿಸಬೇಕು ಎಂಬುದು ಪಟ್ಟಣದ ನಾಗರಿಕರ ಒತ್ತಾಯವಾಗಿದೆ.
ಪುರಸಭೆಯಲ್ಲಿ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ, ಮುಖ್ಯಾಧಿಕಾರಿಗಳ ಹುದ್ದೆ ಖಾಲಿ ಇದ್ದು, ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಯಾರೂ ಕೂಡಾ ನಗರ ಅಭಿವೃದ್ಧಿಯ ಕಡೆ ಗಮನ ಹರಿಸುತ್ತಿಲ್ಲ ಎಂಬುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರೋತ್ಥಾನ ಯೋಜನೆ ಅಡಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ಟೆಂಡರ್ ಪ್ರಕ್ರಿಯೆ ಮುಗಿದು. ಅರ್ಧಂಬರ್ಧ ಕಾಮಗಾರಿ ನಡೆಸಿ ಕೈಚೆಲ್ಲಿ ಕುಳಿತಿರುವ ಗುತ್ತಿಗೆದಾರನಿಂದ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ದೂಳಿನ ವಾತಾವರಣ ಹೋಗಲಾಡಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು.–ಕೆ.ಎಸ್.ಸುರೇಶ್‌ಕುಮಾರ್, ಹಿರಿಯ ನಾಗರಿಕರ ವೇದಿಕೆ ಪ್ರಧಾನ ಕಾರ್ಯದರ್ಶಿ
ಹಳೆ ಹಾಗೂ ಹೊಸ ಕಿಕ್ಕೇರಿ ರಸ್ತೆಗಳು ಕೆ.ಆರ್.ಪೇಟೆ ಪಟ್ಟಣದ ಜನದಟ್ಟಣೆಯ ಪ್ರಮುಖ ರಸ್ತೆಗಳಾಗಿವೆ. ಪುರಸಭೆಯ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿ ಆದಷ್ಟು ಜಾಗ್ರತೆಯಾಗಿ ರಸ್ತೆ ಕೆಲಸವನ್ನು ಸಂಪೂರ್ಣಗೊಳಿಸಿ ಶ್ರೀಸಾಮಾನ್ಯರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.–ಡಿ.ಪ್ರೇಮಕುಮಾರ, ಪುರಸಭಾ ಸದಸ್ಯ
-ಅರುಣ್ ಕುಮಾರ್