Advertisement
ನೀನೋ ಫಸ್ಟ್‌ರ್‍ಯಾಂಕ್ ಹುಡುಗಿ. ನಾನು ಲಾಸ್ಟ್ ಬೆಂಚ್ ಹುಡುಗ. ಹೀಗಿದ್ದರೂ, ಅದು ಹೇಗೆ ನಮ್ಮಿಬ್ಬರ ಮಧ್ಯೆ ಪ್ರೀತಿ ಟಿಸಿಲೊಡೆಯಿತೋ ನಾ ಕಾಣೇ ! ಮರೆತೆಯೇನು? ಮಳೆಯಲಿ ಕೈ ಹಿಡಿದು, ಒಂದೇ ಛತ್ರಿಅಡಿಯಲ್ಲಿ ಜೊತೆ ಜೊತೆಯಾಗಿ ನಡೆದದ್ದು ನೆನಪಾಗಲಿಲ್ಲವೇ, ನಿನಗೋಸ್ಕರ ಪ್ರಿನ್ಸಿಪಾಲರ ಹತ್ತಿರ ಜಗಳ ಮಾಡಿದ್ದೆನಲ್ಲ; ಅದನ್ನು ಇಷ್ಟು ಬೇಗ ಮರೆತೆಯಾ? ದಿಡೀರನೆ ಬದಲಾದ ನೀನು ಅವನ್ಯಾರೋ, ನಾನ್ಯಾರೋ ಅಂತ ನನ್ನ ಬಗ್ಗೆ ನಿನ್ನ ಗೆಳತಿಗೆ ಹೇಳುತ್ತಿದ್ದ ಮಾತು ಬರ ಸಿಡಿಲಂತೆ ಕಿವಿಗಪ್ಪಳಿಸಿ, ಈ ಹೃದಯಕ್ಕೆ ಗಾಯವಾಯಿತು.
ಓ ಕಾರಣ ಅದೇನಾ? ಆ ಬಗ್ಗೆ ಹೇಳ್ತೀನಿ. ಆವತ್ತು ಅಪರೂಪಕ್ಕೆ ಗೆಳೆಯರೊಂದಿಗೆ ಊರಲ್ಲಿದ್ದೆ . ಅಲ್ಲೋ ನೆಟ್‌ವರ್ಕ್ ಸಮಸ್ಯೆ. ಆ ಒಂದು ದಿನ ನಿನಗೆ ಮೆಸೇಜ್, ಕಾಲ್ ಮಾಡಿಲಾಗಲಿಲ್ಲ. ಚಡಪಡಿಕೆ ನನಗೂ ಇತ್ತು. ಇಷ್ಟಕ್ಕೇ ಈ ಹಠಮಾರಿತನವೇ? ಮೆಸೇಜ್ ಕಾಲ್ ಮಾಡುತ್ತಿದ್ದರೆ ಮಾತ್ರ ಪ್ರೀತಿಯೇನು..? ನೀನು ನಿಮ್ಮೂರಿಗೆ ಹೋದಾಗ ವಾರಗಟ್ಟಲೇ ಕಾಲ್, ಮೇಸೆಜ್ ಮಾಡುತ್ತಿರಲಿಲ್ಲ.
ಮನೆಯಲ್ಲಿ ಅಪ್ಪ ತುಂಬಾ ಸ್ಟ್ರಿಕ್ಟ್ ಅನ್ನುತ್ತಿದ್ದೆ. ನಾನು ಎಂದಾದರೂ ಅದರ ಬಗ್ಗೆ ಮಾತನಾಡಿದ್ದೆನಾ..? ಹೇಳು. ಯಾರೇ ಕರೆ ಮಾಡಿದರೂ, ಅದರಲ್ಲಿ ನಿನ್ನ ದನಿ ಹುಡುಕಲು ಹೃದಯ ಬಡಬಡಿಸುತ್ತದೆ.
Related Articles
Advertisement
ನಿನಗೆ, ನಿನ್ನ ಪ್ರೀತಿಗಾಗಿ, ನಿನ್ನ ದನಿಗಾಗಿ, ನಿನ್ನ ಒಲವಿಗಾಗಿ ಕಾಯುವುದರಲ್ಲೂ ಒಂಥರಾ ಖುಷಿ ಇದೆ.
ಬಸನಗೌಡ ಪಾಟೀಲ