Advertisement

ಯುದ್ಧದಿಂದ ನಷ್ಟವೇ ವಿನಾ ಲಾಭವಿಲ್ಲ: ಜರ್ಮನಿಯಲ್ಲಿ ಪ್ರಧಾನಿ ಮೋದಿ

08:33 AM May 03, 2022 | Team Udayavani |

ಬರ್ಲಿನ್‌: ಭಾರತ ಸದಾ ಶಾಂತಿಯ ಪರ. ಸದ್ಯ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಗೆಲ್ಲುವವರು ಯಾರೂ ಇಲ್ಲ. ಸಂಘರ್ಷದಿಂದ ಎಲ್ಲರಿಗೂ ನಷ್ಟವೇ ವಿನಾ ಲಾಭವಿಲ್ಲ…

Advertisement

– ಎರಡೂ ದೇಶಗಳ ನಡುವಿನ ಯುದ್ಧ ವಿಚಾರ ದಲ್ಲಿ ಆರಂಭದಿಂದಲೂ ಅಲಿಪ್ತ ನೀತಿಯನ್ನು ಪಾಲಿ ಸಿರುವ ಭಾರತದ ನಿಲುವನ್ನು ಮತ್ತೂಮ್ಮೆ ಸಮರ್ಥಿಸಿ ಕೊಂಡು ಪ್ರಧಾನಿ ಮೋದಿ ಆಡಿರುವ ಮಾತಿದು.

ಮೂರು ದಿನಗಳ ಯುರೋಪ್‌ ಪ್ರವಾಸದ ಮೊದಲ ದಿನವಾದ ಸೋಮವಾರ ಬೆಳಗ್ಗೆ ಬರ್ಲಿನ್‌ ತಲುಪಿದ ಮೋದಿ ಅವರು, ಜರ್ಮನಿ ಪ್ರಧಾನಿ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಸುದೀರ್ಘ‌ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ಉಭಯ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಮೋದಿ, ಉಕ್ರೇನ್‌ ಬಿಕ್ಕಟ್ಟು ಆರಂಭವಾದಾಗಲೇ ಭಾರತವು ಕೂಡಲೇ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿತ್ತು.

ಮಾತುಕತೆಯೇ ಬಿಕ್ಕಟ್ಟು ಪರಿಹಾರಕ್ಕಿರುವ ಮಾರ್ಗ ಎಂದು ಹೇಳಿತ್ತು. ಸಂಘರ್ಷದ ಪರಿಣಾಮವೆಂಬಂತೆ ತೈಲ ದರ ಗಗನಕ್ಕೇರಿದೆ. ಆಹಾರ ಧಾನ್ಯಗಳು, ರಸಗೊಬ್ಬರಗಳ ಕೊರತೆ ಉಂಟಾಗಿದೆ. ಇದರಿಂದ ಜಗತ್ತಿನ ಪ್ರತಿ ಕುಟುಂಬಕ್ಕೂ ಹೊರೆಯಾಗಿದೆ ಎಂದರು.

ಮೋದಿಗೆ ಆಹ್ವಾನ
ಇದೇ ವೇಳೆ ಜರ್ಮನಿಯಲ್ಲಿ ಜೂನ್‌ ತಿಂಗಳಲ್ಲಿ ನಡೆಯಲಿರುವ ಜಿ-7 ಶೃಂಗಕ್ಕೆ ಪ್ರಧಾನಿ ಮೋದಿಯವರನ್ನು ಓಲಾಫ್ ಆಹ್ವಾನಿಸಿದ್ದಾರೆ. ರಷ್ಯಾವನ್ನು ಏಕಾಂಗಿಯಾಗಿಸಲು ಐರೋಪ್ಯ ರಾಷ್ಟ್ರಗಳು ನಡೆಸುತ್ತಿರುವ ತೀವ್ರ ಪ್ರಯತ್ನದ ನಡುವೆ ಈ ಬೆಳವಣಿಗೆ ಕುತೂಹಲ ಮೂಡಿಸಿದೆ.

Advertisement

ಹಸುರು ಜಲಜನಕ ಕಾರ್ಯಪಡೆ
ಭಾರತ ಮತ್ತು ಜರ್ಮನಿ ನಡುವೆ “ಹಸುರು ಜಲಜನಕ ಕಾರ್ಯಪಡೆ’ ರಚನೆಗೆ ಸಂಬಂಧಿಸಿದ ಒಪ್ಪಂದ ನಡೆದಿದೆ. ಹಸುರು ಜಲಜನಕದ ಉತ್ಪಾದನೆ, ಬಳಕೆ, ಸಂಗ್ರಹ ಮತ್ತು ವಿತರಣೆಯಲ್ಲಿ ಪರಸ್ಪರ ಸಹಕಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ಈ ಕಾರ್ಯಪಡೆ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ 10 ಶತಕೋಟಿ ಯೂರೋಗಳನ್ನು ನೀಡುವುದಾಗಿ ಜರ್ಮನಿ ಘೋಷಿಸಿದೆ.

ಎರಡೂ ದೇಶಗಳಲ್ಲಿ ಸುಲಭವಾಗಿ ಉದ್ಯೋಗ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ಕೈಗೊಳ್ಳಲು ಅನುಕೂಲವಾಗುವಂಥ ಒಪ್ಪಂದಕ್ಕೂ ಸಹಿ ಹಾಕಲಾಗಿದೆ. ಐರೋಪ್ಯ ಒಕ್ಕೂಟದ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದದ ವಿಚಾರದಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next