ಲಾಸ್ ಏಂಜಲೀಸ್: ಕ್ಯಾಲಿಫೋರ್ನಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದಾಗಿ ಹಾಲಿವುಡ್ ನಟರು ತೊಂದರೆಗೆ ಸಿಲುಕೊಂಡಿದ್ದಾರೆ. ಹಲವರ ಮನೆಗಳು ಬೆಂಕಿಗಾಹುತಿಯಾಗಿದ್ದು, ಮನೆ ತೊರೆದಿದ್ದಾರೆ. ಬೆಂಕಿಯಿಂದಾಗಿ 10 ಮಂದಿ ಸಾವಿಗೀಡಾಗಿದ್ದು, 10000ಕ್ಕೂ ಹೆಚ್ಚು ಮನೆಗಳು ಸುಟ್ಟು ಹೋಗಿವೆ.
ಬುಧವಾರ ಸಾಯಂಕಾಲದಿಂದಲೇ ಹಾಲಿವುಡ್ನ ಬೆಟ್ಟ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದು, ಬಹುತೇಕ ಸೆಲೆಬ್ರಿಟಿಗಳು ತಮ್ಮ ಮನೆ ಸುಟ್ಟುಹೋಗುತ್ತಿರುವ ವಿಡಿಯೋ ಪೋಸ್ಟ್ ಮಾಡಿ ದ್ದಾರೆ. ಬಿಲ್ಲಿ ಕ್ರಿಸ್ಟಲ್, ಮೆಲ್ ಗಿಬ್ಸನ್, ಸೇರಿ ಹಲವರು ಮನೆ ತೊರೆದಿದ್ದಾರೆ.
ಹಾಲಿವುಡ್ ಬೋರ್ಡ್ ಸುಟ್ಟಿಲ್ಲ: ಲಾಸ್ ಏಂಜಲೀನ್‌ನ ಬೆಟ್ಟವೊಂದರ ಮೇಲೆ ನಿರ್ಮಾಣ ಮಾಡಲಾಗಿರುವ “ಹಾಲಿವುಡ್’ ಎಂಬ ಬೋರ್ಡ್ ಸಹ ಸುಟ್ಟುಹೋಗಿದೆ ಎಂಬ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆದರೆ ಇದು ಎಐ ಮೂಲಕ ಸೃಷ್ಟಿಸಲಾದ ವಿಡಿಯೋ ಎಂಬುದು ತಿಳಿದುಬಂದಿದೆ.
ಉಪಗ್ರಹ ಚಿತ್ರ ಬಿಡುಗಡೆ: ಕ್ಯಾಲಿಫೋರ್ನಿಯಾ ಸುಟ್ಟು ಹೋಗಿರುವುದರ ಉಪಗ್ರಹ ಚಿತ್ರ ಬಿಡುಗಡೆ ಮಾಡಲಾಗಿದೆ. ಇದು ವಿನಾಶದ ಪ್ರಮಾಣವನ್ನು ಸ್ಪಷ್ಟವಾಗಿ ತೋರಿಸುತ್ತದೆ.