ಹುಮನಾಬಾದ್ : ಬಸವಕಲ್ಯಾಣ ಕಡೆಯಿಂದ ತೆಲಂಗಾಣದ ಜಹೀರಾಬಾದ್ ಕಡೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ತಾಲೂಕಿನ ಕನಕಟ್ಟಾ ಗ್ರಾಮದ ಹತ್ತಿರದಲ್ಲಿ ಪಲ್ಟಿಯಾದ ಪರಿಣಾಮ 15ಕ್ಕೂ ಅಧಿಕ ಎಮ್ಮೆ,ಕೋಣಗಳು ಮೃತಪಟ್ಟಿವೆ.
ಲಾರಿಯಲ್ಲಿ 60ಕ್ಕೂ ಅಧಿಕ ಕೋಣ ಹಾಗೂ ಎಮ್ಮೆಗಳನ್ನು ಸಾಗಿಸಲಾಗುತ್ತಿತ್ತು, ಆ ಪೈಕಿ 15ಕ್ಕೂ ಅಧಿಕ ಎಮ್ಮೆ ಮತ್ತು ಕೋಣಗಳು ಮೃತಪಟ್ಟಿವೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ : ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವು ನಿಖರವಾಗಿ ಎಲ್ಲಿ ಕಂಡುಬಂದಿದೆ ?: ವಿವರ ಕೇಳಿದ ಸುಪ್ರೀಂ
ವಾಹನದಲ್ಲಿನ ಜಾನುವಾರುಗಳನ್ನು ತೆಲಂಗಾಣದ ಕಸಾಯಿಖಾನೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ಮಂಜೆಗೌಡಾ ಪಾಟೀಲ್ , ಸಂಚಾರ ಪಿಎಸ್ಐ ಬಸವರಾಜ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.