Advertisement

ಹೈಟೆನ್ಷನ್‌ ವಿದ್ಯುತ್‌ ಗೋಪುರಕ್ಕೆ ಗುದ್ದಿದ ಲಾರಿ

01:07 PM Nov 23, 2018 | Team Udayavani |

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಲಾರಿಗಳ ಮಧ್ಯೆ ಡಿಕ್ಕಿಯಿಂದಾಗಿ ಒಂದು ಲಾರಿ ಹೈಟೆನ್ಷನ್‌ ವಿದ್ಯುತ್‌ ಟವರ್‌ಗೆ ಗುದ್ದಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ನಗರದ ಹೊರಹೊಲಯದ ಮಾಡ್ರನ್‌ ಸ್ಕೂಲ್‌ ಬಳಿ ಈ ಘಟನೆ ಸಂಭವಿಸಿದೆ. ಕಬ್ಬು ತುಂಬಿದ ಲಾರಿಗೆ ಹರಿಹರ ಕಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಆಗ ಕಬ್ಬಿನ ಲಾರಿ ವಿದ್ಯುತ್‌ ಟವರ್‌ ಗೆ ಗುದ್ದಿದೆ. ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದಾನೆ.

Advertisement

ಕಬ್ಬಿನ ಲಾರಿ ಸರ್ವಿಸ್‌ ರಸ್ತೆಯ ಬದಿಯಲ್ಲಿದ್ದ 66 ಕೆ.ವಿಯ ದಾವಣಗೆರೆ-ಹರಿಹರ-ಹೊಸಪೇಟೆ ಮತ್ತು ದಾವಣಗೆರೆ ಗುತ್ತೂರು ಇಂಡಸ್ಟ್ರೀಯಲ್‌ ಪ್ರಸರಣ ಮಾರ್ಗದ ಗೋಪುರಕ್ಕೆ ಗುದ್ದಿದ ಪರಿಣಾಮ ಗೋಪುರ ಹಾನಿಗೊಳಗಾಗಿದೆ ಎಂದು ದೂರು ನೀಡಲಾಗಿದೆ.

ನಾಲ್ಕು ಬಂಗಾರ ಬಳೆ ಕಳ್ಳತನ
ದಾವಣಗೆರೆ: ಮನೆಯ ಹೆಂಚು ತೆಗೆದು ಒಳಗೆ ನುಗ್ಗಿರುವ ಕಳ್ಳರು, ಬೀರುವಿನಲ್ಲಿದ್ದ 2 ಲಕ್ಷ ರೂ. ಮೌಲ್ಯದ 80 ಗ್ರಾಂ 4 ಬಳೆಗಳನ್ನು ದೋಚಿರುವ ಘಟನೆ ಕೆಟಿಜೆ ನಗರದ 6 ನೇ ಕ್ರಾಸ್‌ನಲ್ಲಿ ಬುಧವಾರ ನಡೆದಿದೆ. ಮನೆ ಕೆಲಸದಿಂದ ಜೀವನ ಸಾಗಿಸುತ್ತಿರುವ ಹಾಲಮ್ಮ, ತನ್ನ ಅಕ್ಕ ಕೊಟ್ಟು ಹೋಗಿದ್ದ ಚಿನ್ನದ 4 ಬಳೆಗಳನ್ನು ಬೀರುವಿನಲ್ಲಿ ಇಟ್ಟು ಯಲ್ಲಮ್ಮನಗುಡ್ಡಕ್ಕೆ ಮಂಗಳವಾರ ಹೋಗಿದ್ದಾರೆ. ಅಲ್ಲಿಂದ ಬಂದು ನೋಡಿದಾಗ ಮನೆಯ ಮೇಲಿನ ಹೆಂಚು ತೆಗೆದು ಕಳ್ಳರು ಒಳಪ್ರವೇಶಿಸಿ, ಬೀರುವಿನ ಬಾಗಿಲು ಮುರಿದು, ಬಳೆ ದೋಚಿರುವುದು ಕಂಡು ಬಂದಿದೆ. ಪ್ರಕರಣ ಕೆಟಿಜೆ ನಗರ ಠಾಣೆಯಲ್ಲಿ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next