ದಾಸನಕೊಪ್ಪದ ರಂಗಾಪುರದಿಂದ ಹುಲ್ಲು ತುಂಬಿಕೊಂಡು ಬಂದ ಲಾರಿ ಇದಾಗಿತ್ತು. ಮೇಲಿನ ಬಿಸಲಕೊಪ್ಪ ಸಮೀಪ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ವಿದ್ಯುತ್ ತಂತಿ ಕೆಳಗೆ ಜೊತು ಬಿದ್ದಿರುವುದೆ ಈ ಅನಾಹುತಕ್ಕೆ ಕಾರಣ ಎನ್ನಲಾಗಿದೆ.
Advertisement
ಪ್ರಾಣಾಪಾಯದಿಂದ ಪಾರಾದ ಡ್ರೈವರ್ ಮತ್ತು ಲಾರಿಯಲ್ಲಿದ್ದ ಜನರು ಪಾರಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಲಾರಿ ಹಾಗೂ ಬೈಹುಲ್ಲು ನಷ್ಟವಾಗಿದೆ.ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.