Advertisement

ಬೆಳಗಾವಿ: ಭೀಕರ ಅಪಘಾತದಲ್ಲಿ ಎಎಸ್ಐ ಪತ್ನಿ, ಮಗಳು ಸೇರಿ ನಾಲ್ವರು ದುರ್ಮರಣ

03:24 PM Sep 25, 2022 | Team Udayavani |

ಬೆಳಗಾವಿ: ಸಿಮೆಂಟ್ ಲಾರಿ ಹಾಗೂ ಕಾರು-ದ್ವಿಚಕ್ರ ವಾಹನ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಎಎಸ್ಐ ಪತ್ನಿ, ಪುತ್ರಿ, ಕಾರು ಚಾಲಕ ಸೇರಿ ನಾಲ್ವರು ಮೃತಪಟ್ಟ ಘಟನೆ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್ ಬಳಿ ರವಿವಾರ ಸಂಭವಿಸಿದೆ.

Advertisement

ಬೆಳಗಾವಿ ನಿವಾಸಿಗಳಾದ ಕುಡಚಿ ಠಾಣೆ ಎಎಸ್ಐ ಪರುಶರಾಮ ಹಲಕಿ ಎಂಬವರ ಪತ್ನಿ ರುಕ್ಮಿಣಿ ಹಲಕಿ (48 ವ), ಅಕ್ಷತಾ ಹಲಕಿ (24 ವ), ನಿಖಿಲ್ ಕದಮ (24 ವ) ಹಾಗೂ ಹನುಮವ್ವ ಚಿಕ್ಕಲಕಟ್ಟಿ (65 ವ) ಎಂಬವರು ಮೃತಪಟ್ಟಿದ್ದಾರೆ.

ಲೋಕಾಪುರ ಕಡೆಯಿಂದ ಗೋವಾಕ್ಕೆ ಸಿಮೆಂಟ್ ತುಂಬಿಕೊಂಡು ಲಾರಿ ಹೊರಟಿತ್ತು.‌ ಎದುರಿನಿಂದ ಬಂದ ಕಾರಿಗೆ ಲಾರಿ ಢಿಕ್ಕಿ ಹೊಡೆದಿದೆ. ಪಕ್ಕದಲ್ಲಿದ್ದ ದ್ವಿಚಕ್ರ ವಾಹನಕ್ಕೂ ಢಿಕ್ಕಿ ಹೊಡೆದಿದೆ.

ಇದನ್ನೂ ಓದಿ:108 ನಲ್ಲಿ ತಾಂತ್ರಿಕ ದೋಷ; ಜನರಿಗೆ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆಗೆ ಕ್ರಮ: ಕೆ.ಸುಧಾಕರ್

ಕಾರಿನಲ್ಲಿದ್ದ ಕುಡಚಿ ಠಾಣೆ ಎಎಸ್ಐ ಪರುಶರಾಮ ಹಲಕಿ ಎಂಬವರ ಪತ್ನಿ ರುಕ್ಮಿಣಿ ಹಾಗೂ ಮಗಳು ಅಕ್ಷತಾ ಹೊರಟಿದ್ದರು. ಕಾರಿನಲ್ಲಿದ್ದ ಚಾಲಕ ಸೇರಿ ಮೂವರು ಮೃತಪಟ್ಟಿದ್ದಾರೆ.‌ ಬೈಕ್ ಮೇಲೆನದ್ದ ವೃದ್ಧೆ ಹನುಮವ್ವ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಸ್ಥಳಕ್ಕೆ ಎಸ್ ಪಿ ಸಂಜೀವ ಪಾಟೀಲ, ಹೆಚ್ಚುವರಿ ಎಸ್ ಪಿ ಮಹಾಲಿಂಗ ನಂದಗಾಂವಿ, ಬೈಲಹೊಂಗಲ ಡಿಎಸ್ ಪಿ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next