Advertisement

ರುತ್‌ಗಾಗಿ “ಕೆಂಪು ಸಮುದ್ರ’ವಾದ ಲಾರ್ಡ್ಸ್‌

01:56 AM Aug 16, 2019 | Team Udayavani |

ಲಂಡನ್‌: ಆ್ಯಶಸ್‌ ಸರಣಿಯ 2ನೇ ಟೆಸ್ಟ್‌ ಪಂದ್ಯದ 2ನೇ ದಿನ ಲಾರ್ಡ್ಸ್‌ ಸ್ಟೇಡಿಯಂ “ಕೆಂಪು ಸಮುದ್ರ’ವಾಗಿ ಬದಲಾಗಿತ್ತು. ಆಟಗಾರರು ಕೆಂಪು ಕ್ಯಾಪ್‌ ಧರಿಸಿದ್ದರು, ಜೆರ್ಸಿ ನಂಬರ್‌ಗಳನ್ನು ಕೆಂಪು ಬಣ್ಣದಲ್ಲಿ ಬರೆಯಲಾಗಿತ್ತು. ಪ್ರೇಕ್ಷಕರಲ್ಲೂ ಅನೇಕರು ಕೆಂಪು ಉಡುಪು ಧರಿಸಿಕೊಂಡು ಬಂದಿದ್ದರು. ಹೀಗೆ ಲಾರ್ಡ್ಸ್‌ ಕೆಂಪು ಸಮುದ್ರವಾಗಿ ಬದಲಾದದ್ದು ರುತ್‌ ಅವರಿಗಾಗಿ!

Advertisement

ಯಾರಿದು ರುತ್‌?
ರುತ್‌ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಆ್ಯಂಡ್ರೂé ಸ್ಟ್ರಾಸ್‌ ಅವರ ಪತ್ನಿ. ಸ್ಟ್ರಾಸ್‌ ಸಿಡ್ನಿಯಲ್ಲಿ ಕ್ರಿಕೆಟ್‌ ಆಡುತ್ತಿರುವ ದಿನಗಳಲ್ಲಿ ರುತ್‌ಳ ಪರಿಚಯವಾಗಿತ್ತು. ಈ ಪರಿಚಯ ಬಳಿಕ ಪ್ರೀತಿಗೆ ತಿರುಗಿ ಅವರ ಸತಿಪತಿಯಾಗಿದ್ದರು. ಆದರೆ ದುರದೃಷ್ಟವಶಾತ್‌ 46ರ ಹರೆಯದಲ್ಲಿ ರುತ್‌ ಶ್ವಾಸಕೋಶದ ಕ್ಯಾನ್ಸರ್‌ಗೆ ಬಲಿಯಾದರು. ಹೆಂಡತಿಯ ನೆನಪಿನಲ್ಲಿ ಸ್ಟ್ರಾಸ್‌ “ರುತ್‌ ಸ್ಟ್ರಾಸ್‌ ಫೌಂಡೇಶನ್‌’ ಎಂಬ ಸಮಾಜ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಆ. 15 ಇದರ ಸಂಸ್ಥಾಪನಾ ದಿನವಾಗಿದೆ.

ಜೆರ್ಸಿ, ಕ್ಯಾಪ್‌ಗ್ಳ ಹರಾಜು
ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಕ್ಕೆ ರುತ್‌ ಪ್ರೀತಿಯ ಮಗಳಾಗಿದ್ದರು. ಹೀಗಾಗಿ ಅವರ ಗೌರವಾರ್ಥ ಕ್ರಿಕೆಟಿಗರು ಗುರುವಾರ ಲಾರ್ಡ್ಸ್‌ ಟೆಸ್ಟ್‌ ವೇಳೆ ಕೆಂಪು ಕ್ಯಾಪ್‌ ಧರಿಸಿದ್ದರು. ಜೆರ್ಸಿಯಲ್ಲಿ ಕೆಂಬಣ್ಣದ ಸಂಖ್ಯೆಗಳನ್ನು ಬರೆಯಲಾಗಿತ್ತು. ಪಂದ್ಯದ ಬಳಿಕ ಈ ಜೆರ್ಸಿಗಳನ್ನು ಮತ್ತು ಕ್ಯಾಪ್‌ಗ್ಳನ್ನು ಹರಾಜು ಹಾಕಿ ಬಂದ ಮೊತ್ತವನ್ನು ಶ್ವಾಸಕೋಶದ ಕಾನ್ಸರ್‌ನಿಂದ ಬಳಲುವ ರೋಗಿಗಳ ಚಿಕಿತ್ಸೆಗೆ ವಿನಿಯೋಗಿಸಲಾಗುವುದು.

ಅಲೀಮ್‌ ದಾರ್‌ ದಾಖಲೆ
ಪಾಕಿಸ್ಥಾನದ ಅಂಪಾಯರ್‌ ಅಲೀಮ್‌ ದಾರ್‌ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವೆಸ್ಟ್‌ ಇಂಡೀಸ್‌ನ ಸ್ಟೀವ್‌ ಬಕ್ನರ್‌ ಅವರ ಸರ್ವಾಧಿಕ ಟೆಸ್ಟ್‌ ದಾಖಲೆಯನ್ನು ಸರಿದೂಗಿಸಿದರು. ಬಕ್ನರ್‌ 128 ಟೆಸ್ಟ್‌ ಗಳಲ್ಲಿ ಅಂಪಾಯರಿಂಗ್‌ ನಡೆಸಿದ್ದಾರೆ.

“ಬಕ್ನರ್‌ ಅವರ ದಾಖಲೆಯನ್ನು ಸರಿದೂಗಿಸಿದ್ದು ನನ್ನ ಪಾಲಿನ ದೊಡ್ಡ ಗೌರವ. ಅವರೇ ನನ್ನ ಪಾಲಿನ ರೋಲ್‌ ಮಾಡೆಲ್‌ ಆಗಿದ್ದರು’ ಎಂಬುದಾಗಿ 51ರ ಹರೆಯದ ದಾರ್‌ ಹೇಳಿದ್ದಾರೆ.

Advertisement

ಇಂಗ್ಲೆಂಡ್‌ ಕುಸಿತ
ಮಳೆಯಿಂದಾಗಿ ಲಾರ್ಡ್ಸ್‌ ಟೆಸ್ಟ್‌ ಪಂದ್ಯ 2ನೇ ದಿನ ಮೊದಲ್ಗೊಂಡಿದ್ದು, ಇಂಗ್ಲೆಂಡ್‌ 9 ವಿಕೆಟ್‌ ನಷ್ಟಕ್ಕೆ 251 ರನ್‌ ಮಾಡಿ ಆಟ ಮುಂದುವರಿಸುತ್ತಿದೆ. ಆರಂಭಕಾರ ರೋರಿ ಬರ್ನ್ಸ್ 53 ರನ್‌ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next