Advertisement

ಭಗವಂತನ ಪ್ರೀತ್ಯರ್ಥ ಸಮಾಜ ಸೇವೆ: ಜ|ಎಸ್‌.ಆರ್‌. ನಾಯಕ್‌

03:25 PM May 28, 2017 | |

ಉಡುಪಿ: “ಜನತಾ ಸೇವೆಯೇ ಜನಾರ್ದನ ಸೇವೆ’ ಎಂದು ಶ್ರೀಕೃಷ್ಣ ಪರಮಾತ್ಮ ಗೀತೆಯಲ್ಲಿ ಹೇಳಿರುವಂತೆ ಸೇವಾ ಕೈಂಕರ್ಯ ನೆರವೇರಿಸಲು ಸಂಪತ್ತು, ಮನಸ್ಸು ಮತ್ತು ಅಧಿಕಾರ ಬೇಕಾಗುತ್ತದೆ. ತಮ್ಮಲ್ಲಿರುವ ಸಂಪತ್ತನ್ನು ಬಳಸಿಕೊಂಡು ಉತ್ತಮ ಮನಸ್ಸಿನಿಂದ ಸಮಾಜ ಸೇವೆ ಮಾಡುತ್ತೇನೆಂಬ ಅಧಿಕಾರದಿಂದ ಸೇವೆಗೈದಾಗ ಭಗವಂತನಿಗೆ ತೃಪ್ತಿಯಾಗುತ್ತದೆ. ಕೇವಲ ಕಾಟಾಚಾರಕ್ಕೆ ಸೇವೆ ಮಾಡದೇ ಭಗವಂತನ ಪ್ರೀತ್ಯರ್ಥವಾಗಿ ಮಾಡಿದಾಗ ಭಗವಂತ ತೃಪ್ತಿಗೊಳ್ಳುತ್ತಾನೆ ಎಂದು ರಾಜ್ಯ ಕಾನೂನು ಆಯೋಗ ಅಧ್ಯಕ್ಷ ಜ| ಎಸ್‌.ಆರ್‌. ನಾಯಕ್‌ ಹೇಳಿದರು.

Advertisement

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಮತ್ತು ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ವತಿಯಿಂದ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಎಲ್ಲ ಸಮಾಜದ 5,100 ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಪುಸ್ತಕ ವಿತರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸರಕಾರ ಮಾಡಬೇಕಾದ ಸೇವಾ ಕಾರ್ಯಗಳನ್ನು ಟ್ರಸ್ಟ್‌ ಮೂಲಕ ಕಳೆದ ಹಲವಾರು ವರ್ಷಗಳಿಂದ ಮಾಡುತ್ತಿರುವ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರಶಂಸೆಗೆ ಪಾತ್ರವಾಗಿದೆ ಎಂದು ಅವರು ಹೇಳಿದರು.
  
ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ನಿಕಟಪೂರ್ವ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಅವರು ಮಾತನಾಡಿ, ಟ್ರಸ್ಟ್‌ ಕಳೆದ 12 ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಆರೋಗ್ಯ ಕಾರ್ಡ್‌ ವಿತರಣೆ, ರೋಗಿಗಳು ಮತ್ತು ಕ್ಯಾನ್ಸರ್‌ ರೋಗಿಗಳಿಗೆ ಸಹಾಯಧನ ವಿತರಣೆ ಮುಂತಾದ ಜನೋಪಯೋಗಿ ಕಾರ್ಯಕ್ರಮಗಳನ್ನು ನಿರಂತರ ವಾಗಿ ಮಾಡಿಕೊಂಡು ಬರುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಅಧ್ಯಕ್ಷ ಗಣೇಶ್‌ಕಾಂಚನ್‌ ಮಾತನಾಡಿ,ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪೋಷಕರು ಸಾಕಷ್ಟು ಶ್ರಮಿಸಬೇಕಾಗುತ್ತದೆ  ಎಂದರು.

ಆನಂದ ಎಸ್‌.ಕೆ. ಸ್ವಾಗತಿಸಿದರು. ಜಿಲ್ಲಾ ಮೊಗವೀರ ಯುವ ಸಂಘಟನೆ  ಶಿವರಾಮ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮೊಗವೀರ ಯುವ ಸಂಘಟನೆ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಸುವರ್ಣ ಬೈಕಾಡಿ ಅವರು ವಂದಿಸಿದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next