ಹೊಸದಿಲ್ಲಿ: ಪ್ರಭು ಶ್ರೀರಾಮ ಭಾರತದ ಅಸ್ಮಿತೆ. ಕೇವಲ ಕಲ್ಲಿನ ಅಥವಾ ಮರದ ವಿಗ್ರಹವಲ್ಲ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಹೇಳಿದರು.
ರಾಮ ನವಮಿ ಪ್ರಯುಕ್ತ ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಅಯೋ ಧ್ಯೆಯಲ್ಲಿ ಶ್ರೀರಾಮ ದೇಗುಲ ನಿರ್ಮಾಣಕ್ಕೆ ಕೆಲವರು ಅಪಸ್ವರ ಎತ್ತಿದ್ದರು. ಅಲ್ಲದೇ ಆ ಸ್ಥಳದಲ್ಲಿ ಆಸ್ಪತ್ರೆ, ಶಾಲೆ, ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಉಚಿತ ಸಲಹೆಗಳನ್ನು ನೀಡಿದರು. ಆದರೆ ಇವರು ನಿಜವಾಗಿ ಪ್ರಭು ಶ್ರೀರಾಮನನ್ನು ಅರ್ಥಮಾಡಿಕೊಳ್ಳದ ಅಥವಾ ಅಪ್ಪಿಕೊಳ್ಳದ ಜನರು,’ ಎಂದರು.
“ಪ್ರಭು ಶ್ರೀರಾಮ ಕೇವಲ ಕಲ್ಲಿನ ಅಥವಾ ಮರದ ವಿಗ್ರ ಹವಲ್ಲ. ಆತ ನಮ್ಮ ಸಂಸ್ಕೃತಿಯ ಮತ್ತು ನಂಬಿಕೆಯ ಕೇಂದ್ರ ಬಿಂದು. ಈ ದೇಶದ ಅಸ್ಮಿತೆ. ಸರಕಾರವು ಆಸ್ಪತ್ರೆ, ಶಾಲೆ, ಕೈಗಾರಿ ಕೆಗಳನ್ನು ಕಟ್ಟಿಸುತ್ತದೆ. ಜತೆಗೆ ದೇಗುಲಗಳನ್ನು ಸಹ ನಿರ್ಮಿ ಸುತ್ತದೆ,’ ಎಂದು ರಾಜನಾಥ್ ಸಿಂಗ್ ಪ್ರತಿಪಾದಿಸಿದರು.