Advertisement

ಪುರಿ ಜಗನ್ನಾಥ ರಥ ಕಟ್ಟುವ ಕುಶಲ ಕರ್ಮಿಗಳು ಅತಂತ್ರ

02:25 AM Jun 22, 2020 | Hari Prasad |

ಪುರಿ: ಕೋವಿಡ್ ಹಿನ್ನೆಲೆಯಲ್ಲಿ ಪುರಿ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿರುವುದರಿಂದ ರಥ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕುಶಲಕರ್ಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಪುರಿ ಜಗನ್ನಾಥ ಸನ್ನಿಧಿಯಲ್ಲಿ ಪ್ರತಿ ವರ್ಷ ರಥೋತ್ಸವಕ್ಕೂ ಮುನ್ನ ರಥವನ್ನು ಕಟ್ಟುವ ಕಾರ್ಯದಲ್ಲಿ ಮರಗೆಲಸ ಕಾರ್ಮಿಕರು, ಕಮ್ಮಾರರು, ದರ್ಜಿಗಳು, ವರ್ಣಚಿತ್ರಕಾರರು ಮತ್ತಿತರರು ತೊಡಗಿಸಿಕೊಳ್ಳುತ್ತಿದ್ದರು.

ಜೂ.23ರಿಂದ ನಡೆಯಬೇಕಿದ್ದ ರಥಯಾತ್ರೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿರುವುದರಿಂದ ಈ ಕುಶಲಕರ್ಮಿಗಳು ಕೆಲಸವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ನಿರ್ಧಾರವನ್ನು ಪರಿಶೀಲಿಸುವಂತೆ ಒಡಿಶಾ ಸರಕಾರ ಮನವಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

1558-1735ರ ಅವಧಿಯಲ್ಲಿ ವಿವಿಧ ಕಾರಣಕ್ಕಾಗಿ 32 ಬಾರಿ ಮಾತ್ರ ರಥಯಾತ್ರೆ ಸ್ಥಗಿತವಾಗಿತ್ತು. ಇದೇ ವೇಳೆ ತಡೆಯಾಜ್ಞೆ ತೆರವುಗೊಳಿಸುವಂತೆ ಬಿಜೆಪಿ ನಾಯಕ ಸಂಬೀತ್‌ ಪಾತ್ರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next