Advertisement

ಆಕರ್ಷಣೆಗೆ ಸಿಆರ್‌ಝೆಡ್‌ ನಿರ್ಬಂಧ ಸಡಿಲ ಸಾಧ್ಯತೆ

03:45 AM Mar 23, 2017 | |

ನವದೆಹಲಿ: ಸಮುದ್ರದಿಂದ 500 ಮೀಟರ್‌ವರೆಗೆ ಗುರುತಿಸಲಾಗಿದ್ದ ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಝೆಡ್‌) ಇದುವರೆಗೆ ಇದ್ದ ನಿರ್ಬಂಧಗಳನ್ನು ತೆಗೆದು ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಇಲ್ಲಿ ಕಟ್ಟಡ ಸೇರಿದಂತೆ ಮಾನವ ಕೇಂದ್ರಿತ ಚಟುವಟಿಕೆಗಳನ್ನು ಕೈಗೊಳ್ಳಲು ಅನುವಾಗುವಂತೆ 1986ರ ಪರಿಸರ ರಕ್ಷಣಾ ಕಾಯ್ದೆಗೆ ತಿದ್ದುಪಡಿಗೆ ಚಿಂತಿಸಲಾಗುತ್ತಿದೆ.

Advertisement

ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಾಗರ ತೀರ ಪ್ರದೇಶಗಳ ಆಕರ್ಷಣೆ ಹೆಚ್ಚಿಸಲು “ಕಡಲು ಮತ್ತು ಕರಾವಳಿ ನಿಯಂತ್ರಣ ವಲಯ’ (ಎಂಸಿಆರ್‌ಝೆಡ್‌) ಗುರುತಿಸಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ. ಒಂದು ವೇಳೆ ಇದು ಜಾರಿಯಾದರೆ, ಕರಾವಳಿ ನಿಯಂತ್ರಣ ವಲಯದ 500 ಮೀ. ವರೆಗಿನ ಪ್ರದೇಶಗಳಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಅಲ್ಲದೆ ಮತ್ಸé ಸಂಸ್ಕರಣಾ ಘಟಕ, ಕರಾವಳಿ ಪೊಲೀಸ್‌ ಪಡೆಯ ಚಟುವಟಿಕೆಗಳು, ಸ್ಥಳೀಯ ಮೀನುಗಾರರ ಕುಟುಂಬಗಳ ಕಟ್ಟಡಗಳು ಸೇರಿದಂತೆ ಹಲವು ಚಟುವಟಿಕೆಗಳನ್ನು ಕೈಗೊಳ್ಳಬಹುದು.

ಸಿಆರ್‌ಝೆಡ್‌ನ‌ ನಿರ್ಬಂಧ ಸಡಿಲಗೊಳಿಸುವಂತೆ ಮುಖ್ಯವಾಗಿ ಮಹಾರಾಷ್ಟ್ರ ಸರ್ಕಾರದ ಕೇಂದ್ರ ಸರ್ಕಾರವನ್ನು ಆಗ್ರಹಿಸಿತ್ತು. ಅಲ್ಲದೆ, ಸುದೀರ್ಘ‌ ಕರಾವಳಿ ಹೊಂದಿರುವ ಕರ್ನಾಟಕ, ಕೇರಳ ಮತ್ತು ಗೋವಾ ಸರ್ಕಾರಗಳೂ ಇದರ ಪರ ಧ್ವನಿಗೂಡಿಸಿದ್ದವು. ಅಲ್ಲದೆ, 2015ರಲ್ಲಿ ಶೈಲೇಶ್‌ ನಾಯಕ್‌ ಸಮಿತಿ ರಾಜ್ಯ ಸರ್ಕಾರಗಳು ಮತ್ತು ಮಧ್ಯವರ್ತಿಗಳ ಬೇಡಿಕೆ, ದೂರು- ದುಮ್ಮಾನಗಳನ್ನು ಆಲಿಸಿ, ನಿರ್ಬಂಧ ಸಡಿಲಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಜನಾನುಕೂಲ ಮತ್ತು ಭದ್ರತೆ ಸಂಬಂಧ ಚಟುವಟಿಕೆ ಕೈಗೊಳ್ಳಬಹುದೆಂದು ವರದಿಯಲ್ಲಿ ಹೇಳಿತ್ತು.

ಎಂಸಿಆರ್‌ಝೆಡ್‌ ಜಾರಿ ಆಗುವುದರಿಂದ ಈ ಪರಿಸರ ಸೂಕ್ಷ್ಮವಲಯದಲ್ಲಿನ ಜೀವಿಗಳಿಗೆ ಯಾವುದೇ ಜೀವಹಾನಿ ಆಗುವುದಿಲ್ಲ. ಈ ಸಂಬಂಧ ಭದ್ರತಾ ಕ್ರಮ ಕೈಗೊಳ್ಳಲೂ ಸರ್ಕಾರ ಚಿಂತಿಸಿದೆ ಎನ್ನಲಾಗಿದೆ. ಬೀಚ್‌ ಪ್ರದೇಶಗಳಲ್ಲಿ ಸ್ವತ್ಛತೆ ಕಾಪಾಡಲು, ಯಾವುದೇ ತ್ಯಾಜ್ಯಗಳನ್ನು ಅಲ್ಲಿ ಸುರಿಯದಂತೆ ಪ್ರವಾಸೋದ್ಯಮ ಇಲಾಖೆಗೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಹಿಂದೆ ಸಿಟಿ ಪ್ರದೇಶ, ಗ್ರಾಮ ಪ್ರದೇಶ ಸೇರಿದಂತೆ ಆಯಾ ವಲಯಕ್ಕೆ ಸಂಬಂಧಿಸಿದಂತೆ ಸಿಆರ್‌ಝೆಡ್‌ನ‌ 4 ವಲಯಗಳನ್ನು ಸರ್ಕಾರ ಗುರುತಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next