ಹೊಸದಿಲ್ಲಿ : ಹರಿಯಾಣ ಪೊಲàಸರು ಇದೀಗ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್‌ನ ದತ್ತು ಪುತ್ರಿಯಾಗಿರುವ ಹನಿಪ್ರೀತ್ ಸಿಂಗ್ ವಿರುದ್ಧ ಲುಕೌಟ್ ನೊಟೀಸ್ ಜಾರಿ ಮಾಡ ಇದ್ದಾರೆ.
ರಾಮ್ ರಹೀಮ್ ಸಿಂಗ್ ಗೆ ಸಿಬಿಐ ನ್ಯಾಯಾಲಯ ಇಪ್ಪತ್ತು ವರ್ಷಗಳ ಜೈಲು ಶಿಕ್ಷೆ ಹಾಗೂ 30 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ ಬಳಿಕ ಆತನನ್ನು ಕೋರ್ಟ್ ಆವರಣದಲ್ಲೇ ಬಂಧಮುಕ್ತಗೊಳಿಸಿ ಅಪಹರಿಸುವ ಸಂಚನ್ನು ರೂಪಿಸಿರುವ ಆರೋಪವನ್ನು ಹರಿಯಾಣ ಪೊಲೀಸರು ಹನಿಪ್ರೀತ್ ಸಿಂಗ್ ವಿರುದ್ಧ ದಾಖಲಿಸಿದ್ದಾರೆ.
ಕೆಲವು ವರದಿಗಳ ಪ್ರಕಾರ ಹನಿಪ್ರೀತ್ ಸಿಂಗ್, ರೋಹಟಕ್‌ನಲ್ಲಿನ ಡೇರಾ ಅನುಯಾಯಿಯೊಬ್ಬರ ಮನೆಯಲ್ಲಿ ಅಡಗಿಕೊಂಡಿದ್ದಾಳೆ.
ರಾಮ್ ರಹೀಮ್ ಸಿಂಗ್‌ಗೆ ಜೈಲು ಶಿಕ್ಷೆಯ ತೀರ್ಪು ಪ್ರಕಟಿಸಲಾದ ಬೆನ್ನಿಗೇ ಆತನನ್ನು ಕೋರ್ಟಿನಿಂದ ಒಯ್ಯಲು ಸಿದ್ಧವಾಗಿದ್ದ ಮಿಲಿಟರಿ ಹೆಲಿಕಾಪ್ಟರನ್ನು ಹನಿಪ್ರೀತ್ ಸಿಂಗ್ ಹತ್ತಿದ್ದು ಹೇಗೆ ಎಂಬುದು ಹರಿಯಾಣ ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿದೆ.
ಹನಿಪ್ರೀತ್ ಸಿಂಗ್ ತಾನೊಬ್ಬ ನಟಿ, ನಿರ್ದೇಶಕಿ ಮತ್ತು ಚಿತ್ರ ಸಂಪಾದಕಿ ಎಂದು ಹೇಳಿಕೊಂಡಿದ್ದು “ಗುರು ಪಾಪಾ’ ಸಿನೇಮಾ ನಟನೆಯಲ್ಲಿ ಆತನಿಗೆ ನೆರವಾಗುತ್ತಿದ್ದಳು ಎನ್ನಲಾಗಿದೆ.
ಹನಿಪ್ರೀತ್ ಸಿಂಗ್ ರೀತಿಯಲ್ಲೇ ಈಗ ಭೂಗತನಾಗಿರುವ ಡೇರಾ ಸಚ್ಚಾ ಸೌಧಾ ಇದರ ಮುಖವಾಣಿಯಾಗಿರುವ ಆದಿತ್ಯ ಇನ್ಸಾನ್ ವಿರುದ್ಧವೂ ಹರಿಯಾಣ ಪೊಲೀಸರು ಲುಕೌಟ್ ನೊಟೀಸ್ ಜಾರಿ ಮಾಡಿದ್ದಾರೆ.