ನವ ದೆಹಲಿ : ಜನಪ್ರಿಯ ರಿಪಬ್ಲಿಕ್ ಆಫ್ ಗೇಮರ್ಸ್ ( ಆರ್ ಓ ಜಿ) ಯ ಬ್ರ್ಯಾಂಡ್ ತೈವಾನೀಸ್ ಕಂಪೆನಿ ಆ್ಯಸೂಸ್ ಆರ್ ಓ ಜಿ ಅಕಾಡೆಮಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಇದು ವೃತ್ತಿಪರವಾಗಿರುವ ಗೇಮರುಗಳಿಗೆ ಭಾರತದ ಮೊದಲ ವರ್ಚುವಲ್ ಅಕಾಡೆಮಿ ಪ್ರೋಗ್ರಾಂ ಆಗಿದೆ.
ಓದಿ :ಫೆ. 6 ರಿಂದ ಐಐಟಿ ಬಾಂಬೆ ಗೇಟ್ ಎಕ್ಸಾಮ್ 2021
ಆರ್ ಒ ಜಿ ಅಕಾಡೆಮಿಯನ್ನು ನಾಲ್ಕು ತ್ರೈಮಾಸಿಕ ಸೆಶನ್ ಗಳಾಗಿ ವಿಂಗಡಿಸಲಾಗಿದೆ, ಇದು ಕೌಂಟರ್-ಸ್ಟ್ರೈಕ್: ಗ್ಲೋಬಲ್ ಅಫೆನ್ಸಿವ್ ಮುಂತಾದ ಸ್ಪೋರ್ಟ್ಸ್ ಆಟಗಳ ಮೇಲೆ ಕೇಂದ್ರೀಕರಿಸುತ್ತದೆ. ಇದರ ನೋಂದಣಿ ಫೆಬ್ರವರಿ 1 ರಿಂದ ಪ್ರಾರಂಭವಾಗಿ ಫೆಬ್ರವರಿ 10 ರವರೆಗೆ ಇರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
16 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾವುದೇ ಗೇಮರ್ ನೋಂದಾಯಿಸಿಕೊಳ್ಳಬಹುದು. 16 ರಿಂದ 18 ವರ್ಷದೊಳಗಿನ ಆಟಗಾರರು ತಮ್ಮ ಪೋಷಕರಿಂದ ಒಪ್ಪಿಗೆ ಪತ್ರ ನೀಡುವಂತೆ ಕೇಳುತ್ತದೆ. ನೋಂದಣಿ ಪ್ರಕ್ರಿಯೆಯು ಎಲ್ಲಾ ಭಾಗವಹಿಸುವವರನ್ನು ಸ್ಕ್ರೀನಿಂಗ್ ಪ್ರಕ್ರಿಯೆಗೆ ಒಳಪಡಿಸುತ್ತದೆ ಮತ್ತು ಶಾರ್ಟ್ ಲಿಸ್ಟ್ ಮಾಡಿದ ನಂತರ, ಅಗ್ರ 20 ಅಭ್ಯರ್ಥಿಗಳನ್ನು ನಾಲ್ಕು ತಂಡಗಳಾಗಿ ವಿಂಗಡಿಸಲಾಗುತ್ತದೆ.
ಓದಿ : ಕಾರ್ಕಳ: ಆನೆಕೆರೆ ಕಾಲುವೆಗೆ ಉರುಳಿದ ಕಾರು, ಅಪಾಯದಿಂದ ಪಾರಾದ ಪ್ರಯಾಣಿಕರು
ನಾಲ್ಕು ತಂಡಗಳ ಅಂತಿಮ ಆರು ಆಟಗಾರರು ಆರ್ ಒ ಜಿ ಅಕಾಡೆಮಿಗೆ ಪ್ರವೇಶ ಪಡೆದ ನಂತರ ಮೂರು ತಿಂಗಳ ಅವಧಿಯಲ್ಲಿ ಸ್ಟೈಫಂಡ್ ಆಗಿ 15,000 ರೂ ಪಡೆಯುವುದರೊಂದಿಗೆ ಅವರು, ವೃತ್ತಿಪರ ಸ್ಪೋರ್ಟ್ಸ್ ಆಟಗಾರರು ಮತ್ತು ತರಬೇತುದಾರರಿಂದ ಮೂರು ತಿಂಗಳು ತರಬೇತಿ ಪಡೆಯುತ್ತಾರೆ.
ಈ ಉಪಕ್ರಮವು ಭಾರತದಲ್ಲಿ ವಿಶ್ವಾಸಾರ್ಹ ಎಸ್ಪೋರ್ಟ್ಸ್ ಆಟಗಾರರ ಗುಂಪನ್ನು ಸ್ಥಾಪಿಸುವಲ್ಲಿ ಉತ್ತೇಜನವನ್ನು ನೀಡುತ್ತದೆ ಮತ್ತು ಮುಂದಿನ ತಲೆಮಾರಿನ ಗೇಮರುಗಳಿಗಾಗಿ ಮಾರ್ಗದರ್ಶನ ಮತ್ತು ತರಬೇತಿಯೊಂದಿಗೆ ದಾರಿ ಮಾಡಿಕೊಡುತ್ತದೆ ”ಎಂದು ಬಿಸಿನೆಸ್ ಗ್ರೂಪ್, ಆ್ಯಸೂಸ್ ಇಂಡಿಯಾದ ಸಿಸ್ಟಮ್ ಮತ್ತು ಕನ್ಸ್ಯೂಮರ್, ಗೇಮಿಂಗ್ ಪಿಸಿ, ಸಿಸ್ಟಮ್ ಗಳ ಬ್ಯುಸಿನೆಸ್ ಹೆಡ್ ಅರ್ನಾಲ್ಡ್ ಸು ಅಭಿಪ್ರಾಯ ಪಟ್ಟಿದ್ದಾರೆ.
ಓದಿ : ಮ್ಯಾನ್ಮಾರ್ ದಂಗೆ : ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಎತ್ತಿಹಿಡಿಯಬೇಕು’: ಎಂಇಎ