Advertisement

ಬರಿಗಣ್ಣಿನಿಂದ ಸೂರ್ಯನನ್ನೇ ಹತ್ತು ನಿಮಿಷ ದಿಟ್ಟಿಸಿ ನೋಡಿ ವಿಶ್ವದಾಖಲೆ

02:10 AM Jan 21, 2019 | |

ಬೆಳಗಾವಿ: ಮಧ್ಯಾಹ್ನದ ಹೊತ್ತಿನಲ್ಲಿ ಬರಿಗಣ್ಣಿನಿಂದ ಸೂರ್ಯನನ್ನು ಸುಮಾರು 10 ನಿಮಿಷಗಳ ಕಾಲ ದಿಟ್ಟಿಸಿ ನೋಡುವ ಮೂಲಕ ಬೆಳಗಾವಿ ಭಾಗ್ಯ ನಗರದ ನಿವಾಸಿ, ತೆರಿಗೆ ಸಲಹೆಗಾರ ಪ್ರದೀಪ ಸಾಸನೆ ವಿಶ್ವದಾಖಲೆ ನಿರ್ಮಿಸಿದ್ದಾರೆ.

Advertisement

ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಗರದ ಲೇಲೇ ಮೈದಾನದಲ್ಲಿ ಎಲ್ಲರ ಸಮ್ಮುಖದಲ್ಲಿ ಪ್ರದೀಪ ಸಾಸನೆ ಅವರು ಬರಿಗಣ್ಣಿನಿಂದಲೇ ಸೂರ್ಯನನ್ನು ದಿಟ್ಟಿಸಿ ನೋಡಿದರು. ಸೂರ್ಯನ ಪ್ರಖರತೆ ಹೆಚ್ಚಾಗಿದ್ದರೂ ಸ್ವಲ್ಪವೂ ಕಣ್ಣು ಪಿಳಿಕಿಸದೆ ಅದ್ಭುತ ಸಾಹಸ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಪ್ರದೀಪ ನಿರಂತರ 10 ನಿಮಿಷಗಳ ಕಾಲ ಸೂರ್ಯನನ್ನೇ ನೋಡುತ್ತ ನಿಂತರು. ನೆರೆದವರು ಚಪ್ಪಾಳೆ ತಟ್ಟುವುದರ ಮೂಲಕ ಪ್ರದೀಪ ಅವರನ್ನು ಹುರಿದುಂಬಿಸಿದರು.

ಕೇವಲ ನಾಲ್ಕೆçದು ಸೆಕೆಂಡ್‌ ಸೂರ್ಯನನ್ನು ನೋಡಲು ಆಗುವುದಿಲ್ಲ. ಇಂಥದ್ದರಲ್ಲಿ ಸೂರ್ಯನನ್ನೇ
ಹೆಚ್ಚು ಹೊತ್ತು ನೋಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಮೊದ ಮೊದಲು 10 ಸೆಕೆಂಡ್‌ನಿಂದ ಆರಂಭಿಸಿ 1, 2,4 ನಿಮಿಷಗಳವರೆಗೆ ಹೆಚ್ಚಿಸುತ್ತ ಈಗ ಸತತ 10 ನಿಮಿಷಗಳವರೆಗೆ ಸೂರ್ಯನನ್ನು ನೋಡಿ ವಿಶ್ವ ದಾಖಲೆಯ ಬುಕ್‌ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ.

ಗಿನ್ನೆಸ್‌ ವರ್ಲ್ಡ್ ರೆಕಾರ್ಡ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಸ್ಥೆಯ ಭಾರತ ಘಟಕದ ಅಧ್ಯಕ್ಷ ಸಂತೋಷ ಶುಕ್ಲಾ, ಕೇಂದ್ರ ಸಂಸ್ಕೃತಿ ಸಚಿವಾಲಯದ ಭರತ ಶರ್ಮಾ, ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಉಪಮೆಯರ್‌ ಮಧುಶ್ರೀ ಪೂಜಾರಿ ಸೇರಿ ಇತರರು ಪ್ರದೀಪ ಅವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ನಿಪ್ಪಾಣಿ ಅಪ್ಪಾಚಿವಾಡಿಯಹಾಲಸಿದಟಛಿನಾಥ ದೇವಸ್ಥಾನದಲ್ಲಿ ಅನ್ನಪ್ರಸಾದ ಕೈಗೊಳ್ಳುತ್ತ ಬಂದಿದ್ದೇನೆ. 2015ರಲ್ಲಿ ಸೂರ್ಯ ನಮಸ್ಕಾರ ಮಾಡುವಾಗ ಸೂರ್ಯ ಉದಯಿಸುವಾಗ ನೋಡುವ ಹವ್ಯಾಸ ಬೆಳೆಸಿಕೊಂಡಿದ್ದೇನೆ.ಮುಂದಿನ ದಿನಗಳಲ್ಲಿ ಸುಮಾರು ಅರ್ಧ ಗಂಟೆವರೆಗೂ ಸೂರ್ಯನನ್ನು ನೋಡುವ ಗುರಿ ಇಟ್ಟುಕೊಂಡಿದ್ದೇನೆ.
● ಪ್ರದೀಪ ಸಾಸನೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next