Advertisement
ಇತ್ತೀಚಿನ ದಿನಗಳಲ್ಲಿ ನಾವು ಓಲಾ ಅಥವಾ ಊಬರ್ ಎಂಬ ಸಾರಿಗೆ ವ್ಯವಸ್ಥೆಯನ್ನು ನೋಡಿದ್ದೇವೆ. ಈ ಸೇವೆಯಡಿಯಲ್ಲಿ ನಾವು ಪ್ರಯಾಣಿಸಿದಲ್ಲಿ ಈ ಸೇವಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಅರಿವು ಬರುತ್ತದೆ. ಓಲಾ ಅಥವಾ ಊಬರ್ ಅಂತಹ ಸೇವಗಳ ಮೂಲ ಪರಿಕಲ್ಪನೆಯೇ ಬೇಡಿಕೆ (demand) ಮತ್ತು ಅಗತ್ಯತೆಗಳನ್ನು (need) ಪೂರೈಸುವುದು ಮತ್ತು ಅದರಿಂದ ಕಮಿಷನ್ ರೂಪದಲ್ಲಿ ಸೇವಾ ಶುಲ್ಕ ಪಡೆಯುವುದು.
Related Articles
Advertisement
ಇದು ಹೇಗೆ ಕಾರ್ಯ ನಿರ್ವಹಿಸುತ್ತವೆ?: ಯಾರಿಗಾದರೂ ತುರ್ತಾಗಿ 1 ಲಕ್ಷ ರೂ. ಸಾಲದ ಅಗತ್ಯವಿದ್ದಾಗ ಅವರು ನೇರವಾಗಿ ಕ್ಯಾಷ್ ಕುಮಾರ್‌ನ ವೆಬ್ ಸೈಟ್ ಗೆ ಲಾಗ್‌ಇನ್ ಆಗಬಹುದು.ಸಾಲ ಪಡೆಯಲು ಇಚ್ಛಿಸುವವರು ಸಾಲದ ಮೊತ್ತ, ಅಗತ್ಯತೆಗಳು, ವಿಳಾಸ, ಉದ್ಯೋಗ, ಆದಾಯ ಹಾಗೂ ಮುಂತಾದ ತಮ್ಮ ವಿವರಗಳನ್ನು ಪಿ2ಪಿ ಕಂಪನಿಯ ವೆಬ್‍ಸೈಟ್‍ನಲ್ಲಿ ನಮೂದಿಸಬೇಕು. ನಮೂದಿಸಿದ ಈ ವಿವರಗಳನ್ನು ಪಿ2ಪಿ ಕಂಪನಿಯು ಅತ್ಯಂತ ವೇಗವಾಗಿ ಬ್ಯಾಂಕ್ ಗಳಲ್ಲಿ ಪಾಲಿಸುವ ನಿಯಮದ ಪ್ರಕಾರವೇ ಪರಿಶೀಲಿಸುತ್ತದೆ. ಹಾಗೆಯೇ, ಸಾಲ ಕೊಡಲು ಬಯಸುವವರು ಹೂಡಿಕೆಯ ಮೊತ್ತ, ಬಯಸುವ ಬಡ್ಡಿ ಹಾಗೂ ತಮ್ಮ ಇತರೆ ವಿವರಗಳನು ನಮೂದಿಸಿ, ಹಣವನ್ನು ತಮ್ಮ ಪಿ2ಪಿ ಖಾತೆಯಲ್ಲಿ ಮುಂಗಡವಾಗಿ ಇಡಬೇಕು.
ಸಾಲ ನೀಡುವವರ ಮತ್ತು ಪಡೆದುಕೊಳ್ಳುವವರ ಅಗತ್ಯತೆಗಳು ಹೊಂದಾಣಿಕೆಯಾಗಿ, ಉಭಯ ಬಣಗಳು ಸಮ್ಮತಿಸಿದರೆ, ಸಾಲವನ್ನು ಸಾಲಗಾರರ ಬ್ಯಾಂಕ್ ಖಾತೆಗೆ ವರ್ಗಾವಣೆಮಾಡಲಾಗುತ್ತದೆ. ಹಾಗೂ ಕಂಪನಿ ಎರಡೂ ಕಡೆಗಳಿಂದ ನಿರ್ದಿಷ್ಟ ಕಮೀಶನ್ ಸ್ವೀಕರಿಸುತ್ತದೆ. ಹಣವನ್ನು ಹೂಡುವ ಮುನ್ನ ಹೂಡಿಕೆದಾರರು ಅಗತ್ಯವಾಗಿ ಎಚ್ಚರಿಕೆ ವಹಿಸಬೇಕು. ಆರ್.ಬಿ.ಐ ನಿಂದ ಪರವಾನಿಗೆ ಹೊಂದಿರುವ ಪೀ2ಪೀ ಕೊಂಪನಿಗಳಲ್ಲಿಯೇ ವ್ಯವಹರಿಸಬೇಕು. ಇದುವರೆಗೆ ಆರ್.ಬಿ.ಐ ಕ್ಯಾಷ್ ಕುಮಾರ್ ಸೇರಿ ಕೇವಲ 8-9 ಸಂಸ್ಥೆಗಳಿಗಷ್ಟೆ ಪರವಾನಿಗೆ ನೀಡಿದೆ.