Advertisement

ಈ ಹಳ್ಳಿ ಹುಡ್ಗಿ ಕಡೆ ಸ್ವಲ್ಪ ನೋಡೋ…

12:30 AM Jan 29, 2019 | |

ಮೊನ್ನೆ ಕಾಲೇಜು ಮುಗಿಸಿ ಹೊರಡೋವಾಗ, ಇಬ್ಬರೂ ಮುಖಾಮುಖಿಯಾದೆವು. ಇಬ್ಬರೂ ಒಂದೇ ಬಾರಿಗೆ ಕುವೆಂಪು ಪ್ರತಿಮೆಗೆ ನಮಸ್ಕರಿಸಿದೆವು. ಆ ಕ್ಷಣ ಅದೆಷ್ಟು ರೋಮಾಂಚನವಾಯ್ತು ಗೊತ್ತಾ? ಆ ದಿನ ನನ್ನ ಖುಷಿಗೆ ಲಿಮಿಟ್ಟೇ ಇರಲಿಲ್ಲ. 
 
ನಾನು ಎಂಥವಳೆಂದು ನಿನಗೆ ಗೊತ್ತಾ? ಜೀವನದಲ್ಲಿ ಓದುವುದೇ ಪರಮ ಗುರಿ ಅಂದುಕೊಂಡವಳು. ನಗರದ ಲೈಫ್ಸ್ಟೈಲ್‌ ಗೊತ್ತಿಲ್ಲದ ಹಳ್ಳಿ ಹುಡುಗಿ ನಾನು. ಆದರೆ, ಸಮಯ ಸಂದರ್ಭಕ್ಕೆ ಬದಲಾಗೋದನ್ನು ಕಲ್ತಿದ್ದೆ ಅಷ್ಟೆ. ಏನು ಮಾಡೋದು ಅನಿವಾರ್ಯ ಅಲ್ವಾ? ಆದರೆ, ಯಾವತ್ತೂ ಲವ್‌, ಕ್ರಶ್‌ ಅನ್ನೋ ಜಂಜಾಟಕ್ಕೆಲ್ಲಾ ಬಿದ್ದವಳಲ್ಲ. ನನ್ನದೇ ಲೋಕದಲ್ಲಿ ಸುಖವಾಗಿ ಇದ್ದವಳು ನಾನು.  

Advertisement

ನಮ್ಮ ಕುವೆಂಪು ವಿ.ವಿ. ಕ್ಯಾಂಪಸ್‌ನಲ್ಲಿ ಇರುವ ಕುವೆಂಪು ಪ್ರತಿಮೆಗೆ ಪ್ರತಿದಿನ ಕೈ ಮುಗಿಯುವವಳು ನಾನು. ಅವತ್ತೂ ಕೂಡ ಹಾಗೇ ಕೈ ಮುಗಿದು ಹೊರಟವಳಿಗೆ ಮಂಡಕ್ಕಿ ತಿನ್ನುವ ಆಸೆಯಾಯ್ತು. ಕ್ಯಾಂಪಸ್‌ನೊಳಗೇ ಇರುವ ಜಗ್ಗಣ್ಣನ ಕ್ಯಾಂಟೀನ್‌ಗೆ ನುಗ್ಗುವಷ್ಟರಲ್ಲಿ, ಜಡಿ ಮಳೆ! ಆಹಾ, ಈ ಮಳೆಗೂ ಬಿಸಿ ಮಿರ್ಚಿ ಮಂಡಕ್ಕಿಗೂ ಎಂಥ ಕಾಂಬಿನೇಷನ್‌ ಎಂದು ಬಾಯಲ್ಲಿ ನೀರೂರಿತು. ಅಷ್ಟರಲ್ಲಿ ದೊಡ್ಡ ಗುಂಪೊಂದು ಕ್ಯಾಂಟೀನ್‌ ಒಳಗೆ ಲಗ್ಗೆ ಇಟ್ಟಿತು. ಆ ಗುಂಪು, ಹುಡುಗಿಯರನ್ನ ಚುಡಾಯಿಸೋಕೇ ಕಾಲೇಜಿಗೆ ಬರೋದು ಅನ್ನುವಷ್ಟರ ಮಟ್ಟಿಗೆ ಫೇಮಸ್‌ ಆಗಿತ್ತು. ಆ ಗುಂಪು ಕಾಣಿಸಿದರೆ, ಹುಡುಗಿಯರೆಲ್ಲ ನಿಧಾನಕ್ಕೆ ಕಾಲ್ಕಿàಳುತ್ತಿದ್ದರು. 

ಆದರೆ, ಈ ವಿಷಯವೆಲ್ಲ ಅಷ್ಟಾಗಿ ನನಗೆ ಗೊತ್ತಿರಲಿಲ್ಲ. ಮತ್ತೆ, ಹಳ್ಳಿ ಹುಡುಗಿಯರಿಗೆ ಸ್ವಲ್ಪ ಧೈರ್ಯ ಕೂಡ ಜಾಸ್ತೀನೇ. ನನ್ನ ಪಾಡಿಗೆ ನಾನು ಮಂಡಕ್ಕಿ ಸವಿಯುತ್ತಾ, “ಇನ್ನೊಂದ್‌ ಪ್ಲೇಟ್‌ ಬೇಕು ಜಗ್ಗಣ್ಣ’ ಎಂದು ಕುಳಿತಲ್ಲಿಂದಲೇ ಕೂಗಿದೆ. ಅಲ್ಲೇ ಇದ್ದ ಹುಡುಗರು “ಓ’ ಎಂದು ಕೂಗಿ, ನಗಲು ಶುರು ಮಾಡಿದರು. ನನಗೆ ಮುಜುಗರವಾಗಿ, ಅಲ್ಲಿಂದ ಹೊರಟುಬಿಟ್ಟೆ. ಅವರಲ್ಲೊಬ್ಬ ಮಾತ್ರ ನನ್ನ ಮುಜುಗರದ ಮನಸ್ಸಿಗೆ ಸ್ಪಂದಿಸಿ, ಉಳಿದವರಿಗೆ “ಏಯ್‌ ಸುಮ್ನಿರೊ ಪಾಪ ಹುಡುಗಿ’ ಅಂದಿದ್ದು ಕೇಳಿಸಿತು. ತಿರುಗಿ ನೋಡಿದರೆ, ನೀನು ನಿಂತಿದ್ದೆ. ಒಂದೇ ಕ್ಷಣದಲ್ಲಿ ಈ ಹಳ್ಳಿ ಹುಡ್ಗಿ ಮನ್ಸಲ್ಲಿ ಸಿಂಪಲ್‌ ಆಗಿ ಕ್ರಶ್‌ ಆಗೋಯ್ತು!

ನೀನು ನೋಡೋಕೆ ನಂ ಸುದೀಪ್‌ ಹೈಟ್‌ ಇಲ್ಲ, ದರ್ಶನ್‌ ಕಲರ್‌ ಇಲ್ಲ. ಗುಂಪಿನಲ್ಲಿ ಸಾಧಾರಣವಾಗಿ ಕಾಣೋ ಹುಡುಗ. ಆದರೂ, ಅವತ್ತು ಆ ಗುಂಪಿನಲ್ಲಿ ಎಲ್ಲರಿಗಿಂತ ನೀನು ವಿಭಿನ್ನ, ವಿಶಿಷ್ಟ ಅನ್ನಿಸಿತು. ನಿನ್ನ ಮುಖದಲ್ಲೇನೋ ಕಳೆ, ಹಲ್ಲುಗಳ್ಳೋ ದಾಳಿಂಬೆ ಕಾಳುಗಳೇ! ಹೋ, ಇವನಿದ್ದರೆ ನಮ್‌ ಮನೆಗೆ ಬಲೆºà ಬೇಡ ಅಂತ ನಗುತ್ತಾ ಹಾಸ್ಟೆಲ್‌ಗೆ ಹೋದೆ.

ಅವತ್ತೆಲ್ಲಾ ಬರೀ ನಿನ್ನದೇ ನೆನಪು. ಅದೇನ್‌ ಆಕಸ್ಮಿಕಾನೋ ಗೊತ್ತಿಲ್ಲ ಮರುದಿನವೂ ನಿನ್ನ ದರ್ಶನ ಭಾಗ್ಯ ಸಿಕ್ಕಿತು. ಅಂದಿನಿಂದ ಪಂಪ ವನ, ಗ್ರಂಥಾಲಯ, ಗ್ರೀನ್‌ ಲೈಬ್ರರಿ, ಕ್ಯಾಂಟೀನ್‌…. ಎಲ್ಲೆಲ್ಲೂ ನೀನೇ! ಆದರೆ, ಕಣ್ಮುಚ್ಚಿ ಬಿಡುವಷ್ಟರಲ್ಲಿ ಮಿಂಚಿನಂತೆ ಮಾಯವಾಗಿ ಬಿಡ್ತಿದ್ದೆ. ಮೊನ್ನೆ ಕಾಲೇಜು ಮುಗಿಸಿ ಹೊರಡೋವಾಗ, ಇಬ್ಬರೂ ಮುಖಾಮುಖೀಯಾದೆವು. ಇಬ್ಬರೂ ಒಂದೇ ಬಾರಿಗೆ ಕುವೆಂಪು ಪ್ರತಿಮೆಗೆ ನಮಸ್ಕರಿಸಿದೆವು. ಆ ಕ್ಷಣ ಅದೆಷ್ಟು ರೋಮಾಂಚನವಾಯ್ತು ಗೊತ್ತಾ? ಆ ದಿನ ನನ್ನ ಖುಷಿಗೆ ಲಿಮಿಟ್ಟೇ ಇರಲಿಲ್ಲ. 

Advertisement

ನೀನಂದ್ರೆ ನನಗಿಷ್ಟ ಕಣೋ. ಹೇಗೆ ಹೇಳಲಿ ಅದನ್ನ? ನೀನಂತೂ ನನ್ನ ಕಡೆಗೆ ನೋಡೋದೇ ಇಲ್ಲ. ಹೇ ಹುಡುಗ, ಈ ಹಳ್ಳಿ ಹುಡ್ಗಿ ಕಡೆ ಸ್ವಲ್ಪ ನೋಡಪ್ಪಾ…!

ರಮ್ಯಾ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next