Advertisement
ಹೌದು, 2021 ಆರ್ಥಿಕ ವರ್ಷದಲ್ಲಿ ಒಟ್ಟು ಕಾರು ಮಾರಾಟದ ಸಂಖ್ಯೆ 1,36,869 ಕ್ಕೆ ತಲುಪಿದ್ದು, ಎನ್‌ಸಿಆರ್ ಪ್ರದೇಶವು ಅಂಗ್ರ ಪಂಕ್ತಿಯಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿ 1, 28. 907 ಕಾರುಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದ್ದರೇ, ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
Related Articles
Advertisement
ಇನ್ನು, ದೇಶದ ಪ್ರಮುಖ ನಗರಗಳು ಯುಟಿಲಿಟಿ ವಾಹನಗಳು, ಪ್ರೀಮಿಯಂ ಸೆಡಾನ್ ಗಳು ಮತ್ತು ಐಷಾರಾಮಿ ಹ್ಯಾಚ್‌ಬ್ಯಾಕ್‌ಗಳಿಗೆ ಗರಿಷ್ಠ ಬೇಡಿಕೆಯನ್ನು ಉಂಟುಮಾಡುತ್ತವೆ ಎಂದು autopunditz.com ವರದಿ ತಿಳಿಸಿದೆ.
2021 ರ ಆರ್ಥಿಕ ವರ್ಷದಲ್ಲಿ ಒಟ್ಟು ಕಾರು ಮಾರಾಟದ ಸಂಖ್ಯೆ 1,36,869 ಕ್ಕೆ ತಲುಪಿದ್ದು, ಎನ್ ಸಿ ಆರ್ ಪ್ರದೇಶವು ಈ ವಿಷಯದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ರಾಷ್ಟ್ರ ರಾಜಧಾನಿ ಕಾರು ಮಾರಾಟದಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದರೇ, ಈ ಭಾರಿ ರಾಜಧಾನಿ ನವದೆಹಲಿಯು 1,28,907 ಮಾರಾಟದೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಎನ್ ಸಿ ಆರ್ ಪ್ರದೇಶವು ನವದೆಹಲಿಯನ್ನು ಹಿಂದಿಕ್ಕಿ ಮೊದಲನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರು ಕಾರು ಮಾರಾಟದ ವಿಚಾರದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಓದಿ : ಐಪಿಎಲ್ ಬೆಟ್ಟಿಂಗ್ ದಂಧೆ : 6 ಆರೋಪಿಗಳ ಬಂಧನ