Advertisement

ಪಾಕ್‌ ವಿರುದ್ಧದ 1971ರ ಲೋಂಗೇವಾಲಾ ಸಮರದ ಹೀರೋ ವಿಧಿವಶ

05:12 PM Nov 17, 2018 | udayavani editorial |

ಚಂಡೀಗಢ : 1971ರಲ್ಲಿ ಪಾಕಿಸ್ಥಾನದ ವಿರುದ್ಧ ನಡೆದಿದ್ದ ಲೋಂಗೇವಾಲಾ ಸಮರದಲ್ಲಿ ಎಂಟೆದೆಯ ಹೀರೋ ಆಗಿ ಮೂಡಿ ಬಂದಿದ್ದ ಬ್ರಿಗೇಡಿಯರ್‌ (ನಿವೃತ್ತ) ಕುಲದೀಪ್‌ ಸಿ,ಗ್‌ ಚಾಂದ್‌ಪುರಿ ಅವರು ತಮ್ಮ 78ರ ಹರೆಯದಲ್ಲಿ ಇಂದು ಶನಿವಾರ ನಿಧನ ಹೊಂದಿದರು. 

Advertisement

ಕ್ಯಾನ್ಸರ್‌ ಪೀಡಿತರಾಗಿದ್ದ ಬ್ರಿಗೇಡಿಯರ್‌ ಚಾಂದ್‌ಪುರಿ ಅವರು ಇಂದು ನಸುಕಿನ ವೇಳೆ ನಗರದ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು. ಅವರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ. 

ಬ್ರಿಗೇಡಿಯರ್‌ ಚಾಂದ್‌ಪುರಿ ಅವರು 1962ರಲ್ಲಿ ಭಾರತೀಯ ಸೇನೆಯನ್ನು ಸೇರಿಕೊಂಡಿದ್ದರು. ಅವರನ್ನು ಪಂಜಾಬ್‌ ರೆಜಿಮೆಂಟ್‌ನ 23ನೇ ಬೆಟಾಲಿಯನ್‌ಗೆ ನಿಯೋಜಿಸಲಾಗಿತ್ತು. ವಿಶ್ವಸಂಸ್ಥೆಯ ಹಲವಾರು ಶಾಂತಿ ಪಡೆ ಅಭಿಯಾನದಲ್ಲಿ ದುಡಿದಿದ್ದ ಅವರು 1971ರಲ್ಲಿ ನಡೆದಿದ್ದ ಪಾಕ್‌ ವಿರುದ್ಧದ ಸಮರದಲ್ಲಿ ಲೋಂಗೇವಾಲಾ ಠಾಣೆಯನ್ನು ಎಂಟೆದೆಯ ಸಾಹಸದ ಹೋರಾಟದಲ್ಲಿ ಬೃಹತ್‌ ಸಂಖ್ಯೆಯಲ್ಲಿದ್ದ  ಶತ್ರುಗಳ ವಶವಾಗದಂತೆ ಯಶಸ್ವಿಯಾಗಿ ರಕ್ಷಿಸಿದ್ದರು. 

ಇವರ ಅಪ್ರತಿಮ ಹೋರಾಟದ ಕಥೆಯನ್ನು ಆಧರಿಸಿ “ಬಾರ್ಡರ್‌’ ಹಿಂದಿ ಸಿನೇಮಾ ಮಾಡಲಾಗಿತ್ತು. ಅದರಲ್ಲಿ ಸನ್ನಿ ದೇವಲ್‌ ಅವರು ಬ್ರಿಗೇಡಿಯರ್‌ ಚಾಂದ್‌ಪುರಿ ಪಾತ್ರವನ್ನು ನಿರ್ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next