Advertisement
ಈ ಉಗ್ರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಈ ಮೊದಲು ಐದು ಎಂದು ಹೇಳಲಾಗಿತ್ತು. ಇದೀಗ ಮೃತರ ಸಂಖ್ಯೆ ಮೂರು ಎಂದು ತಿಳಿಸಲಾಗಿದೆ.
Related Articles
Advertisement
ಅಂತಾರಾಷ್ಟ್ರೀಯ ಭಯೋತ್ಪಾದನೆಯಿಂದ ಪ್ರೇರಿತನಾದ ಶಂಕಿತ ಭಯೋತ್ಪಾದಕನು ಸಂಸತ್ ಭವನದ ಬಳಿಯ ಸೇತುವೆ ಮೇಲೆ ಪಾದಚಾರಿಗಳನ್ನು ಇರಿದು ಗಾಯಗೊಳಿಸಿ ಬಳಿಕ ಸಂಸತ್ ಸಂಕೀರ್ಣ ಸಮೀಪ ಪೊಲೀಸ್ ಅಧಿಕಾರಿಯೋರ್ವರನ್ನು ಇರಿದು ಕೊಂದು ಬಳಿಕ ಸ್ಕಾಟ್ಲಂಡ್ ಯಾರ್ಡ್ ಅಧಿಕಾರಿಗಳ ಗುಂಡೇಟಿಗೆ ಹತನಾಗಿದ್ದ.
ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರು ಈ ಭಯೋತ್ಪಾದನೆ ಕೃತ್ಯವನ್ನು ಅತ್ಯುಗ್ರವಾಗಿ ಖಂಡಿಸಿದ್ದು ಇದು ವಿಕ್ಷಿಪ್ತ ಮನಸ್ಸಿನ ವ್ಯಕ್ತಿಯ ಅನೀತಿಯುತ ಕೃತ್ಯವಾಗಿದೆ ಎಂದು ಹೇಳಿದ್ದಾರೆ. ಉಗ್ರ ದಾಳಿ ನಡೆದ ತಾಣವು ಆಕಸ್ಮಿಕವಾದುದಲ್ಲ; ಉದ್ದೇಶಪೂರ್ವಕವಾದದ್ದು ಎಂದು ಮೇ ಅವರು 10 ಡೌನಿಂಗ್ ಸ್ಟ್ರೀಟ್‌ನಲ್ಲಿನ ತಮ್ಮ ಕಾರ್ಯಾಲಯದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಹೇಳಿದ್ದಾರೆ.
ಉಗ್ರ ದಾಳಿ ನಡೆದಿದ್ದ ವೇಳೆ ಬ್ರಿಟನ್ ಸಂಸತ್ತಿನ ಕೆಳಮನೆಯಾಗಿರುವ ಹೌಸ್ ಆಫ್ ಕಾಮನ್ಸ್ ಕಲಾಪನಿರತವಾಗಿತ್ತು. ದಾಳಿ ಸುದ್ದಿ ತಿಳಿದೊಡನೆಯೇ ಕಲಾಪವನ್ನು ಅಮಾನತುಗೊಳಿಸಿ ಸಂಸದರನ್ನು ಸಂಸತ್ತಿನೊಳಗೇ ಹಲವು ತಾಸುಗಳ ಕಾಲ ಉಳಿದುಕೊಳ್ಳುವಂತೆ ಕೇಳಿಕೊಳ್ಳಲಾಯಿತು.
ಇಂದು ಗುರುವಾರ ಎಂದಿನಂತೆ ಬ್ರಿಟನ್ ಸಂಸತ್ ಕಲಾಪ ನಡೆಯಲಿದೆ ಎಂದು ಪ್ರಧಾನಿ ಮೇ ಹೇಳಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಭಯೋತ್ಪಾದನ ಕೃತ್ಯವನ್ನು ಖಂಡಿಸಿದ್ದು ಬ್ರಿಟನ್ ಜನತೆಗೆ ನಮ್ಮ ಸಹಾನುಭೂತಿ, ಬೆಂಬಲ ಇದೆ ಎಂದು ಹೇಳಿದ್ದಾರೆ.