Advertisement

ಬೆಂಗಳೂರು ಮೂಲದ ಓಲಾ ಸಂಚಾರಕ್ಕೆ ಲಂಡನ್ ಸ್ಥಳೀಯಾಡಳಿತ ಅಡ್ಡಗಾಲು

04:01 PM Oct 07, 2020 | Nagendra Trasi |

ಲಂಡನ್‌: ಬೆಂಗಳೂರು ಮೂಲದ ಓಲಾ ಟ್ಯಾಕ್ಸಿ ಕಂಪನಿಗೆ ಲಂಡನ್‌ನಲ್ಲಿ ಸೇವೆಯನ್ನು ಮುಂದುವರಿಸಲು ಅಲ್ಲಿನ ಸ್ಥಳೀಯಾಡಳಿತ ಅಡ್ಡಗಾಲು ಹಾಕಿದೆ. ಓಲಾಕಾರ್ಯವ್ಯವಸ್ಥೆ ಯಲ್ಲಿ ಪ್ರಯಾಣಿಕರ ಸುರಕ್ಷತೆ ಕುರಿತಂತೆ ಕೆಲ ನ್ಯೂನತೆಗಳಿವೆ ಎಂಬ ಕಾರಣ ಹೇಳಿ, ಲಂಡನ್‌ನ ಸಾರ್ವಜನಿಕ ಸಾರಿಗೆ ಸಂಸ್ಥೆ (ಟಿಎಫ್ಎಲ್‌) ಓಲಾದ ಟ್ಯಾಕ್ಸಿ ಸೇವಾ ಲೈಸನ್ಸ್‌ ನವೀಕರಣ ಮಾಡಲು ನಿರಾಕರಿಸಿದೆ. ಇಲಾಖೆಯ ತೀರ್ಮಾನದ ವಿರುದ್ಧ ಓಲಾ, ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದೆ.

Advertisement

ಆದೇಶ ಹೊರ ಬಂದ21 ದಿನಗಳೊಳಗಾಗಿ ನ್ಯಾಯಾಲಯ ದಲ್ಲಿ ಮನವಿ ಸಲ್ಲಿಸಲು ಅವಕಾಶವಿದೆ. ಈ ಬಗ್ಗೆ ಪ್ರತಿಕ್ರಿಯಿಸಿ ರುವ ಟಿಎಫ್ಎಲ್‌ ನಿರ್ದೇಶಕಿ ಹೆಲೆನ್‌ ಚಾಪ್ಟನ್‌, “ಲಂಡನ್‌ನಲ್ಲಿ ಓಲಾ ಕಂಪನಿಯಲ್ಲಿರುವ ಸುಮಾರು 1000ಕ್ಕೂ ಹೆಚ್ಚು ವಾಹನಗಳು ಹಾಗೂ ಹಲವಾರು ಚಾಲಕರು ಪರವಾನಗಿಯನ್ನೇ ಹೊಂದಿಲ್ಲದಿರುವುದು ತನಿಖೆಯಿಂದ ತಿಳಿದುಬಂದಿದ್ದು, ಆ ಹಿನ್ನೆಲೆಯಲ್ಲಿ ಲೈಸನ್ಸ್‌ ನವೀಕರಣ ನಿರಾಕರಿಸಲಾಗಿದೆ” ಎಂದಿದ್ದಾರೆ.

ಇಮ್ರಾನ್‌ಖಾನ್‌ಗೆ ವಿಪಕ್ಷಗಳ ಹೊಸ ಸವಾಲು
ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಸರ್ಕಾರದ ಪದಚ್ಯುತಿಯ ಗುರಿಯೊಂದಿಗೆ ಅಖಂಡವಾಗಿ ಒಗ್ಗೂಡಿರುವ ಆ ದೇಶದ 11 ವಿಪಕ್ಷಗಳು ತಮ್ಮ ಒಕ್ಕೂಟದ ಮುಖ್ಯಸ್ಥರನ್ನಾಗಿ ಪಾಕಿಸ್ತಾನ ಖ್ಯಾತ ಧರ್ಮಗುರು ಮೌಲಾನಾ ಫ‌ಝಲುರ್‌ ರೆಹಮಾನ್‌ ಅವರನ್ನು ನೇಮಿಸಿವೆ.

ಇಮ್ರಾನ್‌ರವರ ಅತ್ಯಂತ ಪರಿಣಾಮಕಾರಿ ಎದುರಾಳಿ ಎಂದೇ ಪರಿಗಣಿಸಲ್ಪಟ್ಟಿರುವ ರೆಹಮಾನ್‌,ಕಳೆದ ವರ್ಷ ಇಮ್ರಾನ್‌ ಸರ್ಕಾರದ ವಿರುದ್ಧ ಆಜಾದಿ
ಮಾರ್ಚ್‌ಹೆಸರಿನಲ್ಲಿ ಕರಾಚಿಯಿಂದಇಸ್ಲಾಮಾಬಾದ್‌ ವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದಾರೆ.

ಅಪಾರ ಜನಸ್ತೋಮದೊಂದಿಗೆ ಸಾಗಿದ್ದ ಈ ಪಾದಯಾತ್ರೆ ಯನ್ನು ಇಮ್ರಾನ್‌ ಸರ್ಕಾರ ಹತ್ತಿಕ್ಕುವಲ್ಲಿ ಸಫ‌ಲವಾಗಿ ತ್ತಾದರೂ, ಆ ವಿದ್ಯಮಾನ ಪಾಕಿಸ್ತಾನದ ರಾಜಕೀಯ ರಂಗದಲ್ಲಿ ರೆಹಮಾನ್‌ರವರ ಪ್ರಭಾವವನ್ನು ಅಗಾಧ ವಾಗಿ ಹೆಚ್ಚಿಸಿತ್ತು. ಆ ಹಿನ್ನೆಲೆಯಲ್ಲಿ, ವಿಪಕ್ಷಗಳ ಒಕ್ಕೂಟ ರೆಹಮಾನ್‌ರವರನ್ನೇ ತಂದು ತಮ್ಮ ಮುಖ್ಯಸ್ಥರನ್ನಾಗಿ  ಸಿವೆ. ಅಲ್ಲದೆ, ಇಮ್ರಾನ್‌ ಪದಚ್ಯುತಿಗೆ ಠಾರಾವನ್ನೂ ಮಂಡಿಸಿವೆ. ಇದು ಇಮ್ರಾನ್‌ ಸರ್ಕಾರಕ್ಕೆ ಎದುರಾಗಿ ರುವ ಅತಿ ದೊಡ್ಡ ಸವಾಲು ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next