Advertisement
15 ಮತಗಟ್ಟೆಗಳಲ್ಲಿ ವೀಡಿಯೋವಿಧಾನಸಭಾ ಕ್ಷೇತ್ರದಲ್ಲಿ 85 ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳನ್ನು ವಿಂಗಡಿಸಿ ಗುರುತು ಮಾಡಿದ್ದು, 35 ಮತಗಟ್ಟೆಗಳಲ್ಲಿ ಮೈಕ್ರೋ ಅಫೀಸರ್‌ಗಳನ್ನು ನೇಮಕ ಮಾಡಲಾಗಿದೆ. 17 ಕಡೆಗಳಲ್ಲಿ ನೇರವಾಗಿ ವೆಬ್ ಕಾಸ್ಟಿಂಗ್ ಸಿಸ್ಟಮ್ ವ್ಯವಸ್ಥೆ ಮಾಡಲಾಗಿದೆ. 15 ಮತಗಟ್ಟೆಗಳಲ್ಲಿ ಪೂರ್ಣ ಪ್ರಮಾಣದ ವೀಡಿಯೋ ಗ್ರಾಫರ್‌ಗಳನ್ನು ನೇಮಿಸ ಲಾಗಿದೆ ಎಂದು ಎಆರ್‌ಒ ಮಹೇಶ್ ಮಾಹಿತಿ ನೀಡಿದರು.
ಮತ ಚಲಾವಣೆಗೆ ಬರುವ ಅಂಗ ವಿಕಲರಿಗೆ ಮತಗಟ್ಟೆಗೆ ಬರಲು ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲಿರುವ ಸಿಬಂದಿಗೆ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಜತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
Related Articles
ರಾಜ್ಯ ಚುನಾವಣ ಪರಿವೀಕ್ಷಕ, ಜಿ.ಪಂ. ಸಿಇಒ ಡಾ| ಸೆಲ್ವಮಣಿ, ಚುನಾವಣಾಧಿಕಾರಿ ಎಸ್.ಸಿ. ಮಹೇಶ್, ತಹಶೀಲ್ದಾರ್ ಸಣ್ಣ ರಂಗಯ್ಯ ಮತ್ತು ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅವರು ಮಸ್ಟರಿಂಗ್ ಕಾರ್ಯ ನಡೆಯುತ್ತಿದ್ದ ಸಂದರ್ಭ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು.
Advertisement
“ಸಖಿ’ ಜನಸ್ನೇಹಿ ಮತದಾನ ಕೇಂದ್ರಅಮಾrಡಿ ಗ್ರಾಮದ ಲೊರೆಟ್ಟೋ ಖಾಸಗಿ ಹಿ. ಪ್ರಾ. ಶಾಲೆಯನ್ನು ಜನಸ್ನೇಹಿ ಮತದಾನ ಕೇಂದ್ರ ಸಖಿ ಎಂದು ಹೆಸರಿಸಿ ವಿಶೇಷವಾಗಿ ಶೃಂಗರಿಸಲಾಗಿದೆ. ಅಮಾrಡಿ ಗ್ರಾಮ ಮತ್ತು ಕೇಪು ಗ್ರಾಮದ ಸ.ಹಿ.ಪ್ರಾ. ಶಾಲೆಗಳನ್ನು ಜನಸ್ನೇಹಿ ಮತಗಟ್ಟೆಗಳಾಗಿ ಪರಿವರ್ತಿಸಲಾಗಿದೆ. ಕೇಪು ಗ್ರಾಮ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿದ್ದರೂ ಪುತ್ತೂರು ವಿಧಾನಸಭಾ ಕ್ಷೇತ್ರವಾಪ್ತಿಗೆ ಬರುವುದಾಗಿ ಸಹಾಯಕ ಚುನಾವಣಾಧಿಕಾರಿ
ಇ.ಒ. ರಾಜಣ್ಣ ತಿಳಿಸಿದ್ದಾರೆ. ಸಖಿ ಮತದಾನ ಕೇಂದ್ರದಲ್ಲಿ ಚುನಾವಣಾಧಿಕಾರಿ ಸಹಿತ ಎಲ್ಲರೂ ಮಹಿಳಾ ಸಿಬಂದಿ ಇರುತ್ತಾರೆ.