ಚೆನ್ನೈ: ಬಾಲಿವುಡ್ ನಟ, ಸದ್ಯ ಸಿನಿಮಾರಂಗದಲ್ಲಿ ಬಹುಬೇಡಿಕೆಯ ಖಳನಟನಾಗಿರುವ ಸಂಜಯ್ ದತ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಸಾವಿರಾರು ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಜೊತೆಗೆ ಅವರು ನಟಿಸಿರುವ ಸಿನಿಮಾ ತಂಡಗಳು ವಿಶೇಷ ಪೋಸ್ಟರ್ ಗಳನ್ನು ರಿವೀಲ್ ಮಾಡಿವೆ.
ಲೋಕೇಶ್ ಕನಕರಾಜ್ ಅವರ ʼಲಿಯೋʼ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಕಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ದಳಪತಿ ವಿಜಯ್ ಅವರ ಸಿನಿಮಾದಲ್ಲಿ ಖಳನಟನಾಗಿ ಸಂಜಯ್ ದತ್ ಅವರು ನಟಿಸಿದ್ದಾರೆ. ʼಕೆಜಿಎಫ್-2ʼ ನಲ್ಲಿ ʼಅಧೀರʼ ನ ಅವತಾರದಲ್ಲಿ ಮಿಂಚಿದ್ದ ಸಂಜಯ್ ದತ್ ಅವರಿಗೆ ಆ ಬಳಿಕ ಖಳನಾಯಕನ ಪಾತ್ರಗಳು ಹುಡುಕಿಕೊಂಡು ಬಂದಿದೆ.
ಸಂಜಯ್ ದತ್ ಹುಟ್ಟುಹಬ್ಬಕ್ಕೆ ʼಲಿಯೋʼ ಸಿನಿಮಾ ತಂಡ ಸ್ಪೆಷೆಲ್ ಗ್ಲಿಂಪ್ಸ್ ರಿವೀಲ್ ಮಾಡಿದೆ. “ಆ್ಯಂಟನಿ ದಾಸ್” ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳಲಿದ್ದಾರೆ. ತನ್ನ ಜನರ ಎದುರು ಮಾಸ್ ಆಗಿ ಕಾಣಿಸಿಕೊಂಡಿರುವ ಅವರು, ಸಿಗರೇಟ್ ಎಳೆದು ಫೋನಿನಲ್ಲಿ ಮಾತನಾಡಿಕೊಂಡು ಹೋಗಿರುವ ದೃಶ್ಯದ ಗ್ಲಿಂಪ್ಸ್ ರಿಲೀಸ್ ಮಾಡುವ ಮೂಲಕ ನಿರ್ದೇಶಕ ಕನಕರಾಜ್ ನಟನಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.
ಇದನ್ನೂ ಓದಿ: “Pushpa 2” ಡ್ಯಾನ್ಸ್ ನಂಬರ್‌ನಲ್ಲಿ ಸೊಂಟ ಬಳುಕಿಸಲಿದ್ದಾರ ಸೌತ್ ಚೆಲುವೆ ಶ್ರೀಲೀಲಾ?
ಸಂಜಯ್ ದತ್ ಅವರ ʼಆ್ಯಂಟನಿ ದಾಸ್ʼ ಲುಕ್ ನೋಡಿ ʼಲಿಯೋʼ ಸಿನಿಮಾಕ್ಕಾಗಿ ಕಾಯುತ್ತಿರುವ ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರ ಲುಕ್ ನಲ್ಲಿ ಬರುವ ಬಿಜಿಎಂ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಿನಿಮಾದಲ್ಲಿನ ಖಳನಾಯಕನ ಲುಕ್ ರಿವೀಲ್ ನಿಂದ ʼಲಿಯೋʼ ಬಗೆಗಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ʼಲಿಯೋʼ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಅವರು ಮ್ಯೂಸಿಕ್ ನೀಡಿದ್ದು, ನಟಿ ತ್ರಿಷಾ ಕೃಷ್ಣನ್ 14 ವರ್ಷಗಳ ಬಳಿಕ ವಿಜಯ್ ಅವರ ಜೊತೆಯಾಗಿ ನಟಿಸಿದ್ದಾರೆ. ಸಂಜಯ್ ದತ್ ,ಅರ್ಜುನ್, ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಗೌತಮ್ ಮೆನನ್, ಪ್ರಿಯಾ ಆನಂದ್, ಮ್ಯಾಥ್ಯೂ ಥಾಮಸ್, ಸ್ಯಾಂಡಿ ಮಾಸ್ಟರ್ ಮುಂತಾದ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.
ಇದೇ ವರ್ಷದ ಅಕ್ಟೋಬರ್ 19 ರಂದು ಸಿನಿಮಾ ತೆರೆಗೆ ಬರಲಿದೆ.