Advertisement

Kalaburagi: ಅಡುಗೆ ಸಹಾಯಕನಿಂದ ಲಂಚ… ಹಾಸ್ಟೆಲ್ ವಾರ್ಡನ್ ಲೋಕಾಯುಕ್ತ ಬಲೆಗೆ

09:23 AM Sep 13, 2024 | Team Udayavani |

ಕಲಬುರಗಿ: ಹಾಸ್ಟೆಲ್ ದಲ್ಲಿ ಹಾಜರಾತಿ ಹಾಕಲು ಅಡುಗೆ ಸಹಾಯಕರಿಂದ 15 ಸಾವಿರ ರೂ ಲಂಚ ಪಡೆಯುವಾಗ ಲೋಕಾಯುಕ್ತರು ಬಲೆ ಬೀಸಿದ್ದಾರೆ.

Advertisement

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಇಲ್ಲಿನ ಕಲಬುರಗಿ ವಿಶ್ವ ವಿದ್ಯಾಲಯ ಮೆಟ್ರಿಕ್ ನಂತರ ಸ್ನಾತಕೋತರ ಬಾಲಕರ ವಸತಿ ನಿಲಯದ ಹಾಸ್ಟೆಲ್ ವಾರ್ಡನ್ ಶಿವಶರಣಪ್ಪ 20 ಸಾವಿರ ರೂ ಲಂಚ ಬೇಡಿಕೆ ಇಟ್ಟು 15 ಸಾವಿರ ರೂ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಡುಗೆ ಸಹಾಯಕ ಶ್ರೀಮಂತ ಎನ್ನುವರು ದೂರು ನೀಡಿದ್ದಾರೆ.

ಹಾಸ್ಟೆಲ್ ವಾರ್ಡನ್ ಅಡುಗೆ ಸಹಾಯಕರಿಗೆ ಹಾಜರಾತಿಯನ್ನು ಪ್ರತಿ ತಿಂಗಳ ನೀಡಬೇಕಾದರೆ. ಎಲ್ಲಾ ಅಡುಗೆ ಸಹಾಯಕರಿಗೆ ಪ್ರತಿ ತಿಂಗಳ 20.000/-ಹಣವನ್ನು ಕೊಡಬೇಕು. ಹಣ ಕೊಡಲಿಲ್ಲ ಅಂದರೆ. ಹಾಜರಾತಿ ಕೊಡುವುದಿಲ್ಲ. ಮತ್ತು ಸಂಬಳ ಮಾಡಲ್ಲ? ಎಂದು ಬೆದರಿಕೆ. ಬೇಸತ್ತು ಲೋಕಾಯುಕ್ತರಿಗೆ ದೂರು ನೀಡಲಾಗಿದೆ.

ಲಂಚದ ಹಣ ಪಡೆಯುವಾಗ ಹಾಸ್ಟೆಲ್ ವಾರ್ಡನನ್ನು ವಶಕ್ಕೆ ಪಡೆಯಲಾಗುದೆ. ಲೋಕಾಯುಕ್ತ ಡಿವೈಎಸ್ಪಿ ಗೀತಾ ಬೆನಾಳ ಹಾಗೂ ತಂಡದಿಂದ ದಾಳಿ.

ಇದನ್ನೂ ಓದಿ: Sagara: ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ವಿದೇಶಿ ಪ್ರವಾಸಿಗರಿಂದ ಭರ್ಜರಿ ಸ್ಟೆಪ್

Advertisement
Advertisement

Udayavani is now on Telegram. Click here to join our channel and stay updated with the latest news.