Advertisement
ಭೇಟಿ ನೀಡುವ ಖಾಸಗಿ ಶಾಲೆಗಳಲ್ಲಿ ಮಕ್ಕಳ ಶಿಕ್ಷಣ ನೀತಿ-2016ರ ಅನ್ವಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿಯೇ? ಇಲ್ಲವೇ? ಮಕ್ಕಳ ಸುರಕ್ಷಾ ಸಮಿತಿ ರಚನೆಯಾಗಿಯೇ? ಮಕ್ಕಳ ಭದ್ರತೆ ಬಗ್ಗೆ ಶಾಲೆಗಳ ಕ್ರಮಗಳೇನು? ಹಾಗೂ ಶಾಲಾ ಸಿಬ್ಬಂದಿ ಹಿನ್ನೆಲೆ, ಶಾಲಾ ವಾಹನಗಳ ಸುರಕ್ಷತೆ ಸೇರಿ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಿ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ.
Related Articles
Advertisement
ಸರ್ಕಾರಿ ಶಾಲೆಗಳಲ್ಲೇ ಸಮಿತಿಯಿಲ್ಲ: ಬೆಂಗಳೂರು ಉತ್ತರ ಜಿಲ್ಲಾ ವ್ಯಾಪ್ತಿಯ ವಲಯ 1, ವಲಯ 2, ವಲಯ 3 ಹಾಗೂ ವಲಯ 4ರಲ್ಲಿ 1.477 ಖಾಸಗಿ ಅನುದಾನರಹಿತ ಶಾಲೆಗಳಿದ್ದು, ಈ ಪೈಕಿ ವಲಯ 4ರ ಎರಡು ಶಾಲೆಗಳು ಮಾತ್ರ ಮಕ್ಕಳ ರಕ್ಷಣಾ ಸಮಿತಿ ರಚನೆ ಮಾಡಿಕೊಂಡಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯ ವಲಯ 1, ವಲಯ 2, ವಲಯ 3, ವಲಯ 4 ಮತ್ತು ಆನೇಕಲ್ ತಾಲೂಕಿನಲ್ಲಿ 953 ಸರ್ಕಾರಿ, 309 ಅನುದಾನಿತ ಹಾಗೂ 2.231 ಅನುದಾನರಹಿತ ಸೇರಿ ಒಟ್ಟು 3.493 ಶಾಲೆಗಳಿವೆ. ಈ ಪೈಕಿ 3.179 ಶಾಲೆಗಳು ಸಮಿತಿ ರಚಿಸಿಕೊಂಡಿದ್ದು, ಆನೇಕಲ್‌ನ 36 ಸರ್ಕಾರಿ ಶಾಲೆಗಳಲ್ಲೇ ಮಕ್ಕಳ ರಕ್ಷಣಾ ಸಮಿತಿ ರಚಿಸಿಕೊಂಡಿಲ್ಲ ಎಂದು ವರದಿಯಲ್ಲೇ ಉಲ್ಲೇಖೀಸಲಾಗಿದೆ. 2018ರ ಜುಲೈ 2ರಂದು ‘ಉದಯವಾಣಿ’ ಪ್ರಕಟಿಸಿದ್ದ ವಿಶೇಷ ವರದಿ.
ರಾಜ್ಯದ ಎಲ್ಲ ಡಿಡಿಪಿಐಗಳಿಗೆ ಸೂಚನೆಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಮಾತ್ರವಲ್ಲದೆ, ರಾಜ್ಯದ ಎಲ್ಲ ಉಪ ನಿರ್ದೇಶಕರಿಗೂ ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ವಸ್ತುನಿಷ್ಠ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಪ್ರಮುಖವಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರತಿ ಶಾಲಾ ಮುಖ್ಯಸ್ಥರಿಂದ ಮಾಹಿತಿ ಪಡೆದು ಅಗತ್ಯ ಮಾರ್ಗದರ್ಶನ ನೀಡಬೇಕು ಮತ್ತು ಅನುಪಾಲನಾ ವರದಿ ಸಲ್ಲಿಸಬೇಕು. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಇಲಾಖಾ ತರಬೇತಿಗಳನ್ನು ನೀಡುವ ಮಾದರಿಯಲ್ಲಿಯೇ ಖಾಸಗಿ ಶಾಲಾ ಶಿಕ್ಷಕರುಗಳಿಗೂ ಸಹ ಆಯಾ ಆಡಳಿತ ಮಂಡಳಿ ಯಿಂದ ತರಬೇತಿಗಳನ್ನು ಹಮ್ಮಿಕೊಳ್ಳುವಂತೆ ನಿರ್ದೇಶನ ನೀಡುವುದು, ಸರ್ಕಾರಿ ಶಾಲೆಗಳ ಎಸ್‌ಡಿಎಂ ಸಮಿತಿಗಳ ಕಾರ್ಯನಿರ್ವಹಣೆ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸುವುದು, ಖಾಸಗಿ ಶಾಲೆಗಳಲ್ಲಿ ಪೋಷಕ-ಶಿಕ್ಷಕ ಸಮಿತಿಯ ಸಭೆಯು ನಿಯಮಿತವಾಗಿ ನಡೆಯುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಪಾಲಿಸಿರುವ ಬಗ್ಗೆ ನಿಗದಿತ ನಮೂನೆಯಲ್ಲಿ ಮಾಹಿತಿ ಪಡೆದು ಖಾತ್ರಿ ಪಡಿಸಿಕೊಂಡು ವರದಿಯನ್ನು ಸಲ್ಲಿಸಬೇಕು ಎಂದು ಲೋಕಾಯುಕ್ತರು ಸೂಚಿಸಿದ್ದಾರೆ. ವರದಿಯಲ್ಲಿ ಏನಿರಬೇಕು?
•ಖಾಸಗಿ ಶಾಲೆಗಳಲ್ಲಿ ಮಕ್ಕಳ ಶಿಕ್ಷಣ ನೀತಿ-2016ರ ಅನ್ವಯ ಸುರಕ್ಷತಾ ಕ್ರಮಗಳ ಅನುಷ್ಠಾನವಾಗಿದೆಯೇ?
•ಮಕ್ಕಳ ಸುರಕ್ಷಾ ಸಮಿತಿ ರಚನೆಯಾಗಿಯೇ?
•ಮಕ್ಕಳ ಭದ್ರತೆ ಕುರಿತಂತೆ ಶಾಲೆಗಳು ಕೈಗೊಂಡಿರುವ ಕ್ರಮಗಳೇನು?
•ಶಾಲಾ ಸಿಬ್ಬಂದಿ ಹಿನ್ನೆಲೆ, ಶಾಲಾ ವಾಹನಗಳ ಸುರಕ್ಷತೆ ಸೇರಿ ಪ್ರಮುಖ ಮಾಹಿತಿ ಸಂಗ್ರಹ ಮೋಹನ್ ಭದ್ರಾವತಿ